ಬಳ್ಳಾರಿ: ಇಂದಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು ಜನರ ಬದುಕಿನ ಮೇಲೆ ಸಾಕಷ್ಟು ಪ್ರಭಾವ ಬೀರುತ್ತಿವೆ. ಕೆಲ ಸುಳ್ಳು ಸುದ್ದಿಗಳಂತೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಅದೆಷ್ಟೋ ಜನರ ಬದುಕನ್ನು ಬಲಿ ಪಡೆದಿವೆ. ಆದರೆ ಸತ್ತವವನ್ನು ಬದುಕಿಸಲು ಜನ ವಿಲಕ್ಷಣ ಪ್ರಯೋಗ ಮಾಡಿದ ಘಟನೆ ಗಣಿನಾಡು ಬಳ್ಳಾರಿಯಲ್ಲಿ ನಡೆದಿದೆ.
Advertisement
ಆಧುನೀಕರಣ ಎನ್ನುವುದು ಎಷ್ಟು ಮುಂದುವರೆದಿದ್ದರೂ ಮೌಢ್ಯತೆ, ಮೂಢನಂಬಿಕೆ ಎನ್ನುವುದು ಇನ್ನೂ ಜೀವಂತವಾಗಿಯೇ ಇದೆ. ಇದಕ್ಕೆ ಬಳ್ಳಾರಿ ಜಿಲ್ಲೆಯ ಈ ಘಟನೆಯೇ ಸಾಕ್ಷಿಯಾಗಿದೆ. ಹೌದು, ಬಳ್ಳಾರಿಯ ಸಿರವಾರ ಗ್ರಾಮದ ಶೇಖರ್ ಹಾಗೂ ಗಂಗಮ್ಮಾ ಅವರ ಕಿರಿಯ ಮಗ ಭಾಸ್ಕರ್ ನೀರಿನ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದನು. ಇದನ್ನು ನೋಡಿದ ಕೆಲ ಗ್ರಾಮಸ್ಥರು ನೀರಿನಲ್ಲಿ ಮುಳುಗಿ ಸತ್ತವರನ್ನು 2 ಗಂಟೆಗಳ ಒಳಗೆ ಉಪ್ಪಿನಲ್ಲಿ ಹುದುಗಿಸಿಟ್ಟರೆ, ಅವರು ಮತ್ತೆ ಬದುಕುತ್ತಾರೆ ಎಂಬ ಪೋಸ್ಟ್ ನಂಬಿ ಅದೇ ರೀತಿ ಮಾಡಿದ್ದಾರೆ. ಇದನ್ನೂ ಓದಿ: ನೆಲಮಂಗಲದಲ್ಲಿ ಹೆದ್ದಾರಿಗೆ ನುಗ್ಗಿದ ನೀರು – ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್
Advertisement
Advertisement
ಆ ಒಂದು ಪೋಸ್ಟ್ ನಂಬಿ ಜನರು ಮಗುವಿನ ಶವವನ್ನು ಸತತ ಎಂಟು ಗಂಟೆಗಳ ಕಾಲ ಉಪ್ಪಿನಲ್ಲಿಟ್ಟು ಮತ್ತೆ ಬದುಕುತ್ತಾನೆ ಎಂದು ಕಾದು ಕುಳಿತಿದ್ದರು. ಆದರೆ 8 ಗಂಟೆ ಬಳಿಕವೂ ಬಾಲಕ ಭಾಸ್ಕರ್ ಬದುಕದಿದ್ದಾಗ ಒಂದು ನಿರ್ಧಾರಕ್ಕೆ ಬಂದ ಗ್ರಾಮಸ್ಥರು ಶವ ಸಂಸ್ಕಾರಕ್ಕೆ ಮುಂದಾದರು. ಇದನ್ನೂ ಓದಿ: ಜಮೀರ್ `ಗಣೇಶ’ ಅಸ್ತ್ರ – ಇಷ್ಟು ದಿನ ಇಲ್ಲದ್ದು ಈಗ್ಯಾಕೆ? ಶಾಸಕರ ನಡೆಗೆ ಸ್ಥಳೀಯರಿಂದ ಆಕ್ರೋಶ
Advertisement
ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಪೋಸ್ಟ್ ನಂಬಿದ ಗ್ರಾಮಸ್ಥರು ವಿಲಕ್ಷಣ ಪ್ರಯೋಗಕ್ಕೆ ಮುಂದಾಗಿದ್ದರು. ಅದೆಷ್ಟು ಮುಂದುವರೆದಿದ್ದರೂ ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಬರುವ ಅಸಂಬದ್ಧ ಪೋಸ್ಟ್‌ಗಳನ್ನು ನಂಬುವುದು ನಿಜಕ್ಕೂ ಆಶ್ಚರ್ಯ ಅನಿಸುತ್ತದೆ. ವೈರಲ್ ಪೋಸ್ಟ್‌ಗಳನ್ನು ನಂಬುವ ಜನ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ.