ಚಿಕ್ಕಬಳ್ಳಾಪುರ: ಸತ್ತ ಗುಬ್ಬಚ್ಚಿಗೆ ಗ್ರಾಮಸ್ಥರರೆಲ್ಲರೂ ಸೇರಿ ಸಮಾಧಿ ನಿರ್ಮಾಣ ಮಾಡಿ ತಿಥಿ ಮಾಡಿದ್ದಾರೆ. ಈ ಅಪರೂಪದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಸವಪಟ್ಟಣ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Advertisement
ಸತ್ತಿರುವ ಗುಬ್ಬಚ್ಚಿಯ ಫ್ಲೆಕ್ಸ್ ಬ್ಯಾನರ್ ಹಾಕಿ ಮಿಸ್ ಯೂ ಗೆಳೆಯ ಮತ್ತೆ ಹುಟ್ಟಿ ಬಾ ಗೆಳೆಯಾ, ಹೀಗೆ ಬರೆದು 11 ದಿನಗಳ ನಂತರ ಬ್ಯಾನರ್ ಹಾಕಿ ಸಂಪ್ರದಾಯದಂತೆ ತಿಥಿ ಸಹ ಮಾಡಿದ್ದಾರೆ. ತಿಥಿ ದಿನದಂದು ಬಾಡೂಟ ಸಹ ಹಾಕಿದ್ದಾರೆ.
Advertisement
Advertisement
ಮನೆಯ ಸದಸ್ಯರೇ ಸತ್ತರೇ 11ನೇ ಕಾರ್ಯ, ಪುಣ್ಯತಿಥಿ ಮಾಡೋರು ಕಡಿಮೆ. ಕೆಲವರು ಮನೆಯಲ್ಲಿ ಸಾಕಿದ ನಾಯಿ ಸತ್ತಾಗ ಅದರ ತಿಥಿ ಕಾರ್ಯವನ್ನು ಮಾಡಿ, ನೂರಾರು ಜನರಿಗೆ ಊಟ ಹಾಕಲಾಗಿದೆ. ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಈ ಗುಬ್ಬಚ್ಚಿ ಎಲ್ಲರ ಮನೆಗೆ ಹೋಗುತ್ತಿತ್ತಂತೆ. ಹೀಗಾಗಿ ಈ ಗುಬ್ಬಚ್ಚಿ ಗ್ರಾಮಸ್ಥರಿಗೆ ಬಲು ಇಷ್ಟವಂತೆ. ಆದರೆ ಅದೇನಾಯ್ತೋ ಏನೋ ಅದೊಂದು ದಿನ ಗುಬ್ಬಚ್ಚಿ ಮರಿ ಅಸುನೀಗಿದೆ. ಇದ್ರಿಂದ ನೊಂದ ಗ್ರಾಮಸ್ಥರೆಲ್ಲರೂ ಸೇರಿ ವಿಧಿ ವಿಧಾನಗಳೊಂದಿಗೆ ಅಂತ್ಯಕ್ರಿಯೆ ಮಾಡಿದ್ದಾರೆ. ಇದನ್ನೂ ಓದಿ: ನಾನು ಯಾವತ್ತೂ ಹಿಜಬ್, ಬುರ್ಖಾ ಪರ ಇಲ್ಲ: ಜಾವೇದ್ ಅಖ್ತರ್
Advertisement
ಸಮಾಧಿ ನಿರ್ಮಿಸಿ ತಿಥಿ ಮಾಡಿದ್ದಾರೆ. ಈ ಸುದ್ದಿಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿದ್ದಂತೆ. ಗ್ರಾಮದಲ್ಲಿ ಮಾಡಿರುವ ಈ ಅಂತ್ಯಸಂಸ್ಕಾರಕ್ಕೆ ಎಲ್ಲಿಲ್ಲದ ಅಭಿನಂದನೆಗಳು ಸುರಿಮಳೆ ಬಂದಿದೆ. ಪಕ್ಷಿ ಪ್ರೇಮವನ್ನು ಮೆರೆದ ಈ ಗ್ರಾಮದ ಜನರ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?