ಚಿಕ್ಕೋಡಿ: ಸಾಮಾನ್ಯವಾಗಿ ದೇವಸ್ಥಾನ ಹಾಗೂ ಮನೆ ಗೃಹಪ್ರವೇಶ ಸಮಯದಲ್ಲಿ ಹೋಮ ಹವನ ಮಾಡುವುದನ್ನು ನೋಡಿದ್ದೇವೆ. ಆದರೆ ಕಳೆದ 15 ವರ್ಷಗಳಿಂದ ರಸ್ತೆ (Road) ನಿರ್ಮಾಣವಾಗದ ಹಿನ್ನೆಲೆಯಲ್ಲಿ ಆದಷ್ಟು ಬೇಗನೇ ರಸ್ತೆ ಅಭಿವೃದ್ಧಿಯಾಗಬೇಕು ಎಂದು ರಸ್ತೆ ಮಧ್ಯದಲ್ಲೆ ಬೆಳಗಾವಿ (Belagavi) ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮಸ್ಥರು ಹೋಮ ನಡೆಸಿದ್ದಾರೆ.
ಅಥಣಿ ಶಾಸಕ ಮಹೇಶ್ ಕುಮಟಳ್ಳಿ (Mahesh Kumathalli) ಅವರಿಗೆ ಹಾಗೂ ಸರ್ಕಾರಕ್ಕೆ ಒಳ್ಳೆಯ ಬುದ್ಧಿ ನೀಡಪ್ಪ ದೇವರೇ ಎಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ವಿನೂತನ ಪ್ರತಿಭಟನೆ ನಡೆಸಲಾಗಿದೆ. ಸುಟ್ಟಟ್ಟಿ ಗ್ರಾಮದಿಂದ ಯಲ್ಲಮ್ಮವಾಡಿ ಗ್ರಾಮದವರೆಗೆ ಸರಿಸುಮಾರು 6 ಕಿ.ಮೀ ರಸ್ತೆ ಕಳೆದ 15 ವರ್ಷದಿಂದ ಸಂಪೂರ್ಣವಾಗಿ ಹದಿಗೆಟ್ಟ ಪರಿಣಾಮವಾಗಿ, ವಾಹನ ಸವಾರರು ಗರ್ಭಿಣಿಯರು, ರೋಗಿಗಳು, ಶಾಲೆ ಮಕ್ಕಳು ಪ್ರತಿಕ್ಷಣವೂ ಸಂಕಷ್ಟ ಪಡುವಂತಾಗಿತ್ತು. ಇದನ್ನೂ ಓದಿ: ಮತ್ತೆ ಹೊಸ ವರಸೆ ಶುರು ಮಾಡಿದ ಮಹಾರಾಷ್ಟ್ರ ಸಿಎಂ, ಗಡಿ ವಿವಾದ ಮಾತುಕತೆಯಿಂದ ಬಗೆಹರಿಯಲಿ: ಏಕನಾಥ ಶಿಂಧೆ
Advertisement
Advertisement
ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದರು. ಯಾವುದೇ ಪ್ರಯೋಜನ ಆಗದ ಹಿನ್ನೆಲೆಯಲ್ಲಿ ರಸ್ತೆ ಮಧ್ಯದಲ್ಲಿ ಹೋಮ ಹವನ ಮಾಡಿ, ಆದಷ್ಟು ಬೇಗನೆ ರಸ್ತೆ ಅಭಿವೃದ್ಧಿಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ವಿನೂತನವಾಗಿ ಪ್ರತಿಭಟನೆ ಮಾಡಿ ಸರ್ಕಾರ ಗಮನವನ್ನು ಸೆಳೆದಿದ್ದಾರೆ. ಇದನ್ನೂ ಓದಿ: ಕದ್ರಿ ದೇವಸ್ಥಾನ ಮಾತ್ರವಲ್ಲ 6 ಸ್ಥಳಗಳು ಟಾರ್ಗೆಟ್ – ಮೊಬೈಲ್‌ನಲ್ಲಿ 6 ಜಾಗ ಸರ್ಚ್ ಮಾಡಿದ್ದ ಬಾಂಬರ್