ಬ್ರೆಜಿಲಿಯಾ: ಅನಕೊಂಡಾ ಹಾವಿಗೆ ಆಹಾರವಾಗಿಬಿಡುತ್ತಿದ್ದ ನಾಯಿಯನ್ನ ಗ್ರಾಮಸ್ಥರು ರಕ್ಷಣೆ ಮಾಡಿರುವ ಘಟನೆ ಬ್ರೆಜಿಲ್‍ನಲ್ಲಿ ನಡೆದಿದ್ದು, ಇದರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
ವಿಡಿಯೋದ ಆರಂಭದಲ್ಲಿ ನದಿ ತೀರದಲ್ಲಿ ನಾಯಿಯನ್ನ ಸುತ್ತುವರಿದಿದ್ದ ದೈತ್ಯ ಅನಕೊಂಡಾವನ್ನ ಕಾಣಬಹುದು. ನಂತರ ಇಬ್ಬರು ಅಲ್ಲಿಗೆ ಬಂದು ಹಾವಿನ ಬಾಲ ಹಿಡಿದು ನೀರಿನಿಂದ ಹೊರಗೆಳೆದು ಹುಲ್ಲಿಗೆ ಮೇಲೆ ಎಳೆದುಕೊಂಡು ಹೋಗಿದ್ದಾರೆ. ಬಳಿಕ ಮತ್ತೊಬ್ಬ ವ್ಯಕ್ತಿ ಸೇರ್ಪಡೆಗೊಂಡು ಎಲ್ಲರೂ ಸೇರಿ ನಾಯಿಯನ್ನ ಹಾವಿನ ಹಿಡಿತದಿಂದ ಬಿಡಿಸಲು ಯತ್ನಿಸಿದ್ದಾರೆ.
Advertisement
Advertisement
ಅವರಲ್ಲೊಬ್ಬ ವ್ಯಕ್ತಿ ಕೋಲಿನಿಂದ ಹಾವಿಗೆ ಹೊಡೆದಿದ್ದು, ಎರಡು ಮೂರು ಏಟು ತಿಂದ ಬಳಿಕ ಹಾವಿನ ಹಿಡಿತ ಸಡಿಲವಾಗಿ, ನಾಯಿ ಅದರಿಂದ ಬಿಡಿಸಿಕೊಂಡು ಬಂದು ಹಾವಿನ ಕಡೆ ಬೊಗಳಲು ಶುರು ಮಾಡಿದೆ.
Advertisement
ಆಂಡ್ರೀವ್ ಬರೋ ಎಂಬವರು ಇದರ ವಿಡಿಯೋವನ್ನ ಹಂಚಿಕೊಂಡಿದ್ದಾರೆ. ನಾಯಿ ಜಮೀನಿನಿಂದ ಕಾಣೆಯಾಗಿತ್ತು. ಅದಕ್ಕಾಗಿ ಹುಡುಕಾಟ ನಡೆಸಿದಾಗ ಅನಕೊಂಡಾಗೆ ಆಹಾರವಾಗಿಬಿಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಅವರು ಹೇಳಿದ್ದಾರೆ.
ನಂತರ ಗ್ರಮಸ್ಥರು ಕೂಡಲೇ ಕಾರ್ಯಪ್ರವೃತ್ತರಾಗಿ ಅನಕೊಂಡಾದಿಂದ ಇನ್ನೇನು ಕೊಲ್ಲಲ್ಪಡುತ್ತಿದ್ದ ನಾಯಿಯ ರಕ್ಷಣೆಗೆ ಮುಂದಾದರು ಎಂದು ತಿಳಿಸಿದ್ದಾರೆ.
https://www.youtube.com/watch?v=3x7qvzKIc7g