ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಳಗಿ ಗ್ರಾಮಸ್ಥರು ಗ್ರಾಮದಿಂದ ಬೇರೆಡೆಗೆ ಹೋಗಲು ಜೀವ ಕೈಯಲ್ಲಿ ಹಿಡ್ಕೊಂಡು ಓಡಾಡ್ತಿದ್ದಾರೆ. ಯಾಕಂದ್ರೆ ಗ್ರಾಮದಿಂದ ರಟ್ಟೀಹಳ್ಳಿಗೆ ಸಂಪರ್ಕ ಕಲ್ಪಿಸಲು ರಸ್ತೆ ಸಮಸ್ಯೆ ಎದುರಾಗಿದೆ. ಸೂಕ್ತ ರಸ್ತೆ ಇಲ್ಲದ್ದಕ್ಕೆ ಗ್ರಾಮಸ್ಥರು ತುಂಬಿ ಹರಿಯೋ ಕುಮುದ್ವತಿ ನದಿಯಲ್ಲಿ ತೆಪ್ಪದ ಮೂಲಕ ನದಿ ದಾಟಿ ಹೋಗುತ್ತಿದ್ದಾರೆ.
ನದಿಯ ಎರಡೂ ಕಡೆಗಳಲ್ಲಿ ಹಗ್ಗವನ್ನ ಕಟ್ಟಿ ಹಗ್ಗದ ಸಹಾಯದಿಂದ ತೆಪ್ಪದಲ್ಲಿ ಪಯಣಿಸಬೇಕಾದ ದುಃಸ್ಥಿತಿ ಬಂದಿದೆ. ಶಾಲಾ ಕಾಲೇಜು ಸೇರಿದಂತೆ ಗ್ರಾಮಸ್ಥರು ಎಲ್ಲದಕ್ಕೂ ರಟ್ಟೀಹಳ್ಳಿ ಗ್ರಾಮವನ್ನೇ ಅವಲಂಬಿಸಿರೋದ್ರಿಂದ ಅರ್ಧ ಕಿ.ಮೀ.ನಷ್ಟು ತೆಪ್ಪದಲ್ಲಿ ನದಿ ದಾಟಿಕೊಂಡು ಹೋಗ್ತಿದ್ದಾರೆ. ಇದನ್ನೂ ಓದಿ: ಶಿಥಿಲಗೊಂಡ ಸೇತುವೆ- ಜೀವವನ್ನ ಕೈಯಲ್ಲಿ ಹಿಡಿದುಕೊಂಡು ಶಾಲೆಗೆ ತೆರಳುತ್ತಿರುವ ವಿದ್ಯಾರ್ಥಿಗಳು
Advertisement
ನದಿಗೆ ಬ್ರಿಡ್ಜ್ ನಿರ್ಮಾಣ ಆಗಿದ್ರೂ ಸೇತುವೆಗೆ ಹೋಗಲು ರಸ್ತೆ ಇಲ್ಲದ್ದರಿಂದ ಗ್ರಾಮಸ್ಥರು ತೆಪ್ಪದಲ್ಲಿ ಪಯಣಿಸ್ತಿದ್ದಾರೆ. ಸ್ವಲ್ಪವೇ ಯಾಮಾರಿದ್ರೂ ಯಮಲೋಕ ಸೇರೋದು ಗ್ಯಾರಂಟಿ ಅನ್ನೋ ಹಾಗೆ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ತೆಪ್ಪದ ಮೂಲಕ ಪ್ರಯಾಣ ಮಾಡ್ತಿದ್ದಾರೆ.
Advertisement
ತೆಪ್ಪ ಬಿಟ್ಟು ಬೇರೆ ಮಾರ್ಗದ ಮೂಲಕ ಗ್ರಾಮಸ್ಥರು ರಟ್ಟೀಹಳ್ಳಿ ತಲುಪಬೇಕಾದ್ರೆ ಹನ್ನೆರಡು ಕಿ.ಮೀ ದೂರ ಪ್ರಯಾಣ ಮಾಡಬೇಕಾಗಿದೆ. ಹೀಗಾಗಿ ಅನಿವಾರ್ಯ ಎಂಬಂತೆ ಗ್ರಾಮಸ್ಥರು ತೆಪ್ಪವನ್ನೆ ನದಿ ದಾಟಲು ಅವಲಂಭಿಸಿದ್ದಾರೆ. ಸರ್ಕಾರ ಮತ್ತು ಜಿಲ್ಲಾಡಳಿತ ಆದಷ್ಟು ಬೇಗ ರಸ್ತೆ ನಿರ್ಮಿಸಿಕೊಟ್ಟು ತೆಪ್ಪದ ಪ್ರಯಾಣ ತಪ್ಪಿಸಬೇಕು ಅಂತಾ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೋಟ್ ನಲ್ಲಿಯೇ ಸಾಗುತ್ತಿದೆ 6 ಗ್ರಾಮಗಳ ಗ್ರಾಮಸ್ಥರ ಜೀವ