ಮೈಸೂರು: ಜಿಲ್ಲೆಯ ಟಿ.ನರಸೀಪುರದ ವಿಶ್ವವಿಖ್ಯಾತ ಸೋಮನಾಥೇಶ್ವರ ದೇಗುಲಕ್ಕೆ ಗ್ರಾಮಸ್ಥರೇ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಾತತ್ವ ಇಲಾಖೆಯ ವಿರುದ್ಧ ಅನಿರ್ಧಿಷ್ಟ ಪ್ರತಿಭಟನೆ ಆರಂಭಿಸಿದ್ದು, ದೇಗುಲದ ಮುಂಭಾಗವೇ ಕುಳಿತು ಪ್ರತಿಭಟನೆ ಆರಂಭಿಸಿದ್ದಾರೆ. ಮನೆ ನಿರ್ಮಿಸಿಕೊಳ್ಳಲು ಬಂದ ಹಣವನ್ನ ಬಿಡುಗಡೆ ಮಾಡಿಲ್ಲ. ಮನೆ ನಿರ್ಮಾಣಕ್ಕೂ ಅವಕಾಶ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.
Advertisement
Advertisement
ದೇಗುಲದ ಸುತ್ತಲಿನ ಯಾವುದೇ ದಿಕ್ಕಿನಲ್ಲಿ 100ಮೀ. ವ್ಯಾಪ್ತಿಯಲ್ಲಿ ಯಾರೂ ಮನೆ ಕಟ್ಟುವಂತಿಲ್ಲ ಎಂದು 2010ರಲ್ಲಿ ಕೇಂದ್ರ ಸರ್ಕಾರ ಆದೇಶಿಸಿ. ಆದರೆ 100 ಮೀ. ವ್ಯಾಪ್ತಿಯ ಹೊರತುಪಡಿಸಿ ಮನೆ ನಿರ್ಮಾಣಕ್ಕೆ ಅನುಮತಿ ನೀಡಿದೆ. ಇದಕ್ಕೆ ವಿವಿಧ ಯೋಜನೆಯಡಿ ಬಂದ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದು ಭಾರತೀಯ ಪುರಾತತ್ವ ಇಲಾಖೆ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.
Advertisement
ಸೋಮನಾಥೇಶ್ವರ ದೇಗುಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಬರುತ್ತಾರೆ. ಇಂದು ಸಹ ಅನೇಕ ವಿದೇಶಿಗರ ಆಗಮನವಾಗಿದೆ. ಆದರೆ ಗೇಟ್‍ಗೆ ಬೀಗ ಹಾಕಿರುವುದನ್ನ ಕಂಡು ವಾಪಾಸ್ ಹೋಗುತ್ತಿದ್ದಾರೆ.
Advertisement