ಗಂಧದಗುಡಿ ಚಿಕ್ಕಪ್ಪನ ಕನಸಿನ ಯೋಜನೆ, ಕರ್ನಾಟಕದ ವೈಭವವನ್ನು ತೋರುವುದು: ವಿನಯ್ ರಾಜ್‍ಕುಮಾರ್

Advertisements

ಬೆಂಗಳೂರು: ಸ್ಯಾಂಡಲ್‍ವುಡ್ ನಟ ದಿ. ಪುನೀತ್ ರಾಜ್‍ಕುಮಾರ್ ಅವರ ಕನಸಿನ ಪ್ರಾಜೆಕ್ಟ್ ಆಗಿರುವ ಗಂಧದಗುಡಿ ಸಾಕ್ಷಚಿತ್ರದ ಟೈಟಲ್ ಟೀಸರ್ ಬಿಡುಗಡೆಯಾಗಿದೆ. ಚಿಕ್ಕಪ್ಪ ಅಪ್ಪು ಕುರಿತಾಗಿ ವಿನಯ್ ರಾಜ್‍ಕುಮಾರ್ ಅವರು ಭಾವುಕವಾದ ಕೆಲವು ನುಡಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Advertisements

ಈ ಚಿತ್ರವು ಹಲವು ಕಾರಣಗಳಿಂದ ನನ್ನ ಹೃದಯಕ್ಕೆ ಹತ್ತಿರವಾಗಿದೆ. ಮೊದಲನೆಯದಾಗಿ ಇದು ಚಿಕ್ಕಪ್ಪನ ಕನಸಿನ ಯೋಜನೆಯಾಗಿ ಕರ್ನಾಟಕದ ವೈಭವವನ್ನು ತೋರುವುದು, ಪ್ರೀತಿಯ ಅಭಿಮಾನಿಗಳಿಗೆ ಈ ಚಿತ್ರದ ಮೂಲಕ ನಟನಾಗಿ ಅಥವಾ ಸೂಪರ್ ಸ್ಟಾರ್‌ ಆಗಿ ಅಲ್ಲದೆ, ಅವರದೇ ಆದ ವೈಯಕ್ತಿಕ ದೃಷ್ಟಿಕೋನವನ್ನು ನೀಡುವುದು. ಎರಡನೆಯದಾಗಿ, ಇದು ನೈಸರ್ಗಿಕ ಪ್ರಪಂಚ, ಅದರ ವಿಶೇಷತೆಗಳು ಮತ್ತು ಅದು ನಮಗೆ ಪ್ರತಿದಿನವು ಕಲಿಸುವ ಪಾಠಗಳ ಬಗ್ಗೆ. ಏಕೆಂದರೆ ಇದು ನನ್ನ ತಾತನಿಗೆ ತುಂಬಾ ಹತ್ತಿರವಿದ್ದ ವಿಷಯ, ಚಿಕ್ಕಪ್ಪ ಅವರಿಗೆ ಇತ್ತೀಚೆಗೆ ಬೆಳವಣಿಗೆಯಾದ ಆಸಕ್ತಿ, ಹಾಗೆಯೇ ನನ್ನ ಜೀವನದ ಉತ್ಸಾಹ ಕೂಡ. ಅಜ್ಜಿಯ ಜನ್ಮದಿನದಂದು, ಈ ಕನಸು ನನಸಾಗುತ್ತಿರುವುದು ನನಗೆ ತುಂಬಾ ಖುಷಿ. ಇದುವರೆಗೂ ಕಂಡಿರದ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಅನುಭವ ಗಂಧದ ಗುಡಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ ಎಂದು ವಿನಯ್ ರಾಜ್‍ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Advertisements

ಗಂಧದಗುಡಿ ಚರಿತ್ರೆಯನ್ನು ಮರುಕಳಿಸುವಂತಿದೆ ಈ ಗಂಧದಗುಡಿ ಟೀಸರ್ ಕರ್ನಾಟಕ ಅರಣ್ಯ ಸಂಪತ್ತಿನ ಮಾಹಿತಿಯನ್ನು ಮತ್ತು ಪ್ರಕೃತಿ ಸೌಂದರ್ಯದ ಬಗ್ಗೆ ಇರುವ ವಿಶೇಷ ಕಾಳಜಿಯ ಡಾಕ್ಯುಮೆಂಟರಿ ಇದಾಗಿದೆ. ಡಾ.ರಾಜ್‍ಕುಮಾರ್ ಹಾಗೂ ಶಿವರಾಜ್‍ಕುಮಾರ್ ಅವರು ಕೂಡ ಗಂಧದಗುಡಿ ಹೆಸರಿನಲ್ಲಿ ಸಿನಿಮಾ ಮಾಡಿದ್ದರು. ಅಣ್ಣಾವ್ರ ಗಂಧದಗುಡಿ ಸಿನಿಮಾ ದಾಖಲೆ ಸೃಷ್ಟಿಸಿತ್ತು. ಶಿವಣ್ಣ ಅವರ ಗಂಧದ ಗುಡಿ ಸಾಕಷ್ಟು ಹೆಸರು ಮಾಡಿತ್ತು. ಇದೀಗ ಅದೇ ಹೆಸರಿನಲ್ಲಿ ಅಪ್ಪು ಅವರ ಡಾಕ್ಯುಮೆಂಟರಿ ಚಿತ್ರ ಸಿದ್ಧವಾಗಿದೆ ಸಿನಿಮಾದಲ್ಲಿ ಪ್ರಾಣಿ, ಪರಿಸರ ಸಂರಕ್ಷಣೆಯ ಕುರಿತಾಗಿ ಸಂದೇಶವನ್ನು ಸಾರುವ ಸಿನಿಮಾವನ್ನು ಮಾಡಿದ್ದರು. ಇದೀಗ ತಂದೆ ಮತ್ತು ಅಣ್ಣನ ಹಾದಿಯಲ್ಲೇ ಅಪ್ಪು ಕೂಡಾ ಇದೇ ರೀತಿಯ ಪ್ರಯೋಗವನ್ನು ಮಾಡಲು ಮುಂದಾಗಿದ್ದಾರೆ. ಟೀಸರ್ ನೋಡಿದ ಅಭಿಮಾನಿಗಳು ಸಖತ್ ಖುಷಿಯಾಗಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನೂ ಓದಿ:  ರಾಜ್‌ ಕುಟುಂಬದಿಂದ ಗಂಧದಗುಡಿ‌ಯ 3ನೇ ಪ್ರಯೋಗ

Advertisements

ಟೀಸರ್‌ನಲ್ಲಿ ದಟ್ಟಕಾಡಿನ ನಡುವೆ ಪುನೀತ್ ರಾಜ್‍ಕುಮಾರ್ ಅವರು ಜರ್ನಿಯನ್ನು ಆರಂಭಿಸುತ್ತಾರೆ.  ಬೆಟ್ಟ, ಗುಡ್ಡ ಪ್ರಕೃತಿಯ ಸೌಂದರ್ಯದ ನಡುವೆ  ಆನೆ, ಹುಲಿ, ಹಾವು ಸುಮುದ್ರ, ನದಿ  ಹಾಗೂ ಇನ್ನಿತರ ಸುಂದರವಾದ ತಾಣಗಳ ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ಮನಸ್ಸಲ್ಲಿ ಅಚ್ಚಾಗಿ ಉಳಿಯುವಂತೆ ಅದ್ಭುತವಾಗಿ ಸೆರೆ ಹಿಡಿಯಲಾಗಿದೆ.  ಟೀಸರ್ ಕೊನೆಯಲ್ಲಿ  ರಾಜ್ ಕುಮಾರ್  ಅವರ ಧ್ವನಿಯಲ್ಲಿ ನಿನ್ನ ಕೈ ಮುಗಿಯುತ್ತೆನೆ ಅಭಯಾರಣ್ಯವನ್ನು ಉಳಿಸು, ಪ್ರಾಣಿಗಳನ್ನು ಉಳಿಸು ಎಂದು ಹೇಳುತ್ತಿರುವ ಸಂದೇಶದ ಸಾಲುಗಳನ್ನು ಕೇಳ ಬಹುದಾಗಿದೆ. ಇದನ್ನೂ ಓದಿ:  ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್

ಅಮೋಘವರ್ಷ ನಿರ್ದೇಶನದ ಡಾಕ್ಯುಮೆಂಟರಿ ಇದಾಗಿದೆ. ಸಾಮಾನ್ಯವಾಗಿ ಡಾಕ್ಯುಮೆಂಟರಿ ಸಿನಿಮಾಗಳನ್ನು ಥಿಯೇಟರ್‍ನಲ್ಲಿ ರಿಲೀಸ್ ಮಾಡುವುದು ಕಡಿಮೆ. ಆದರೆ ಅಪ್ಪು ಅವರ ಗಂಧದ ಗುಡಿ ಸಿನಿಮಾವನ್ನು ಚಿತ್ರಮಂದಿರದಲ್ಲೇ ರಿಲೀಸ್ ಆಗಲಿದ್ದು, ಮುಂದಿನ  ವರ್ಷ 2022ರಲ್ಲಿ ತೆರೆಕಾಣಲಿದೆ.

Advertisements
Exit mobile version