ಬಳ್ಳಾರಿ: ವಿಮ್ಸ್ (VIMS) ದುರಂತಕ್ಕೆ ದಿನಕ್ಕೊಂದು ತಿರುವು ಸಿಗುತ್ತಿದೆ. ಘಟನೆ ನಡೆದು ಇಷ್ಟು ದಿನವಾದರೂ ವಿಮ್ಸ್‌ಗೆ ಭೇಟಿ ನೀಡದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ (Dr. K.Sudhakar) ವಿರುದ್ಧ ಸ್ವಪಕ್ಷೀಯ ಶಾಸಕರೇ ಮುಗಿ ಬಿದ್ದಿದ್ದು, ಸಚಿವರ ನಿರ್ಲಕ್ಷ್ಯದಿಂದಲೇ ಘಟನೆ ನಡೆದಿರೋದು ಎಂದು ಆರೋಪಿಸಿದ್ದಾರೆ.
Advertisement
ಆರೋಪಗಳ ಬಳಿಕ ಎಚ್ಚೆತ್ತಿರುವ ಸುಧಾಕರ್ ಇಂದು ವಿಮ್ಸ್‌ಗೆ ಭೇಟಿ ನೀಡಲಿದ್ದಾರೆ. ಘಟನೆ ಬಗ್ಗೆ ಅಧಿಕಾರಿಗಳಿಂದ ವಿವರಣೆ ಪಡೆಯಲಿದ್ದಾರೆ. ವಿಮ್ಸ್ ದುರಂತ ಬಗ್ಗೆ ಶ್ರೀರಾಮುಲು (B. Sriramulu) ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಆಸ್ಪತ್ರೆಯಲ್ಲಿ (Hospital) ಕರೆಂಟ್ ಕಟ್‍ನಿಂದ ಸಮಸ್ಯೆ ಆಗಿಲ್ಲ. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಚೆನ್ನಾಗಿಯೇ ಕೆಲಸ ಮಾಡುತ್ತಿದೆ. ಆಕ್ಸಿಜನ್ ಸರಬರಾಜಿಗೆ ವಿದ್ಯುತ್ ಸಂಪರ್ಕ ಬೇಕಿಲ್ಲ. ಯಾವುದೇ ಕೇಬಲ್ ಬ್ಲಾಸ್ಟ್ ಆಗಿಲ್ಲ ಎಂದಿದ್ದಾರೆ. ಇದನ್ನೂ ಓದಿ: ವಿಮ್ಸ್‌ನಲ್ಲಿ ಸಾವಿನ ಸರಣಿ- ಸುಧಾಕರ್ ಹಠದಿಂದ ನಿರ್ದೇಶಕರ ನೇಮಕ
Advertisement
Advertisement
ಹಾಗಾದ್ರೆ ಕರೆಂಟ್ ಸಮಸ್ಯೆಯಿಂದ ಸಾವಾಗಿಲ್ಲ ಎನ್ನೋದಾದರೆ ಆಸ್ಪತ್ರೆಯಿಂದ ಉಳಿದ ರೋಗಿಗಳನ್ನು ಶಿಫ್ಟ್ ಮಾಡಿದ್ದೇಕೆ? ಆಸ್ಪತ್ರೆಗೆ ಹೊಸ ಜನರೇಟರ್‌ಗಳನ್ನು ತರಿಸಿದ್ದು ಏಕೆ? ರಾತ್ರೋರಾತ್ರಿ ಕರೆಂಟ್ ವೈರ್ ಬದಲಾಯಿಸಿದ್ದೇಕೆ? ನಾಲ್ವರು ಸಿಬ್ಬಂದಿಗೆ ನೋಟಿಸ್ ನೀಡಿದ್ದು ಯಾಕೆ? ಮೃತರ ಕುಟುಂಬಕ್ಕೆ ಪರಿಹಾರ ನೀಡಿದ್ದು ಏಕೆ ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಜೊತೆಗೆ ನಿನ್ನೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಡಾ. ಕೆ ಸುಧಾಕರ್, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ವಿಮ್ಸ್‌ಗೆ ಭೇಟಿ ನೀಡ್ತೇನೆ. ಸಾವು ಸಾವೇ, ಈಗಾಗಲೇ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರು. ಇದನ್ನೂ ಓದಿ: ವಿಮ್ಸ್ ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊಂದು ಸಾಕ್ಷಿ- ಘಟನೆಯ ಭೀಕರತೆ ವೀಡಿಯೋದಲ್ಲಿ ಬಯಲು