ಧಾರವಾಡ/ಬೆಳಗಾವಿ: ಹನಿಟ್ರ‍್ಯಾಪ್ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುವ ಅಗತ್ಯವೇ ಇಲ್ಲ. ನಮ್ಮಲ್ಲೇ ಉತ್ತಮ ಅಧಿಕಾರಿಗಳಿದ್ದಾರೆ ಎಂದು ಶಾಸಕ ವಿನಯ್ ಕುಲಕರ್ಣಿ (Vinay Kulakarni) ಹೇಳಿದರು.
ಬೆಳಗಾವಿಯ (Belagavi) ಕಿತ್ತೂರಿನಲ್ಲಿ (Kittur) ಮಾತನಾಡಿದ ಅವರು, ನಮ್ಮ ರಾಜ್ಯದಲ್ಲೇ ಹನಿಟ್ರ‍್ಯಾಪ್ ಪ್ರಕರಣವನ್ನು ಬೇಧಿಸುವಂತಹ ದಕ್ಷ ಅಧಿಕಾರಿಗಳಿದ್ದಾರೆ. ಹನಿಟ್ರ‍್ಯಾಪ್ ಮಾಡುವುದು ರಾಜಕಾರಣದಲ್ಲಿ ಅತ್ಯಂತ ಕೀಳುಮಟ್ಟದ ಕೆಲಸ. ಅದನ್ನು ಎಂದಿಗೂ ಮಾಡಬಾರದು ಎಂದರು. ಇದನ್ನೂ ಓದಿ: ಸಾಕು ನಾಯಿ ದಾಳಿ – ಮಹಿಳೆಯ ಮುಖಕ್ಕೆ ಬಿತ್ತು 20 ಸ್ಟಿಚ್
ಫೋನ್ ಕದ್ದಾಲಿಕೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರೇ ಹೆಚ್ಚು ಫೋನ್ ಕದ್ದಾಲಿಕೆ ಮಾಡುತ್ತಾರೆ. ಇಂದಿಗೂ ಬಿಜೆಪಿಯರು ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ. ಆರ್.ಅಶೋಕ್ (R Ashok) ಅವರ ಫೋನ್ ಕದ್ದಾಲಿಕೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಪ್ರವಾಸದಲ್ಲಿದ್ದೆ ಎಂದು ತಿಳಿಸಿದರು. ಇದನ್ನೂ ಓದಿ: ಹನಿಟ್ರ್ಯಾಪ್ ಕೇಸ್ – ಪರಮೇಶ್ವರ್‌ಗೆ ದೂರು ನೀಡದೇ ಮನವಿ ಕೊಟ್ಟ ರಾಜಣ್ಣ
ಡಿ.ಕೆ.ಶಿವಕುಮಾರ್ (D K Shivakumar) ಅವರು ಸಂವಿಧಾನದ ಪರ ಇದ್ದವರು. ಅವರು ಸಂವಿಧಾನಕ್ಕೆ ಎಂದಿಗೂ ವಿರುದ್ಧ ಇಲ್ಲ. ಗಾಂಧಿ ಕಾರ್ಯಕ್ರಮದಲ್ಲಿ ಅವರು ಏನು ಮಾತನಾಡಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಅಂತವರು ಸಂವಿಧಾನ ಬದಲಿಸುವ ಮಾತು ಹೇಳುತ್ತಾರಾ? ಅದು ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರೀಲ್ಸ್ ವಿವಾದ: ನಮಗೆ ಪೊಲೀಸರ ದಿಕ್ಕು ತಪ್ಪಿಸೋ ಉದ್ದೇಶವಿಲ್ಲ ಎಂದ ವಿನಯ್ ಗೌಡ
ಶಾಸಕರಿಗೆ ಅನುದಾನದ ಕೊರತೆ ವಿಚಾರವಾಗಿ ಮಾತನಾಡಿ, ಬಜೆಟ್‌ನಲ್ಲಿ ಸ್ಪೆಷಲ್ ಗ್ರ‍್ಯಾಂಟ್ ಏನೂ ನಮಗೆ ಬಂದಿಲ್ಲ. ಇದನ್ನು ಸಿಎಂ ಜೊತೆ ನಾವು ಮಾತನಾಡುತ್ತೇವೆ. ಅವರೂ ಸಹ ನಮಗೆ ಹೆಚ್ಚು ಅನುದಾನ ಕೊಡುವ ಮಾತು ಹೇಳಿದ್ದಾರೆ. ನಮ್ಮ ಕಿತ್ತೂರು ಕರ್ನಾಟಕ ಭಾಗದ ಶಾಸಕರಿಗೆ ಹೆಚ್ಚಿನ ಅನುದಾನದ ಭರವಸೆ ಇದೆ. ಹೈದರಾಬಾದ್ ಕರ್ನಾಟಕದವರಿಗೆ 5 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ರೀಲ್ಸ್ ಮಾಡಿದ ಜಾಗದಲ್ಲಿ ವಿನಯ್, ರಜತ್‌ರನ್ನು ಸ್ಥಳ ಮಹಜರಿಗೆ ಕರೆತಂದ ಪೊಲೀಸರು
ಹಲವು ಕಾರ್ಯಕ್ರಮ ಕೂಡ ಇಲ್ಲಿ ಮುಂದೂಡಲಾಗಿದೆ. ಇದು ಅನುದಾನದ ಕೊರತೆ ಎಂದು ನಮಗನಿಸುತ್ತಿದೆ. ಕಿತ್ತೂರು ಕರ್ನಾಟಕ ಭಾಗದ ಶಾಸಕರಿಗಾಗಿ 8 ಸಾವಿರ ಕೋಟಿ ರೂ. ಇಟ್ಟುಕೊಂಡಿದ್ದು, ನಾನು ಎಲ್ಲಾ ಬ್ಯಾಲನ್ಸ್ ಮಾಡಿ ಕೊಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಧಾರವಾಡಕ್ಕೆ (Dharwada) ಪ್ರತ್ಯೇಕ ಪಾಲಿಕೆ ಮಾಡಿರುವುದರಿಂದ ನಾನು ನೂರು ಕೋಟಿ ರೂ. ಅನುದಾನ ಕೊಡಲು ಕೇಳಿದ್ದೇನೆ. ಸಿಎಂ 200 ಕೋಟಿ ರೂ. ಕೊಡಬಹುದು ಎಂದರು. ಇದನ್ನೂ ಓದಿ: ಡಿಕೆಶಿ ಪ್ರತಿಕೃತಿ ಸುಟ್ಟು 200ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ