Bigg Boss: ವಿನಯ್‌ ಕೊಂಕು ಮಾತಿಗೆ ಸಿಡಿದೆದ್ದ ಕಾರ್ತಿಕ್‌

Public TV
2 Min Read
karthik mahesh

ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಮತ್ತೆ ಕಾರ್ತಿಕ್- ವಿನಯ್ ಜಗಳ ಮೀತಿ ಮೀರಿದೆ. ಒಬ್ಬರಿಗೊಬ್ಬರು ತಗಡು ಎಂಬ ಪದ ಬಳಸಿ ನಿಂದಿಸಿದ್ದಾರೆ. ಹೆಣ್ಣು ಮಕ್ಕಳನ್ನು ಮುಂದೆ ಬಿಟ್ಟು ಆಟ ಆಡುತ್ತೀಯಾ ಎಂದೆಲ್ಲಾ ಪದ ಬಳಸಿದ್ದಾರೆ ಎಂದು ಕಾರ್ತಿಕ್ (Karthik Mahesh) ವಿರುದ್ಧ ವಿನಯ್ (Vinay Gowda) ಸಿಡಿದೆದ್ದಿದ್ದಾರೆ. ವಿನಯ್‌ ಕೊಂಕು ಮಾತಿಗೆ ಕಾರ್ತಿಕ್‌ ತಿರುಗೇಟು ನೀಡಿದ್ದಾರೆ.

vinay gowda

ಬಿಗ್ ಬಾಸ್ ಈ ಬಾರಿ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ತಂಡಗಳನ್ನಾಗಿ ಆಟ ಆಡಿಸುತ್ತಿದ್ದರು. ಟಾಸ್ಕ್‌ವೊಂದರಲ್ಲಿ ಕುರ್ಚಿ ಮೇಲೆ ಕೂತಿರುವ ಗಂಧರ್ವರ ಪೈಕಿ ಇಬ್ಬರನ್ನು ರಾಕ್ಷಸರು ಎಬ್ಬಿಸಬೇಕಿತ್ತು. ಗಂಧರ್ವರನ್ನು ಎಬ್ಬಿಸಲು ರಾಕ್ಷಸರ ತಂಡದವರು ನೀರನ್ನು ಎರಚುತ್ತಿದ್ದರು. ಈ ವೇಳೆ ಕಾರ್ತಿಕ್‌ನ ವಿನಯ್ ಕೆಣಕಿದರು. ಪದೇ ಪದೇ ಕೆಣಕುತ್ತಿದ್ದ ವಿನಯ್, ಕಾರ್ತಿಕ್ ಅವರನ್ನ ತಗಡು ಎಂದರು. ಅದನ್ನ ಕೇಳಿಸಿಕೊಂಡು ಕಾರ್ತಿಕ್ ರೊಚ್ಚಿಗೆದ್ದರು. ಈ ವೇಳೆ ವಿನಯ್ – ಕಾರ್ತಿಕ್ ಮಧ್ಯೆ ಮಾತಿನ ಜಟಾಪಟಿ ನಡೆಯಿತು. ಇದನ್ನೂ ಓದಿ:ಧರ್ಮಕ್ಕಾಗಿ 4 ವರ್ಷಗಳ ಪ್ರೀತಿಗೆ ಅಂತ್ಯ ಹಾಡಿದ ‘ಬಿಗ್ ಬಾಸ್’ ಜೋಡಿ

vinay gowda

ಟಾಸ್ಕ್ ನಡೆಯುತ್ತಿದ್ದಾಗ, ಇಬ್ಬರನ್ನು ಕುರ್ಚಿಯಿಂದ ಎಬ್ಬಿಸಬೇಕು ಎಂದಾಗ. ವರ್ತೂರು ಸಂತೋಷ್ ಹಾಗೂ ಪವಿ ಅವರನ್ನ ರಾಕ್ಷಸರ ತಂಡ ಹೆಚ್ಚು ಟಾರ್ಗೆಟ್ ಮಾಡಿತು. ತುಕಾಲಿ ಸಂತು ಹಾಗೂ ಮೈಕಲ್ ಕಡೆ ಹೆಚ್ಚು ಗಮನ ಕೊಡಲಿಲ್ಲ. ಕಾರ್ತಿಕ್ ಹಾಗೂ ಸಂಗೀತಾ (Sangeetha) ನೀರು ಎರಚುತ್ತಿದ್ದಾಗ, ಕರೆಕ್ಟ್ ಆಗಿದೆ ಜೋಡಿ ಎಂದು ವಿನಯ್ ಟಾಂಟ್ ಕೊಡುತ್ತಿದ್ದರು. ಕುರ್ಚಿ ಮೇಲಿಂದ ವರ್ತೂರು ಸಂತೋಷ್ ಎದ್ದರು. ಆಗ, ಪವಿ ಪೂವಪ್ಪ ಅವರನ್ನ ರಾಕ್ಷಸರ ತಂಡ ಹೆಚ್ಚು ಟಾರ್ಗೆಟ್ ಮಾಡಿತು. ಈ ವೇಳೆ, ವಿನಯ್ ಕೊಂಕು ಮಾತನಾಡಿದರು. ಅಲ್ಲಿಂದ ಜಗಳ ತಾರಕಕ್ಕೇರಿತು. ಹುಡುಗಿಯನ್ನ ಕಳುಹಿಸಿಬಿಟ್ಟು ಅಲ್ಲಿ ಗಂಡಸು ಅಂತ ಚಪ್ಪಾಳೆ ತಟ್ಟಿಕೊಂಡು ಕೂತವ್ನೆ ಎಂದು ವಿನಯ್‌ ವಿರುದ್ಧ ಕಾರ್ತಿಕ್‌ ಗುಡುಗಿದ್ದರು.

ಬಳಿಕ ಕಾರ್ತಿಕ್ – ವಿನಯ್ ಮಾತಿನ ಚಕಮಕಿ ಜೋರಾಯಿತು. ಕಾರ್ತಿಕ್ ಕೆಟ್ಟ ಪದ ಬಳಸಿದ್ದಾರೆ ಅಂತ ವಿನಯ್ ಗುಡುಗಿದ್ದರು. ಕೆಟ್ಟ ಪದ ಬಳಕೆ ಮಾಡಿಲ್ಲ ಅದೆಷ್ಟೇ ಹೇಳಿದ್ದರೂ ವಿನಯ್ ಕ್ಯಾರೆ ಎನ್ನಲಿಲ್ಲ. ಪದೇ ಪದೇ ತಮ್ಮ ಮೇಲೆ ಗಂಭೀರ ಆರೋಪ ಮಾಡುತ್ತಿರುವ ವಿನಯ್ ವಿರುದ್ಧ ನೊಂದ ಕಾರ್ತಿಕ್ ಕಣ್ಣೀರು ಸುರಿಸಿದರು. ನಾನು ಅಂತಹ ಮಾತನ್ನ ಆಡಿದ್ದರೆ ಬಿಗ್ ಬಾಸ್‌ನಿಂದ ಹೊರಗೆ ಹೋಗುತ್ತೇನೆ ಎಂದು ಕಾರ್ತಿಕ್ ಭಾವುಕರಾಗಿದ್ದರು.

Share This Article