ಮಡಿಕೇರಿ: ಸರ್ಕಾರಿ ಕೆಲಸ (Government Job) ಅಂದ ಮೇಲೆ ಸಾಮಾನ್ಯವಾಗಿ ರಜೆ ಬಂತೆಂದರೆ ಊರಿಗೋ ಪ್ರವಾಸಿ ತಾಣಗಳಿಗೋ ತೆರಳಿ ರಜೆಯನ್ನು ಆನಂದದಾಯಕವಾಗಿ ಕಳೆಯುವುದು ವಾಡಿಕೆ. ಆದರೆ ಇಲ್ಲೊಬ್ಬ ಶಿಕ್ಷಕ (Teacher) ರು ಸಂಪೂರ್ಣ ರಜೆಯ ಅವಧಿಯನ್ನು ಶಾಲಾಭಿವೃದ್ಧಿಗಾಗಿ ಬಳಸಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.
Advertisement
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸತೀಶ್ ಸಿ ಎಸ್ ತಮ್ಮ ರಜೆಯ ಅವಧಿಯನ್ನು ಕಾಲಹರಣ ಮಾಡದೆ ದಿನಕ್ಕೊಂದು ಪ್ರಾಣಿ ಪಕ್ಷಿಗಳ ಕಲಾಕೃತಿಯನ್ನು ಶಾಲಾ ಆವರಣದಲ್ಲಿ ನಿರ್ಮಿಸುವುದರ ಮೂಲಕ ಮಕ್ಕಳ ಕಲಿಕೆಗೆ ಸಹಾಯಕವಾಗುವ ವಿನೂತನ ಉದ್ಯಾನವನ ನಿರ್ಮಿಸಿದ್ದಾರೆ.
Advertisement
Advertisement
ವಿಶೇಷವೆಂದರೆ ಇಲ್ಲಿ ಶಿಕ್ಷಕ ಸತೀಶ್ ಬಳಸಿರುವುದು ನಿರುಪಯುಕ್ತ ವಸ್ತುಗಳನ್ನು ಹಳೆಯ ಪ್ಲಾಸ್ಟಿಕ್ ಬಾಟಲ್ ಗಳು ಪ್ಲಾಸ್ಟಿಕ್ ಕವರ್ ಗಳು ಹಳೆಯ ಬಟ್ಟೆ ಗುಜುರಿ ಅಂಗಡಿಯಿಂದ ತಂದ ಒಂದಷ್ಟು ಹಳೆಯ ರಾಡ್ ಮತ್ತು ತಂತಿ ಜೊತೆಗೆ ಸಿಮೆಂಟ್ ಬಳಸಿ ಪ್ರಾಣಿಗಳ ಮಾದರಿಗಳನ್ನು ನಿರ್ಮಿಸುತ್ತಿದ್ದಾರೆ.
Advertisement
ಬೆಳಗ್ಗೆ 8 ರಿಂದ ಆರಂಭವಾಗುವ ಇವರ ಕೆಲಸ ಸಂಜೆ 6:30 ರವರೆಗೂ ನಡೆಯುತ್ತದೆ ಶಾಲೆಯ ವಿದ್ಯಾರ್ಥಿಗಳಾದ ತನ್ವಿ ದುಷ್ಯಂತ್ ಯುಗನ್ ಶ್ರೀಶ್ಮ ಬೃಂದಾ ರಜೆಯಾದರು ಶಾಲೆಗೆ ಬಂದು ಶಿಕ್ಷಕರಿಗೆ ಸಹಾಯ ಮಾಡುತ್ತಿದ್ದಾರೆ. ಹಿಂದೊಮ್ಮೆ ಸತೀಶ್ ತಂತಿ ಮತ್ತು ಕಾಗದದ ರಟ್‍ಗಳನ್ನು ಬಳಸಿ ಕಲಾಕೃತಿಗಳನ್ನು ನಿರ್ಮಿಸಿದ್ದರು. ಇದನ್ನೂ ಓದಿ: ರಾಮನನ್ನು ಆದರ್ಶ ಪುರುಷ ಎಂದು ತೋರಿಸಿದ್ದು ವಾಲ್ಮೀಕಿ: ಜಗದೀಶ್ ಶೆಟ್ಟರ್
ಕೊರೊನಾ (Corona Virus) ಅವಧಿಯಲ್ಲಿ ದುಷ್ಕರ್ಮಿಗಳು ಇದನ್ನು ಕದ್ದೊಯ್ದಿದ್ದರು. ಈ ಬಾರಿ ಶಿಕ್ಷಕರು ಕಾಂಕ್ರಿಟ್ ಬಳಸಿ ದಿನಕ್ಕೊಂದರಂತೆ 15 ದಿನಗಳ ರಜೆ ಅವಧಿಯಲ್ಲಿ ಜಿಂಕೆ, ಹುಲಿ, ಜಿರಾಫೆ, ಕುದುರೆ, ಕಾಂಗರೂ, ಡೈನೋಸಾರ್, ಡ್ರ್ಯಾಗನ್, ಚಿಂಪಾಂಜಿ, ಘೆಂಡಾಮೃಗ, ಆಸ್ಟ್ರಿಚ್, ಮೊಸಳೆ, ಫೆಲಿಕಾನ್ ಹಾಗೂ ಗ್ಲೋಬ್ ಹೀಗೆ 15 ಕಲಾಕೃತಿಗಳನ್ನು ನಿರ್ಮಿಸಿದ್ದಾರೆ.
ಪ್ರತಿವರ್ಷ ಶಾಲೆಯಲ್ಲಿ ಬೇಸಿಗೆ ಶಿಬಿರ ಆಯೋಜಿಸಲಾಗುತ್ತಿತ್ತು. ಈ ಬಾರಿ ಶಾಲಾ ಪರಿಸರ ಆಕರ್ಷಣಿಯಗೊಳಿಸಿ ಮಕ್ಕಳು ಆಸಕ್ತಿಯಿಂದ ಶಾಲೆಗೆ ಬರಬೇಕು. ಅವರ ಹಾಜರಾತಿ ಉತ್ತಮಗೊಳಿಸಲು ಈ ಯೋಜನೆ ಹಾಕಿಕೊಂಡಿದ್ದಾರೆ. ಶಿಕ್ಷಕರಾದ ಸತೀಶ್ ಅವರ ಕಾರ್ಯಕ್ಕೆ ಇಡೀ ಊರಿನ ಜನರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.