ದೊಡ್ಮನೆ ಆಟ ಆಡ್ತಾರಾ ವಿನಯ್ ಗೌಡ? ಅನುಮಾನ ಮೂಡಿಸಿದ ಪತ್ನಿ ಅಕ್ಷತಾ ಪೋಸ್ಟ್

Public TV
2 Min Read
vinay gowda

ನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ಗೆ ಕಾರ್ಯಕ್ರಮಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಈಗಾಗಲೇ ಬಿಗ್ ಬಾಸ್ ಪ್ರೀ ಶೂಟ್ ಕೂಡ ಮಾಡಲಾಗಿದೆ. ನಮ್ರತಾ ಗೌಡ, ವಿನಯ್ ಗೌಡ, ನೀತು ವನಜಾಕ್ಷಿ, ಸ್ನೇಕ್ ಶ್ಯಾಮ್ ಸೇರಿದಂತೆ ಅನೇಕರು ಸ್ಪರ್ಧಿಗಳಾಗಿ ಕಾಲಿಟ್ಟಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ನಟ ವಿನಯ್ ಗೌಡ, ಪತ್ನಿ ಅಕ್ಷತಾ ಗೌಡ ಅವರ ಪೋಸ್ಟ್ ಸಖತ್ ವೈರಲ್ ಆಗಿದೆ. ಅವರ ಹೊಸ ಪೋಸ್ಟ್ ನೆಟ್ಟಿಗರ ಅನುಮಾನಕ್ಕೆ ಕಾರಣವಾಗಿದೆ.

sudeep

ವಿನಯ್ ಗೌಡ ಅವರ ಪತ್ನಿ ಅಕ್ಷತಾ ಅವರು ಇನ್ಸ್ಟಾಗ್ರಾಂ ಸೇರಿದಂತೆ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಡೇ 1, ನೀವು ಎಲ್ಲಿಯೇ ಇರಲಿ, ನಾನು ನಿಮ್ಮ ಜೊತೆ ಕನೆಕ್ಟ್ ಆಗಿದ್ದೇನೆ ಎಂದು ಲವ್ ಸಿಂಬೋಲ್ ಜೊತೆಗೆ ಪೋಸ್ಟ್ ಹಾಕಿದ್ದಾರೆ. ಅಕ್ಷತಾ ಯಾಕೆ ಹೀಗೆ ಪೋಸ್ಟ್ ಹಾಕಿಕೊಂಡರು ಎಂಬ ಪ್ರಶ್ನೆ ಎದ್ದಿದೆ. ಅಕ್ಷತಾ ಪೋಸ್ಟ್ ನೋಡಿ ಅನೇಕರಿಗೆ ವಿನಯ್ ಅವರು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ ಎಂಬ‌ ಖಚಿತ ಸುಳಿವು ಸಿಕ್ಕಿದೆ. ಇದನ್ನೂ ಓದಿ:‘ಜವಾನ್’ ಕಲೆಕ್ಷನ್ 1103.27 ಕೋಟಿ ರೂಪಾಯಿ: ಅಧಿಕೃತ ಘೋಷಣೆ

vinay gowda 1

‘ನಮ್ಮ ಲಚ್ಚಿ’ ಸೀರಿಯಲ್ ಬಳಿಕ ಸಿಂಪಲ್ ಸುನಿ ನಿರ್ದೇಶನದ ‘ಶಾಂಭವಿ’ ಎಂಬ ಸೀರಿಯಲ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಪ್ರಸ್ತುತ ನಡೆಯುತ್ತಿರುವ ಧಾರಾವಾಹಿ ಬಿಟ್ಟು ಬಿಗ್ ಬಾಸ್‌ಗೆ ಹೋಗೋದು ಡೌಂಟ್ ಎಂದು ಹೇಳಲಾಗಿತ್ತು. ಆದರೆ ಈಗ ದೊಡ್ಮನೆಗೆ ಕಾಲಿಟ್ಟಿದ್ದಾರೆ ಎಂದೇ ಹೇಳಲಾಗುತ್ತಿದೆ. ಅದಕ್ಕೆ ಪೂರಕವೆಂಬಂತೆ ನಟನ ಪತ್ನಿ ಅಕ್ಷತಾರ ಪೋಸ್ಟ್ ವೈರಲ್ ಆಗುತ್ತಿದೆ.

ಅಕ್ಟೋಬರ್ 8ಕ್ಕೆ ಬಿಗ್ ಬಾಸ್ ಕಾರ್ಯಕ್ರಮ ಚಾಲನೆ ಸಿಗಲಿದೆ. ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿರಲಿದೆ. ಸದ್ಯ ರಿಲೀಸ್ ಆಗಿರುವ ಸೀಸನ್ 10ರ ಬಿಗ್ ಬಾಸ್ ಪ್ರೋಮೋ ಕೂಡ ಗಮನ ಸೆಳೆಯುತ್ತಿದೆ. ಒಬ್ಬ ರಾವಣ, 10 ತಲೆ, ಒಂದೇ ಮನೆ 10 ಸೀಸನ್ ಎಂಬ ಸುದೀಪ್ ಡೈಲಾಗ್ ಖಡಕ್ ಆಗಿ ಮೂಡಿ ಬಂದಿದೆ. ಬಿಗ್ ಬಾಸ್ ಶುರುವಿಗೆ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article