‘ಬಿಗ್ ಬಾಸ್’ ಮನೆಯಲ್ಲಿ ವಿನಯ್ ನನಗೆ ಟಫ್ ಸ್ಪರ್ಧಿ : ಅವಿನಾಶ್ ಶೆಟ್ಟಿ

Public TV
3 Min Read
Avinash

ರಾವಳಿ ಹುಡುಗ ಅಸ್ತಿಕ್ ಅವಿನಾಶ್ ಶೆಟ್ಟಿ (Avinash Shetty) , ನಟನೆ, ಕ್ರೀಡೆ, ಮಾಡೆಲಿಂಗ್ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಕೊಂಡವರು. ಕ್ರಿಕೆಟ್‌ ನನ್ನ ಫಸ್ಟ್ ಲವ್ ಎನ್ನುತ್ತಲೇ ಬಿಗ್‌ಬಾಸ್ (Bigg Boss Kannada) ಮನೆಯೊಳಗೆ ವೈಲ್ಡ್‌ಕಾರ್ಡ್‌  (Wild Card) ಎಂಟ್ರಿ ಕೊಟ್ಟಿರುವ ಅವಿನಾಶ್‌, JioCinemaಗೆ ನೀಡಿರುವ  ಸಂದರ್ಶನದ ಪೂರ್ಣಪಾಠ ಇಲ್ಲಿದೆ.

Avinash Shetty 4

‘ಕರಾವಳಿ ಹುಡುಗ ಬೆಂಗಳೂರಿಗೆ ಬಂದು ಫಿಲ್ಮ್‌ ಮಾಡುವುದು ತುಂಬ ಕಷ್ಟ. ಆದ್ರೆ ಅಪ್ಪು ಸರ್, ಬೆಂಬಲ ಮತ್ತು ನಿಮ್ಮೆಲ್ಲರ ಆಶೀರ್ವಾದದಿಂದ ಒಂದಲ್ಲ, ಮೂರು ಕನ್ನಡ ಸಿನಿಮಾ ಮಾಡಿದ್ದೀನಿ ನಾನು. ಈ ಪ್ರೀತಿಯಿಂದ ನಾನು ಕರಾವಳಿ ಕಡೆಗೂ ಒಂದೆರಡು ಸಿನಿಮಾ ಮಾಡಿದ್ದೀನಿ. ಮಾಡೆಲಿಂಗ್ ಮಾಡಿದೀನಿ. ಮೊಥಾಯ್ ಫೈಟರ್ ಕೂಡ ಹೌದು. ಆದ್ರೆ ನನ್ನ ಮುಖ್ಯ ಪ್ಯಾಷನ್‌ ಅಂದ್ರೆ ಅದು ಕ್ರಿಕೆಟ್. ಕ್ರಿಕೆಟ್ ಆಡ್ತಾ ಆಡ್ತಾನೇ ಇಲ್ಲಿವರೆಗೂ ಬಂದಿದೀನಿ. ಅಂದ್ರೆ ಬಿಗ್‌ಬಾಸ್‌ ಕನ್ನಡದಕ್ಕೆ ವೈಲ್ಡ್‌ ಕಾರ್ಡ್‌ ಕಂಟೆಸ್ಟೆಂಟ್‌ ಆಗಿ ಈಗಷ್ಟೇ ಒಳಗೆ ಹೋಗ್ತಿದೀನಿ. ಅಂದ್ರೆ, ಇದು ನನ್ನ ಬದುಕಿನ ಎಕ್ಸೈಟಿಂಗ್ ನ್ಯೂಸ್. ಮನಸ್ಸಿನ ಮೂಲೆಯಲ್ಲಿ ಹೇಗಿರಬಹುದು? ಏನಾಗಬಹುದು ಎಂಬ ಕುತುಹಲವಂತೂ ಇದ್ದೇ ಇದೆ. ಒಳಗೆ ಹೇಗಿರುತ್ತದೆ ಎಂಬ ಐಡಿಯಾನೇ ಇಲ್ಲ ನಂಗೆ.

Avinash Shetty 5

ಮನೆಯವರ ರಿಯಾಕ್ಷನ್

ಆರಂಭದಲ್ಲಿ ನಾನು ನನ್ನ ತಾಯಿಗೆ ಹೇಳಿರಲೇ ಇಲ್ಲ. ಇಲ್ಲಿಗೆ ಬರುವ ದಿನ ಬೆಳಿಗ್ಗೆ ಹೋಗಿ ಅವರ ಕಾಲುಮುಟ್ಟಿ ನಮಸ್ಕರಿಸಿ, ‘ಬಿಗ್‌ಬಾಸ್‌ ರಿಯಾಲಿಟಿ ಷೋಗೆ ಹೋಗ್ತಿದೀನಿ’ ಅಂತ ಹೇಳಿದೆ. ಅವರು ನಂಬ್ತಾನೇ ಇಲ್ಲ. ‘ನೀನು ಹೇಗೆ ಮ್ಯಾನೇಜ್ ಮಾಡ್ತೀಯಾ’ ಅಂತ ಅನುಮಾನದಿಂದಲೂ ಕೇಳಿದರು. ಆದ್ರೆ ನಾನು ಬೆಂಗಳೂರಿಗೆ ಹೊರಡುವ ಹೊತ್ತಿನಲ್ಲಿ ಅಮ್ಮ ತುಂಬ ಖುಷಿಯಾಗಿದ್ದರು. ಇದು ನನ್ನ ಕುಟುಂಬಕ್ಕೆ ಹೆಮ್ಮೆಯ ಗಳಿಗೆ.

Avinash Shetty 1

ಕ್ರಿಕೆಟ್ ಫಸ್ಟ್ ಲವ್

ಕ್ರಿಕೆಟ್ ನನ್ನ ಫಸ್ಟ್ ಲವ್. ನಿಮಗೆ ಫಸ್ಟ್ ಲವ್ ಆಗಿದ್ಯಾ ಅಂತ ಕೇಳಿದ್ರೆ ಹೌದು, ಕ್ರಿಕೆಟ್ ಜೊತೆಗೆ ಆಗಿದೆ ಎಂದು ಹೇಳುವಷ್ಟುಪ್ರೀತಿಸ್ತೀನಿ. ಹಾಗಾಗಿ ಬಿಗ್‌ಬಾಸ್ ಮನೆಯೊಳಗೆ ಖಂಡಿತ ನಾನು ಕ್ರಿಕೆಟ್‌ ಅನ್ನು ಮಿಸ್ ಮಾಡ್ಕೋತೀನಿ.

Avinash Shetty 2

ಸಿದ್ಧತೆ ಹೇಗಿತ್ತು

ಸಿದ್ಧತೆ ಅಂದ್ರೆ, ರಿಸರ್ಚ ಮಾಡ್ಕೊಂಡೇನೂ ಬಂದಿಲ್ಲ. ರಿಸರ್ಚ್‌ ಮಾಡ್ಕೊಂಡ್ ಬಂದ್ರೆ ಇಲ್ಲಿ ವರ್ಕೌಟ್ ಆಗೋದೂ ಇಲ್ಲ. ಒಳಗೆ ನೀವಾಗಿ ಹೇಗಿರ್ತೀರಾ ಅನ್ನೋದೇ ವರ್ಕೌಟ್ ಆಗೋದು. ಖಂಡಿತ ನಾನು ಎಪಿಸೋಡ್‌ಗಳನ್ನು ನೋಡ್ಕೊಂಡು ಬಂದಿದೀನಿ. ಯಾರು ಹೇಗೆ ಆಡ್ತಿದ್ದಾರೆ ಎಂಬುದನ್ನೂ ತಿಳ್ಕೊಂಡಿದೀನಿ. ಯಾರ ಸ್ಟ್ರೆಂಥ್ ಏನು, ಯಾರ ವೀಕ್‌ನೆಸ್ ಏನು ಎಲ್ಲವನ್ನೂ ನೊಡ್ಕೊಂಡು ಬಂದಿದೀನಿ. ಆದ್ರೆ ಒಬ್ಬ ಸ್ಪೋರ್ಟ್ಸ್‌ಮನ್ ಆಗಿ ನನಗೆ ನನ್ನದೇ ಆದ ಪ್ಲ್ಯಾನ್‌ಗಳಿವೆ.

ಹತ್ತೂ ಸೀಸನ್‌ಗಳಲ್ಲಿ ವಿಜಯರಾಘವೇಂದ್ರ, ಪ್ರಥಮ್‌ ಅವರನ್ನು ನಾನು ತುಂಬ ಇಷ್ಟಪಟ್ಟಿದ್ದೇನೆ. ಕಳೆದ ಸೀಸನ್‌ನಲ್ಲಿನ ರೂಪೇಶ್‌ ಶೆಟ್ಟಿ ಕೂಡ ನನ್ನ ಸ್ನೇಹಿತ. ಜೊತೆಗೆ ಶ್ರುತಿ. ಇವರನ್ನು ನಾನು ಇಷ್ಟಪಟ್ಟಿದ್ದೇನೆ.

Avinash Shetty 3

ಸ್ಟ್ರೆಂಥ್ ಮತ್ತು ವೀಕ್‌ನೆಸ್‌

ನಾನು ಯಾವುದೇ ಸಂದರ್ಭದಲ್ಲಿಯೂ ಗಿವ್‌ ಅಪ್ ಮಾಡುವುದಿಲ್ಲ. ಇದೇ ನನ್ನ ಶಕ್ತಿ. ನಾನು ಎಲ್ಲೂ ಬಿಟ್ಕೊಡಲ್ಲ. ಏನಾದ್ರೂ ಕಮ್‌ಬ್ಯಾಕ್ ಮಾಡ್ತೀನಿ. ವೀಕ್‌ನೆಸ್ ಏನೂ ಇಲ್ಲ. ಆದ್ರೆ ನಾನು ಮನೆಯಡುಗೆ ಇಷ್ಟಪಡ್ತೀನಿ. ಅದನ್ನು ವೀಕ್‌ನೆಸ್ ಅಂತ ಹೇಳ್ಬೋದೇನೋ. ಆದ್ರೆ ಅದನ್ನುಟ್ಯಾಕಲ್ ಮಾಡ್ಬೋದು ಅನ್ಸತ್ತೆ.

ನಾನು ತುಂಬ ಭಾವಜೀವಿ. ಆದ್ರೆ ಅಷ್ಟೇ ಅಗ್ರೆಸಿವ್ ಕೂಡ ಹೌದು. ನಾನು ಮನೆಯೊಳಗೆ ಹೋಗ್ತಿರೋದೇ ಎಲ್ಲ ವಿಭಾಗಗಳಲ್ಲಿಯೂ ಚೆನ್ನಾಗಿ ಪ್ರದರ್ಶನ ಕೊಡ್ಬೇಕು ಅಂತ. ಮನೆಯೊಳಗೆ ಯಾವ್ದೇ ರೋಲ್ ಕೊಟ್ರೂ ನನ್ನ ಬೆಸ್ಟ್ ಅನ್ನು ಕೊಡ್ತೀನಿ.

ನಾನು ಸಿಂಗಲ್. ನಾನು ಮನೆಯೊಳಗೆ ಹೋಗುತ್ತಿರುವುದು ಸಂಬಂಧ ಬೆಳೆಸಲಲ್ಲ. ನನ್ನ ಆಟ ಆಡಬೇಕು ಎಂದೇ ಹೋಗುತ್ತಿರುವುದು. ಆದರೆ ಅಲ್ಲಿ ಏನಾಗುತ್ತದೆಯೋ ನನಗೂ ಗೊತ್ತಿಲ್ಲ. ಬದುಕಿನಲ್ಲಿ ಯಾವಾಗ ಏನು ಬೇಕಾದರೂ ಆಗಬಹುದಲ್ವಾ? ಒಳ್ಳೆಯ ವಿಷಯಗಳು ಸಂಭವಿಸುವುದಕ್ಕೆ ನಾನಂತೂ ಓಪನ್ ಆಗಿದ್ದೇನೆ. ನಾನೊಂದು ಖಾಲಿ ಹಾಳೆಯಾಗಿ ಒಳಗೆ ಹೋಗುತ್ತಿದ್ದೇನೆ.

ಈ ಸೀಸನ್‌ನಲ್ಲಿ ತನಿಷಾ ನನ್ನ ಫೆವರೆಟ್ ಸ್ಪರ್ಧಿ. ಎಲ್ಲರೂ ಅವರ ಸಾಮರ್ಥ್ಯ ನೀಡಿದ್ದಾರೆ. ಅವರಲ್ಲಿ ವಿನಯ್ ನನಗೆ ಸ್ಪರ್ಧೆ ನೀಡುತ್ತಾರೆ ಅನಿಸುತ್ತದೆ. ಹಾಗೆಯೇ ಕಾರ್ತೀಕ್ ಕೂಡ ಹೌದು. ಇವರಿಬ್ಬರೂ ನನಗೆ ಹೇಗೆ ಸ್ಪರ್ಧೆ ಒಡ್ಡುತ್ತಾರೆ ಅಂತ ನೋಡ್ಬೇಕು. ಹಾಗೆಯೇ ಹೆಣ್ಣುಮಕ್ಕಳೂ ಯಾವ್ದಕ್ಕೂ ಕಮ್ಮಿ ಇಲ್ಲದಂತೆ ಆಡ್ತಿದ್ದಾರೆ. ಏನೇ ಸಂದರ್ಭ ಬಂದ್ರೂ ನಾನು ಬಿಟ್ಟುಕೊಡಲ್ಲ. ವೀಕ್‌ ಆಗಲ್ಲ. ಜನರ ಪ್ರೀತಿ ನನ್ನ ಮೇಲಿದೆ. ಅದನ್ನು ನಾನು ಭದ್ರವಾಗಿಟ್ಟುಕೊಳ್ಳುತ್ತೇನೆ.

Share This Article