ಸಿದ್ಧಾರ್ಥ್, ರನ್ ಆಂಟನಿ ಸಿನಿಮಾಗಳಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ವಿನಯ್ ರಾಜ್ ಕುಮಾರ್ ಇದೀಗ ರಕ್ತ, ಲಾಂಗುಗಳಿಗೆ ಮೊರೆ ಹೋಗಿದ್ದಾರೆ. ಈಗಷ್ಟೇ ಪೆಪೆ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ರಗಡ್ ಲುಕ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ : ಈ ವರ್ಷ ಯಾರೆಲ್ಲ ನಟರು ನಿರ್ದೇಶನ ಮಾಡಲಿದ್ದಾರೆ ಗೊತ್ತಾ?
ಈ ಹಿಂದಿನ ಸಿನಿಮಾಗಳಲ್ಲಿ ಕ್ಯೂಟ್ ಲವರ್ ಬಾಯ್ ಆಗಿದ್ದ ದೊಡ್ಮನೆ ಕುಡಿ, ಏಕಾಏಕಿ ಗ್ಯಾಂಗ್ ಸ್ಟಾರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಕ್ಕೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಅವರದ್ದು ಯಾವ ರೀತಿಯ ಪಾತ್ರ ಎನ್ನುವ ಚರ್ಚೆ ಕೂಡ ನಡೆದಿದೆ. ಇದನ್ನು ಓದಿ : ಈ ವಾರ 10 ಚಿತ್ರಗಳು ರಿಲೀಸ್ : ಯಾವುದು ನೋಡ್ಬೇಕು, ಯಾವುದು ಬಿಡ್ಬೇಕು?
ಸದ್ಯ ಬಿಡುಗಡೆ ಆಗಿರುವ ಟೀಸರ್ ನೋಡಿದರೆ, ವಿನಯ್ ರಾಜ್ ಕುಮಾರ್ ಲವರ್ ಬಾಯ್ ಇಮೇಜಿಂದ ಹೊರ ಬಂದಿದ್ದು ಖಚಿತ. ಅದೊಂದು ಗ್ಯಾಂಗ್ ಸ್ಟಾರ್ ಮಾದರಿಯ ಪಾತ್ರವಾಗಿದ್ದರಿಂದ ಇಂತಹ ಲುಕ್ ಕೊಟ್ಟಿದೆಯಂತೆ ಚಿತ್ರತಂಡ. “ಆ ತೊರೆಗೊಂದು ಶಾಪ ಇದೆಯಂತೆ, ಅಲ್ಲಿ ಹರಿಯೋ ನೀರಿನ ಕೆಳಗೆ ರಾಕ್ಷಸನ ಕೈಯಿಂದ ಜಾರಿಬಿದ್ದ ಒಂದು ವಸ್ತು ಅದೇ ಅಂತೆ ಜೀವ” ಹೀಗೆ ಮಾಸ್ ಪಂಚಿಂಗ್ ಡೈಲಾಗ್ಗಳಿಂದ ಕೂಡಿರುವ ಪೆಪೆ ಟೀಸರ್ ಪಾತ್ರದ ಹಲವು ಹಿನ್ನೆಲೆಗಳನ್ನು ಹೇಳುತ್ತದೆ. ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ
ಶ್ರೀಲೇಶ್ ಎಸ್. ನಾಯರ್ ನಿರ್ದೇಶನದಲ್ಲಿ ಪೆಪೆ ಸಿನಿಮಾ ಮೂಡಿ ಬಂದಿದ್ದು, ಸಮರ್ಥ ಉಪಾಧ್ಯ ಅವರ ಸಿನಿಮಾಟೋಗ್ರಫಿ ಇದೆ. ಉದಯಶಂಕರ. ಎಸ್ ಈ ಸಿನಿಮಾದ ನಿರ್ಮಾಪಕರು.