ಹುಬ್ಬಳ್ಳಿ: ಸಂಸದ ಪ್ರಹ್ಲಾದ್ ಜೋಶಿಗೆ ಶಕ್ತಿಯಿದ್ದರೆ ಸ್ವಂತ ಹೆಸರು ಹೇಳಿಕೊಂಡು ಚುನಾವಣೆ ಎದುರಿಸಲಿ ಎಂದು ಮೈತ್ರಿ ಅಭ್ಯರ್ಥಿ ವಿನಯ್ ಕುಲಕರ್ಣಿ ಸವಾಲ್ ಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೋದಿ ಹೆಸರಿನಲ್ಲಿ ಮತ ಕೇಳೋಕೆ ನನಗೆ ನಾಚಿಕೆಯಾಗಲ್ಲ. ವಿನಯ್ ಕುಲಕರ್ಣಿ ಬೇಕಾದರೆ ರಾಹುಲ್ ಗಾಂಧಿ ಹೆಸರಿನಲ್ಲಿ ಮತ ಕೇಳಲಿ ಎನ್ನೋ ಜೋಶಿ ಹೇಳಿಕೆಗೆ ತಿರುಗೇಟು ನೀಡಿದರು.
ನಮ್ಮ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರು ಬಿಟ್ಟುಬಿಡೋಣ. ವಿನಯ್ ಕುಲಕರ್ಣಿ ವರ್ಸಸ್ ಪ್ರಹ್ಲಾದ್ ಜೋಶಿ ಎಂದು ಚುನಾವಣೆ ಮಾಡೋಣ. ಪ್ರಹ್ಲಾದ್ ಜೋಶಿ ಅವರು ನನ್ನ ವಿರುದ್ಧ ತಮ್ಮ ಹೆಸರು ಹೇಳಿಕೊಂಡು ಚುನಾವಣೆ ಎದುರಿಸಲಿ ಎಂದು ಸವಾಲ್ ಹಾಕಿ ಕಿಡಿಕಾರಿದರು.
ಜೋಶಿ 15 ವರ್ಷದಿಂದ ಸಂಸದರಾಗಿ ಕ್ಷೇತ್ರಕ್ಕೇನು ಮಾಡಿದ್ದಾರೆ? ಯಾಕೆ ಅವರು ಬೇರೆಯವರ ಹೆಸರಲ್ಲಿ ಮತ ಕೇಳುತ್ತಾರೆ? ಹಾಗಾದರೇ ಧಾರವಾಡ ಕ್ಷೇತ್ರಕ್ಕೆ ಅವರೇನು ಕೆಲಸ ಮಾಡಿಲ್ಲವಾ? ಎಂದು ಪ್ರಶ್ನಿಸಿ ಜೋಶಿಗೆ ಕುಲಕರ್ಣಿ ಟಾಂಗ್ ಕೊಟ್ಟರು.