ಯಾದಗಿರಿ: ಜಿಲ್ಲೆಯ ವರ್ಕನಳ್ಳಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಕಲುಷಿತ ನೀರು ಕುಡಿದು ಗ್ರಾಮಸ್ಥರು ಅನಾರೋಗ್ಯಕ್ಕಿಡಾಗುತ್ತಿದ್ದು ವಾಂತಿ ಭೇದಿ, ಜ್ವರ ,ಕೆಮ್ಮು ಹೀಗೆ ಸಣ್ಣ ಪುಟ್ಟ ಕಾಯಿಲೆಗಳಿಂದ ಸುಮಾರು 80 ಜನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಮಕ್ಕಳು, ಹಿರಿಯ, ಮಹಿಳೆಯರು ಎನ್ನದೇ ಎಲ್ಲಾ ವಯೋಮಾನದವರು ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿದ್ದು, ದಿನದಿಂದ ದಿನಕ್ಕೆ ಗ್ರಾಮಸ್ಥರ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದೆ. ಈ ಅನಾಹುತಕ್ಕೆ ಗ್ರಾಮ ಪಂಚಾಯತಿ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಕಳೆದ ಒಂದು ವಾರದಿಂದ ಗ್ರಾಮಕ್ಕೆ ಕಲುಷಿತ ನೀರು ಸರಬರಾಜು ಆಗುತ್ತಿದ್ದರೂ ಅಧಿಕಾರಿಗಳು ಯಾವುದೇ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಪರಿಣಾಮ ದಿನದಿಂದ ಪ್ರತಿದಿನ 20 ರಿಂದ 30 ಮಂದಿ ಅನಾರೋಗ್ಯ ತುತ್ತಾಗುತ್ತಿದ್ದಾರೆ.
Advertisement
Advertisement
ಈಗಾಗಲೇ ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ರಾಜ್ಯ ಪರಿಸರ ಮಾಲಿನ್ಯ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಲುಷಿತ ನೀರಿನಿಂದ ರೋಗ ಮತ್ತಷ್ಟು ಉಲ್ಭಣಗೊಳ್ಳುವ ಶಂಕೆ ವ್ಯಕ್ತಪಡಿಸಿದ್ದಾರೆ. ಕುಡಿಯುವ ನೀರಿನ ಸ್ಯಾಂಪಲ್ ಸಂಗ್ರಹಿಸಿದ ಅಧಿಕಾರಿಗಳು ಲ್ಯಾಬ್‍ನಿಂದ ತುರ್ತು ವರದಿ ಕೇಳಿದ್ದಾರೆ. ಗ್ರಾಮದಲ್ಲಿ ಕಣ್ಮೆರೆಯಾದ ಸ್ವಚ್ಛತೆಗೆ ಬೇಸರ ವ್ಯಕ್ತಪಡಿಸಿರುವ ಆರೋಗ್ಯಾಧಿಕಾರಿಗಳು ತಕ್ಷಣ ಗ್ರಾಮವನ್ನ ಶುಚಿಗೊಳಿಸುವಂತೆ ಸೂಚನೆ ನೀಡಿದ್ದಾರೆ.