ಬೆತ್ತದಿಂದ ತಾವೇ ತೂಗು ಸೇತುವೆ ನಿರ್ಮಿಸಿ ಸಂಚರಿಸ್ತಿದ್ದಾರೆ ಗ್ರಾಮಸ್ಥರು

Public TV
2 Min Read
hsn setuve

– ಪ್ರೇಕ್ಷಣೀಯ ಸ್ಥಳಗಳಿರುವ ಊರು

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಂಗಡಹಳ್ಳ ಗ್ರಾಮ ಪಂಚಾಯ್ತಿಯ ಗ್ರಾಮವೊಂದರಲ್ಲಿ ಹೊಳೆ ದಾಟಲು ಜನರು ತಾವೇ ಬೆತ್ತದಿಂದ ತೂಗು ಸೇತುವೆಯನ್ನು ನಿರ್ಮಿಸಿ ಬಳಸುತ್ತಿದ್ದಾರೆ.

ಜಾಗಟ ಗ್ರಾಮದ ಜನರು ಹೊಳೆ ದಾಟಲು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕು. ಈ ಗ್ರಾಮದಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳಿದ್ದು, ಗ್ರಾಮಸ್ಥರ ಪ್ರಮುಖ ಆದಾಯದ ಮೂಲ ಕೃಷಿ ಆಗಿದೆ. ಕಳೆದ ನೂರಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿಯೇ ವಾಸವಿದ್ದಾರೆ. ಗ್ರಾಮದ ಪಕ್ಕದಲ್ಲಿಯೇ ಕುಮಾರಧಾರ ಹೊಳೆ ಹರಿಯುತ್ತದೆ.

hsn setuve 1

ಹೊಳೆಯ ಮತ್ತೊಂದು ಬದಿಯಲ್ಲಿ ಗ್ರಾಮಸ್ಥರ ಹೊಲ ಗದ್ದೆ ತೋಟಗಳಿವೆ. ಎರಡು ಕುಟುಂಬಗಳು ಹೊಳೆಯ ಮತ್ತೊಂದು ಬದಿಯಲ್ಲಿಯೇ ವಾಸವಿದ್ದಾರೆ. ಆದರೆ ಇವರಿಗೆಲ್ಲ ಹೊಳೆ ದಾಟುವುದು ಒಂದು ದೊಡ್ಡ ಸಹಾಸ. ಬೇಸಿಗೆಯಲ್ಲಿ ನೀರು ಕೊಂಚ ಕಡಿಮೆ ಇದ್ದು ಅಲ್ಲಿಂದ ಹೇಗೋ ದಾಟುತ್ತಾರೆ. ಆದರೆ ಒಂದು ಅಡಿಗಿಂತ ಹೆಚ್ಚು ನೀರು ಬಂದರೂ ಸಹ ಹೊಳೆ ದಾಟುವುದು ಜೀವಕ್ಕೆ ಅಪಾಯ ತರುತ್ತದೆ. ಹಲವಾರು ವರ್ಷಗಳಿಂದ ಇಲ್ಲಿಯ ಜನರು ತಮ್ಮ ಗದ್ದೆ, ಹೊಲಗಳಿಗೆ ತೆರಳಲು ತಾವೇ ಸ್ವತಃ ಸೇತುವೆ ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.

hsn setuve 2

ಕಾಡಿಗೆ ಹೋಗಿ ಕಾಡು ಪ್ರಾಣಿಗಳಿಂದ ತಪ್ಪಿಸಿಕೊಂಡು ವಿಶೇಷವಾದ ಬೆತ್ತವನ್ನು ತೆಗೆದುಕೊಂಡು ಬಂದು ಈ ಸೇತುವೆ ನಿರ್ಮಿಸುತ್ತಾರೆ. ವರ್ಷಕ್ಕೆ ಎರಡು ಬಾರಿ ಈ ರೀತಿಯಲ್ಲಿ ಗ್ರಾಮಸ್ಥರೇ ತಮ್ಮ ಸೇತುವೆಯನ್ನು ನಿರ್ಮಿಸಿಕೊಳ್ಳುತ್ತಾರೆ. ವಿಶಿಷ್ಟವಾದ ಬೆತ್ತವನ್ನು ತೆಗೆದುಕೊಂಡು ಬಂದು ಸರ್ಕಾರದ ಯಾವುದೇ ಸಹಾಯ ಇಲ್ಲದೆ ತಾವೇ ಸೇತುವೆಯನ್ನು ನಿರ್ಮಿಸುತ್ತಾರೆ. ಮಕ್ಕಳು, ವೃದ್ಧರು ಸೇರಿದಂತೆ ಪ್ರತಿಯೊಬ್ಬರು ಈ ತೂಗು ಸೇತುವೆಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಹೊಳೆ ದಾಟುತ್ತಾರೆ. ಅಷ್ಟಕ್ಕೂ ಇಲ್ಲಿ ಸೇತುವೆ ನಿರ್ಮಾಣ ಮಾಡಿದಲ್ಲಿ ಸಾಕಷ್ಟು ಪ್ರಯೋಜನಗಳಿದ್ದರೂ ಕೂಡ ಇದರ ಬಗ್ಗೆ ಗಮನ ಹರಿಸದೆ ಇರಲು ಕಾರಣ ತಿಳಿಯುತ್ತಿಲ್ಲ.

hsn setuve 3

ಹಾಸನದಿಂದ ಸುಬ್ರಮಣ್ಯ ತೆರಳುವ ಪ್ರಯಾಣಿಕರಿಗೆ ಇಲ್ಲಿ ಸೇತುವೆ ನಿರ್ಮಾಣ ಮಾಡಿದಲ್ಲಿ 30 ಕಿ.ಮೀ ಸಂಚಾರ ತಪ್ಪುತ್ತದೆ. ಜೊತೆಗೆ ಹೊಂಗಡಹಳ್ಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯವರು ಹೊಳೆಯ ಆ ಬದಿಯಲ್ಲಿದ್ದು ಅವರು 35 ಕಿ.ಮೀ ಬಳಸಿ ಪಂಚಾಯ್ತಿಗೆ ಬರುವುದು ಕೂಡ ತಪ್ಪಲಿದೆ. ಸಾವಿರಾರು ಮಂದಿಗೆ ಇದರ ಪ್ರಯೋಜನ ಸಿಗಲಿದೆ. ಆದರೂ ಕೂಡ ಸರ್ಕಾರ ಇಲ್ಲಿ ಸೇತುವೆ ನಿರ್ಮಾಣ ಕಾಮಗಾರಿಯನ್ನು ಆಕೆ ಕೈಗೊಂಡಿಲ್ಲ ಎಂಬ ಪ್ರಶ್ನೆ ಹುಟ್ಟಿದೆ. ಹೊಂಗಡಹಳ್ಳ-ಸಕಲೇಶಪುರ ತಾಲೂಕಿನ ಕೊನೆಯ ಗ್ರಾಮ ಪಂಚಾಯ್ತಿ. ಇಲ್ಲಿ ಮೂಕನ ಮನೆ ಫಾಲ್ಸ್, ಕಾಗಿನೆರೆ ಪ್ರಕೃತಿ ಸೌಂದರ್ಯ ತಾಣ ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳಗಳು ಇರುವ ಜಾಗವಾಗಿದ್ದು, ಸರ್ಕಾರ ಈ ಭಾಗವನ್ನು ಪ್ರವಾಸಿ ತಾಣವಾಗಿಯೂ ಕೂಡ ಅಭಿವೃದ್ಧಿ ಮಾಡಬಹುದು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Share This Article
Leave a Comment

Leave a Reply

Your email address will not be published. Required fields are marked *