ನಿಮಗೂ ಫ್ರೀ, ನಮಗೂ ಫ್ರೀ – ವಿದ್ಯುತ್ ಬಿಲ್ ಕಟ್ಟದೇ ಚೆಸ್ಕಾಂ ಸಿಬ್ಬಂದಿಯನ್ನು ವಾಪಸ್ ಕಳುಹಿಸಿದ ಗ್ರಾಮಸ್ಥರು

Public TV
1 Min Read
CURRENT BILL

ಚಾಮರಾಜನಗರ: ಕಾಂಗ್ರೆಸ್ (Congress) ಗ್ಯಾರಂಟಿಗಳಲ್ಲಿ ಒಂದಾದ 200 ಯುನಿಟ್ ಉಚಿತ ವಿದ್ಯುತ್ ಘೋಷಣೆ ಹಿನ್ನೆಲೆಯಲ್ಲಿ ಬಿಲ್ ಕಟ್ಟಲ್ಲ ಎಂದು ಚೆಸ್ಕಾಂ (CHESCOM) ಸಿಬ್ಬಂದಿಯನ್ನು ಗ್ರಾಮಸ್ಥರು ವಾಪಸ್ ಕಳುಹಿಸಿದ ಘಟನೆ ಚಾಮರಾಜನಗರದಲ್ಲಿ (Chamarajanagara) ನಡೆದಿದೆ.

ಜಿಲ್ಲೆಯ ಯಳಂದೂರು (Yelandur) ತಾಲೂಕಿನ ಹೊನ್ನೂರಿನಲ್ಲಿ (Honnuru) ಈ ಘಟನೆ ನಡೆದಿದ್ದು, ಗ್ರಾಮಸ್ಥರು ವಿದ್ಯುತ್ ಶುಲ್ಕ ಪಾವತಿಸದೇ ಮೀಟರ್ ರೀಡರ್‌ಗೆ ಬಂದಿದ್ದ ವ್ಯಕ್ತಿಯನ್ನು ವಾಪಸ್ ಕಳುಹಿಸಿದ್ದಾರೆ. ವಿದ್ಯುತ್ ನಿಮಗೂ ಫ್ರೀ, ನಮಗೂ ಫ್ರೀ ಹಾಗೂ ಅಧಿಕಾರಗಳಿಗೂ ಫ್ರೀ ಎಂದು ಸಿದ್ದರಾಮಯ್ಯ (Siddaramaiah) ಹೇಳಿದ್ದರು. ಅಲ್ಲದೇ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನ್ನು ಸಹ ನೀಡಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಎಂ ಆಯ್ಕೆ ಇನ್ನೂ ಅಂತಿಮವಾಗಿಲ್ಲ; ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ – ಸುರ್ಜೇವಾಲ ಸ್ಪಷ್ಟನೆ

ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಚಾಮರಾಜನಗರ ಜಿಲ್ಲೆಯಿಂದ ಮೂವರು ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ್ದೇವೆ. ನಾವು ಯಾಕೆ ಬಿಲ್ ಕಟ್ಟಬೇಕು ಎಂದು ಬಿಲ್ ಪಡೆಯಲು ನಿರಾಕರಿಸಿ ಚೆಸ್ಕಾಂ ಸಿಬ್ಬಂದಿಯನ್ನು ವಾಪಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ನೀವೇ ಸಿಎಂ ಆಗಿ – ಡಿಕೆಶಿ ಪಟ್ಟು, ಧರ್ಮ ಸಂಕಟದಲ್ಲಿ ಖರ್ಗೆ

Share This Article