ಪ್ರತಿ ವರ್ಷ ಅಮೆರಿಕದಲ್ಲಿ ನಡೆಯುವ ನಾವಿಕ ಕಾರ್ಯಕ್ರಮಕ್ಕೆ ಈ ಬಾರಿ ರಮ್ಯಾ ಅತಿಥಿಯಾಗಿ ಹೋಗಿದ್ದರು. ಈ ಸಮಾರಂಭಕ್ಕೆ ರಮ್ಯಾ ಜೊತೆ ನಟ ವಿನಯ್ ರಾಜ್‌ಕುಮಾರ್ ಕೂಡ ಹೋಗಿದ್ದಾರೆ. ವಿಶೇಷ ಅಂದ್ರೆ ಇವರಿಗೆ ಪುನೀತ್ ರಾಜ್‌ಕುಮಾರ್ ಕಿರಿಯ ಪುತ್ರಿ ವಂದಿತಾ ಕೂಡ ಸಾಥ್ ಕೊಟ್ಟಿದ್ದಾರೆ.
ಅಮೆರಿಕದಲ್ಲಿ ಮೂವರೂ ಎಂಜಾಯ್ ಮಾಡ್ತಿರುವ ಫೋಟೋಗಳನ್ನ ರಮ್ಯಾ ಇದೀಗ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡ್ಕೊಂಡಿದ್ದಾರೆ. ಅದಕ್ಕೆ ಕ್ಯಾಪ್ಷನ್ ಹಾಕಿರುವ ರಮ್ಯಾ ‘ನಾನು ಹಾಗೂ ಬೆಸ್ಟ್ ಕಂಪನಿ’ ಎಂದು ವಿನಯ್ ರಾಜ್‌ಕುಮಾರ್ ಮತ್ತು ವಂದಿಯಾ ಪುನೀತ್ ರಾಜ್‌ಕುಮಾರ್ ಹೆಸರನ್ನು ಮೆನ್ಷನ್ ಮಾಡಿದ್ದಾರೆ.
ಅಮೆರಿಕದಲ್ಲಿ ತೆಗೆದಿರುವ ಒಂದಷ್ಟು ಕ್ಯಾಂಡಿಡ್ ಫೋಟೋಗಳನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ ರಮ್ಯಾ. ಇಲ್ಲಿ ಮೋಹಕತಾರೆ ಮೇಕಪ್ ಮಾಡಿಸಿಕೊಳ್ತಿರುವ ಫೋಟೋ ಸಮೇತ ಜಾಲಿ ಸಮಯದ ಹತ್ತಾರು ಫೋಟೋಗಳನ್ನ ಶೇರ್ ಮಾಡಿದ್ದಾರೆ. ರಮ್ಯಾ ಜೊತೆ ವಿನಯ್ ರಾಜ್‌ಕುಮಾರ್ ಹಲವು ಬಾರಿ ಪ್ರವಾಸ ಕೈಗೊಂಡಿರುವುದು ಗೊತ್ತಿರೋದೆ. ಆದರೆ ಈ ಬಾರಿ ರಮ್ಯಾ ಕಂಪನಿಗೆ ವಂದಿತಾ ಪುನೀತ್ ರಾಜ್‌ಕುಮಾರ್ ಸೇರಿಕೊಂಡಿರುವುದು ವಿಶೇಷ.
ಮೂವರು ಒಟ್ಟಾಗಿ ಜಾಲಿ ಮಾಡ್ತಿರೋದು ಬಹಳ ವಿಶೇಷ. ರಮ್ಯಾ ಪೋಸ್ಟ್‌ಗೆ ಅದಿತಿ ಪ್ರಭುದೇವ ಹಾಗೂ ಪ್ರಣಿತ ಇನ್ನಿತರ ತಾರೆಯರು ಪ್ರೀತಿಪೂರ್ವಕ ಇಮೋಜಿ ಕಳಿಸಿದ್ದಾರೆ. ಇನ್ನು ಕೆಲವರು ನೀವು ವಿನಯ್ ರಾಜ್‌ಕುಮಾರ್ ಜೊತೆ ಡೇಟ್ ಮಾಡುತ್ತಿದ್ದೀರಾ ಎಂದು ಕಾಮೆಂಟ್‌ನ್ನೂ ಹಾಕಿದ್ದಾರೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಮ್ಯಾ ಆಪ್ತರೊಂದಿಗೆ ಉತ್ತಮ ಸಮಯ ಕಳೆಯುತ್ತಿದ್ದಾರೆ.