ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಬಿಡುಗಡೆ ಆದ ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು ಮನೆಯಿಂದ ಹೊರ ಬರದೇ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ.
ನಿನ್ನೆ ಬೆಳಗಾವಿಯ ಹಿಂಡಲಗ ಜೈಲಿನಿಂದ ಬಿಡುಗಡೆಯಾದ ವಿನಯ್ ಕುಲಕರ್ಣಿ ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಬೆಂಗಳೂರಿನ ಭೂಪಸಂದ್ರದಲ್ಲಿ ಇರುವ ಮನೆಗೆ ಆಗಮಿಸಿದ್ದರು. ಇದನ್ನೂ ಓದಿ: ಜೈಲಿಗೆ ಬಂದು ಸಾಕಷ್ಟು ಓದುವುದನ್ನು ಕಲಿತೆ, ಇದು ನನ್ನ ಜೀವನದಲ್ಲಿ ಅತೀ ದೊಡ್ಡ ಬದಲಾವಣೆ: ವಿನಯ್ ಕುಲಕರ್ಣಿ
ಮನೆಯಲ್ಲೇ ವಿಶ್ರಾಂತಿ ಪಡೆದ ವಿನಯ್ ಕುಲಕರ್ಣಿ ಇಡೀ ದಿನ ಮನೆಯಿಂದ ಹೊರ ಬರಲಿಲ್ಲ. ಯಾರನ್ನೂ ಭೇಟಿ ಮಾಡಲಿಲ್ಲ. ವಿನಯ್ ಕುಲಕರ್ಣಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ಮಾಡುವ ಸಾಧ್ಯತೆ ಇತ್ತು. ಆದರೆ ಇಡೀ ದಿನ ಕುಟುಂಬದ ಜೊತೆ ಕಳೆದ ವಿನಯ್ ಕುಲಕರ್ಣಿ ಮನೆಯಿಂದ ಹೊರಗೆ ಬರದೇ, ಯಾರ ಭೇಟಿಯನ್ನು ಮಾಡಲ್ಲ ಎಂದು ತಮ್ಮ ಸಿಬ್ಬಂದಿಗೆ ತಿಳಿಸಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಇದನ್ನೂ ಓದಿ: ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ ಸಿಕ್ರೂ ಧಾರವಾಡ ಪ್ರವೇಶಿಸುವಂತಿಲ್ಲ!