Connect with us

Districts

ಪ್ರೀತಿಸಿ ಕೈಕೊಡಲು ಮುಂದಾಗಿದ್ದ ಪ್ರಿಯಕರನನ್ನು ಎಳೆತಂದು ಹುಡುಗಿ ಜೊತೆ ಮದ್ವೆ ಮಾಡಿಸಿದ್ರು ಗ್ರಾಮಸ್ಥರು

Published

on

ಮೈಸೂರು: ಯುವತಿಯನ್ನು ಪ್ರೀತಿಸಿ ಆಕೆಗೆ ಕೈಕೊಡಲು ಮುಂದಾಗಿದ್ದ ಪ್ರಿಯಕರನನ್ನು ಗ್ರಾಮಸ್ಥರು ಸೇರಿ ಎಳೆತಂದು ಮದುವೆ ಮಾಡಿಸಿರುವ ಘಟನೆ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ದೊಡ್ಡೇಬಾಗಿಲು ಗ್ರಾಮದಲ್ಲಿ ನಡೆದಿದೆ.

ಒಂದೇ ಗ್ರಾಮದವರಾಗಿದ್ದ ರೇಣುಕುಮಾರ್ ಮತ್ತು ರೋಜಾ ಇಬ್ಬರು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ರೇಣುಕುಮಾರ್ ಕೆಎಸ್‍ಆರ್ ಟಿಸಿ ಬಸ್ ಚಾಲಕನಾಗಿ ಹಾಗೂ ರೋಜಾ ಟಿ.ನರಸೀಪುರ ತಾಲೂಕು ಪಂಚಾಯಿತಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಇವರಿಬ್ಬರು ಪ್ರೀತಿಸುತ್ತಿದ್ದ ವಿಚಾರ ಊರಿನವರಿಗೂ ತಿಳಿದಿತ್ತು.

ಈ ಸಂದರ್ಭದಲ್ಲಿ ಇತ್ತೀಚೆಗೆ ರೇಣುಕುಮಾರ್ ರೋಜಾರನ್ನು ಮಾತನಾಡಿಸದೇ ದೂರ ಮಾಡಿದ್ದಾನೆ. ಅಷ್ಟೇ ಅಲ್ಲದೇ ಯುವತಿಗೆ ಹಣ ನೀಡಿ ಬೇರೆ ಮದುವೆಯಾಗಲು ಹೇಳಿದ್ದ. ಈ ಮಧ್ಯೆ ಈತ ಬೇರೆ ಹುಡುಗಿ ಜೊತೆ ಮದುವೆಯಾಗಲು ಮುಂದಾಗಿದ್ದ. ಈ ಎಲ್ಲಾ ವಿಚಾರಗಳನ್ನು ತಿಳಿದ ಗ್ರಾಮಸ್ಥರು ಗುರುವಾರ ರೇಣುಕುಮಾರ್‍ನನ್ನು ಕರೆದು ಮಾತನಾಡಲು ನಿರ್ಧಾರ ಮಾಡಿದ್ದರು.

ರೇಣುಕುಮಾರ್ ಈ ವಿಚಾರವನ್ನು ತಿಳಿದು ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಈ ವೇಳೆ ಗ್ರಾಮಸ್ಥರೆಲ್ಲಾ ಸೇರಿ ಆತನನ್ನು ಎಳೆದುತಂದು ಇಂದು ಕಾರಗಳ್ಳಿ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದಾರೆ.

 

Click to comment

Leave a Reply

Your email address will not be published. Required fields are marked *