ಚಿತ್ರದುರ್ಗ: ಹಿರಿಯೂರಿನ ಶಾಸಕ ಡಿ.ಸುಧಾಕರ್ ಚುನಾವಣೆಗೂ ಮುನ್ನವೇ ಮತದಾರರನ್ನು ಓಲೈಸಲು ಯುಗಾದಿ ಹಬ್ಬದ ಉಡುಗೊರೆಯಾಗಿ ನೀಡಿರೋ ಸೀರೆ, ಪಂಚೆಗಳಿಗೆ ಗ್ರಾಮಸ್ಥರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಸುಧಾಕರ್ ಅವರ ಭಾವಚಿತ್ರ ಹಾಗೂ ಕ್ಯಾಲೆಂಡರ್‍ವುಳ್ಳ ಬ್ಯಾಗ್‍ಗಳಲ್ಲಿ ಸೀರೆ, ಪಂಚೆ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಕ್ಷೇತ್ರದ ಎಲ್ಲಾ ಹಳ್ಳಿಗಳ ಮತದಾರರಿಗೂ ಕಳೆದ ಒಂದು ತಿಂಗಳಿಂದ ಹಂಚುತ್ತಿದ್ದಾರೆ.
ಗುರುವಾರ ಸಂಜೆ ಪಿಟ್ಲಾಲಿ ಗ್ರಾಮದಲ್ಲಿ ಈ ಉಡುಗೊರೆಗಳನ್ನು ಮನೆಮನೆಗೂ ಸುಧಾಕರ್ ಬೆಂಬಲಿಗರು ತಲುಪಿಸಿದ್ರು. ಆದ್ರೆ ಗೆದ್ದ ಮೇಲೆ ಇಲ್ಲಿಯವರೆಗೂ ಈ ಗ್ರಾಮದತ್ತ ಸುಳಿಯದೇ ನಿರ್ಲಕ್ಷ್ಯ ತೋರಿರೋ ಶಾಸಕರ ವಿರುದ್ಧ ಆಕ್ರೋಶಗೊಂಡಿರೋ ಜನರು, ತಮಗೆ ನೀಡಿದ್ದ ಉಡುಗೊರೆಗಳನ್ನು ಗ್ರಾಮದ ನಡುರಸ್ತೆಯಲ್ಲಿ ರಾಶಿ ಹಾಕಿ ಬೆಂಕಿಯಲ್ಲಿ ಸುಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.