ಚಿಕ್ಕಮಗಳೂರು: ಜಾಯಿಂಟ್ ಅಕೌಂಟ್ ಇದ್ದಿದ್ದೇ ವರವಾಯ್ತು. 150 ಲೈಟ್‍ಗೆ 12 ಲಕ್ಷ, ನೈಸರ್ಗಿಕವಾಗಿ ಹರಿಯೋ ನೀರಿಗೆ ಲಕ್ಷ-ಲಕ್ಷ. ಖರ್ಚಿನ ಲೆಕ್ಕ ನೋಡೋಕೆ ಪಾಸ್ ಬುಕ್ ಕೇಳದ್ರೆ ಸದಸ್ಯರೇ ಅಲಕ್ಷ್ಯ. ಸಿಎಂ, ಡಿಸಿ, ಸಿಇಓ, ಇಓ, ಎಸಿಬಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಪತ್ರ ಬರೆದ್ರೂ ಅವರ್ಯಾರು ಹತ್ತಿರವೂ ಸುಳಿಯಲಿಲ್ಲ. ಅಧ್ಯಕ್ಷೆ ಹಾಗೂ ಪಿಡಿಓ ಬಾಯ್ಬಿಟ್ರೆ ಸಿಗಲಿದೆ ಎಲ್ಲದಕ್ಕೂ ಉತ್ತರ. ಇದು ಕಾಫಿನಾಡಿನ ಗ್ರಾಮ ಪಂಚಾಯಿತಿ ಸದಸ್ಯರ ನೋವಾಗಿದೆ.
Advertisement
ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಪೀಠದ ಗ್ರಾಮ ಪಂಚಾಯಿತಿಗೆ ಸೇರಿದ ಹಣವನ್ನು ಲೂಟಿ ಮಾಡಲಾಗಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಿತ ಹಾಗೂ ಪಿಡಿಓ ಮಹೇಶ್ ಹೆಸರಲ್ಲಿ ಬ್ಯಾಂಕ್‍ನಲ್ಲಿ ಜಂಟಿ ಖಾತೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಈ ಇಬ್ಬರೂ ಸುಮಾರು 30 ಲಕ್ಷಕ್ಕೂ ಅಧಿಕ ಹಣವನ್ನ ಸ್ವಾಹ ಮಾಡಿದ್ದಾರೆ.
Advertisement
ಪಂಚಾಯಿತಿ ವ್ಯಾಪ್ತಿಯಲ್ಲಿ 300 ಲೈಟ್ ಪಾಯಿಂಟ್‍ಗಳಿವೆ. ಇದಕ್ಕಾಗಿ 2 ವರ್ಷದಲ್ಲಿ ಬಲ್ಬ್ ಗಾಗಿಯೇ 12 ಲಕ್ಷ ಬಿಲ್ ಮಾಡಿದ್ದಾರೆ. 25 ಸಾವಿರ ರೂಪಾಯಿ ಮೌಲ್ಯದ ಪೈಪ್ ತಂದು 1 ಲಕ್ಷ ರೂಪಾಯಿ ಬಿಲ್ ಮಾಡಿದ್ದಾರೆ ಎಂದು ಗ್ರಾಮಪಂಚಾಯ್ತಿ ಸದಸ್ಯ ಮಂಜುನಾಥ್ ಈ ಹಿಂದಿನ ಪಿಡಿಓ ಮಹೇಶ್ ಹಾಗೂ ಹಾಲಿ ಅಧ್ಯಕ್ಷೆ ಸುಮಿತ ವಿರುದ್ಧ ಆರೋಪಿಸಿದ್ದಾರೆ.
Advertisement
Advertisement
ಈ ಗ್ರಾಮ ಪಂಚಾಯ್ತಿಗೆ ಸ್ವಂತ ಕಟ್ಟಡವಿಲ್ಲ. ಇರೋ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. 2 ವರ್ಷದಿಂದ ತಿಂಗಳಿಗೆ 6.500 ರೂಪಾಯಿಯ ಬಾಡಿಗೆ ಕಟ್ಟಡದಲ್ಲಿದ್ದಾರೆ. ಪಂಚಾಯ್ತಿಗೆ ಒಂದು ಲಕ್ಷ ಅನುದಾನ ಬರುತ್ತದೆ. ಅದರಲ್ಲಿ 25 ಸಾವಿರ ಅಭಿವೃದ್ಧಿ ಪಾಲಾದ್ರೆ, ಉಳಿದ 75 ಸಾವಿರ ಅಧ್ಯಕ್ಷೆ ಹಾಗೂ ಪಿಡಿಓಗೆ ಸೇರುತ್ತದೆ. ಅಭಿವೃದ್ಧಿಯ ಸಭೆಗೆ ಗೈರಾಗುವ ಪಿಡಿಒ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷೆ 2015 ರಿಂದ 2017ನೇ ಸಾಲಿನಲ್ಲಿ ಲಕ್ಷ ಲಕ್ಷ ಲೂಟಿ ಮಾಡಿದ್ದಾರೆ ಅಂತ ಸ್ಥಳೀಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ.
ಒಟ್ಟಾರೆ ಸರ್ಕಾರದಿಂದ ಬರುವ ಅನುದಾನದಲ್ಲಿ ಪಂಚಾಯ್ತಿ ಅಭಿವೃದ್ಧಿ ಮಾಡುವ ಬದಲಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮತ್ತು ಪಿಡಿಓ ತಮ್ಮ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಇನ್ನಾದರೂ ಡಿಸಿ ಹಣವನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews