‘ಬಿಗ್ ಬಾಸ್’ ಖ್ಯಾತಿಯ ವಿನಯ್ ಗೌಡ (Vinay Gowda) ಅವರು ದರ್ಶನ್ ನಟನೆಯ ‘ಡೆವಿಲ್’ ಚಿತ್ರದಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರ ಬಗ್ಗೆ ವಿನಯ್ ಮಾತನಾಡಿದ್ದಾರೆ. ಡೆವಿಲ್ ತುಂಬಾ ಡಿಫರೆಂಟ್ ಆಗಿರುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಕೊನೆಯುಸಿರು ಇರೋವರೆಗೂ ಸುದೀಪ್ ಸರ್ ಋಣ ಮರೆಯೋದಿಲ್ಲ: ಲಾಂಗ್ ವಿವಾದದ ಬಗ್ಗೆ ವಿನಯ್ ಮಾತು
ದರ್ಶನ್ ಸರ್ ಯಾರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಅವರು ಅಷ್ಟು ಯಾರೊಂದಿಗೂ ಬೆರೆಯುತ್ತಿಲ್ಲ. ಕೆಲಸ ಮಾಡ್ತಾ ಅವರ ಪಾಡಿಗೆ ಅವರು ಇರುತ್ತಾರೆ. ಶೂಟಿಂಗ್ ಸ್ಥಳದಲ್ಲಿ ದರ್ಶನ್ ಸರ್ ಅವರೊಂದಿಗೆ ಮಾತನಾಡಿದ್ದೀನಿ. ಸೀನ್‌ಗಳ ಬಗ್ಗೆ ಚರ್ಚಿಸಿ ನಟಿಸಿದ್ವಿವಿ. ‘ಡೆವಿಲ್’ನಲ್ಲಿ (Devil) ದರ್ಶನ್ (Darshan) ಸರ್ ನನಗೆ ಹೊಡೆಯೋ ಸೀನ್ ಇತ್ತು. ಅದನ್ನು ತುಂಬಾ ಪ್ರೊಫೆಷನಲ್ ಆಗಿ ನಿರ್ದೇಶಕ ಪ್ರಕಾಶ್ ಸರ್ ಶೂಟ್ ಮಾಡಿದ್ದಾರೆ. ಅದು ಬಿಟ್ಟರೆ ದರ್ಶನ್ ಸರ್ ಜೊತೆ ವೈಯಕ್ತಿಕ ಯಾವುದೇ ಮಾತು ಆಡಿಲ್ಲ. ಇದನ್ನೂ ಓದಿ:ವಿಚಾರಣೆಗೆ ದರ್ಶನ್ ಗೈರು – ಬೆಂಗಳೂರು ಕೋರ್ಟ್ ಅಸಮಾಧಾನ
`ಡೆವಿಲ್’ ಸಿನಿಮಾ ತುಂಬಾ ಡಿಫರೆಂಟ್ ಆಗಿರುತ್ತದೆ. ಪ್ರತಿಯೊಂದು ಸೀನ್ ಕೂಡ ಹೀಗೆ ಬರಬೇಕು ಎಂದು ಮಾಡಿಕೊಂಡೆ ಸಿನಿಮಾ ಮಾಡ್ತಿದ್ದಾರೆ. ಅದರ ಬಗ್ಗೆ ಜಾಸ್ತಿ ಬಿಟ್ಟು ಕೊಡೋಕೆ ಆಗೋದಿಲ್ಲ.
ಅಂದಹಾಗೆ, ದರ್ಶನ್‌ಗೆ ನಾಯಕಿಯಾಗಿ ರಚನಾ ರೈ ಕಾಣಿಸಿಕೊಂಡಿದ್ದಾರೆ. ನವಗ್ರಹ ನಟಿ ಶರ್ಮಿಳಾ ಮಾಂಡ್ರೆ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಾರಕ್ ಡೈರೆಕ್ಟರ್ ಮಿಲನಾ ಪ್ರಕಾಶ್ ಈ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ.