ಚೆನ್ನೈ: ಆರ್ ಸಿ ಬಿ ವಿರುದ್ಧ ಕೊನೆಯ ಓವರ್ ನಲ್ಲಿ 9 ರನ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ 10 ರನ್ ಇದ್ದಾಗ ಪಂದ್ಯ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದೆ. ಈಗ ಟೀಕೆ ಮಾಡುತ್ತಿರುವವರು ಆಗ ಎಲ್ಲಿಗೆ ಹೋಗಿದ್ದೀರಿ ಎಂದು ವಿನಯ್ ಕುಮಾರ್ ಟ್ರೋಲ್ ಮಾಡೋ ಮಂದಿಯನ್ನು ಪ್ರಶ್ನಿಸಿದ್ದಾರೆ.
ಇದು ಕೇವಲ ಒಂದು ಪಂದ್ಯವಷ್ಟೇ. ಕೆಲವೊಮ್ಮೆ ಪರಿಸ್ಥಿತಿ ನಮ್ಮ ವಿರುದ್ಧವಾಗಿ ಹೋಗುತ್ತದೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ವಿನಯ್ ಕುಮಾರ್ ತಮ್ಮ ಪ್ರತಿಕ್ರಿಯೆ ನೀಡಿದ ಬಳಿಕ ಟ್ವೀಟ್ ಡಿಲೀಟ್ ಮಾಡಿದ್ದಾರೆ.
Advertisement
ಅಂತಿಮ ಓವರ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಗೆಲುವು ತಂದು ಕೊಡುವಲ್ಲಿ ವಿಫಲರಾದ ವಿನಯ್ ಕುಮಾರ್ ಅವರಿಗೆ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಗಿ ಧನ್ಯವಾದಗಳ ಸುರಿಮಳೆಯನ್ನು ಹರಿಸಿದ್ದಾರೆ. ಇನ್ನು ಕೆಲವರು ಟೀಕಾ ಪ್ರವಾಹವನ್ನೇ ಹರಿಸಿದ್ದಾರೆ.
Advertisement
ಚೆನ್ನೈನ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ಸಿಎಸ್‍ಕೆ ವಿರುದ್ಧ ಸೋಲನ್ನು ಕಂಡಿತ್ತು. ಗೆಲ್ಲಲು 202 ರನ್ನಿನ ಗುರಿಯನ್ನು ಬೆನ್ನು ಹತ್ತಿದ ಸಿಎಸ್‍ಕೆ ಗೆಲ್ಲುವಲ್ಲಿ ಸಫಲವಾಯಿತು.
Advertisement
ಕೊನೆಯ ಓವರ್ ನಲ್ಲಿ ಸಿಎಸ್‍ಕೆ ಗೆಲುವಿಗೆ 17 ರನ್‍ಗಳು ಬೇಕಿತ್ತು. ಓವರ್ ನ ಮೊದಲ ಎಸೆತವನ್ನು ಬ್ರಾವೋ ಸಿಕ್ಸರ್ ಗೆ ಅಟ್ಟಿದ್ದರು. ಅಷ್ಟೇ ಅಲ್ಲದೇ ಈ ಎಸೆತ ನೋಬಾಲ್ ಆಗಿತ್ತು. ಒಂದು ಎಸೆತ ಬಾಕಿ ಇದ್ದಾಗ ಜಡೇಜಾ ಸಿಕ್ಸರ್ ಗೆ ಬಾಲ್ ಅಟ್ಟಿ ಚೆನ್ನೈ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಈ ಓವರ್ ನಲ್ಲಿ ವಿನಯ್ ಕುಮಾರ್ 19 ರನ್ ಕೊಟ್ಟಿದ್ದು ಅಲ್ಲದೇ 1.5 ಓವರ್ ಎಸೆದು ಯಾವುದೇ ವಿಕೆಟ್ ಪಡೆಯದೇ 35 ರನ್ ಬಿಟ್ಟುಕೊಟ್ಟಿದ್ದರು.
Advertisement
No ball and wide in such a critical situation. Man this is not expected from experience cricketer like you. Please this is not at all acceptable…I was devastated to see we lose that game….sorry but only because of you..
— Rupesh Khirad (@rdk1600) April 12, 2018
@Vinay_Kumar_R is the most hated cricketer after Greg Chappel in Kolkata
— Soham Datta (@SohamDatta11) April 11, 2018
Andre Russel and Vinay Kumar after going into the dressing room #CSKvKKR pic.twitter.com/t9FKCze4hX
— Salman Abjani (@SalmanAbjani) April 10, 2018
Leaked footage of Vinay Kumar after the match. #CSKvKKR pic.twitter.com/q8ewIFazmf
— nikhil (@niquotein) April 11, 2018