ಬೆಂಗಳೂರು: ಗೋವುಗಳ ಹಾಗೂ ಗೋಮಾಂಸ ಸಾಗಾಟ ಪ್ರಕರಣಗಳು ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದಕ್ಕೆ ಇಂದು ಬಿಡದಿಯಯಲ್ಲಿ ಸಿಕ್ಕ ಘಟನೆಯೂ ಸಾಕ್ಷಿಯಾಗಿದೆ.
ವ್ಯಕ್ತಿಯೊಬ್ಬ ಪುಟ್ಟ ಪುಟ್ಟ ಕರುಗಳನ್ನು ಯೂರಿಯಾ ಚೀಲದಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದನು. ಈ ವಿಚಾರ ತಿಳಿದ ಸ್ಥಳೀಯರು ಅನುಮಾನದ ಮೇರೆಗೆ ಬಿಡದಿಯಲ್ಲಿ ಅಡ್ಡಗಟ್ಟಿ ಆತನ ಆಟೋವನ್ನು ನಿಲ್ಲಿಸಿದ್ದಾರೆ.
Advertisement
ಆಟೋ ನಿಲ್ಲುತ್ತಿದ್ದಂತೆಯೇ ಸ್ಥಳೀಯರು ಒಟ್ಟು ಸೇರಿ ಅದರೊಳಗಡೆ ಇದ್ದ ಚೀಲಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಯೂರಿಯಾ ಚೀಲಗಳೊಳಗೆ ಪುಟ್ಟ ಪುಟ್ಟ ಕರುಗಳು ಒದ್ದಾಡುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಚೀಲಗಳನ್ನು ಆಟೋದಿಂದ ಇಳಿಸಿ ಕಟ್ಟಿದ ಹಗ್ಗವನ್ನು ಬಿಚ್ಚಿದಾಗ ಕರುಗಳು ಹೊರಬಂದವು.
Advertisement
Advertisement
ಈ ದೃಶ್ಯ ನೆರೆದಿದ್ದವರಲ್ಲಿ ಕಣ್ಣೀರು ತರಿಸುವಂತಿತ್ತು. ಆರೋಪಿ ಆಟೋದಲ್ಲಿ ಸುಮಾರು 10-15 ಕರುಗಳನ್ನು ತುಂಬಿಕೊಂಡು ಹೋಗುವ ಪ್ರಯತ್ನ ಮಾಡಿದ್ದಾನೆ. ಕರುಗಳು ಒದ್ದಾಡುತ್ತವೆ ಅನ್ನೋ ಕಾರಣಕ್ಕೆ ಅವುಗಳ ಕಾಲುಗಳನ್ನು ಮುರಿದು ಚೀಲದೊಳಗೆ ತುಂಬಿಸಿದ್ದಾನೆ. ಬಳಿಕ ಉಸಿರಾಡಲೆಂದು ಗೋಣಿಯಲ್ಲಿ ಒಂದು ಸಣ್ಣ ರಂಧ್ರ ಮಾಡಿ, ಚೀಲವನ್ನು ಬಿಗಿಯಾಗಿ ಕಟ್ಟಿದ್ದಾನೆ.
Advertisement
ಆದರೆ ಈ ರೀತಿ ಕಟ್ಟಿ ಎಲ್ಲಿಗೆ, ಯಾಕೆ ಸಾಗಾಟ ಮಾಡುತ್ತಿದ್ದ ಎಂಬುದರ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ. ಬಿಡದಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.