ಧಾರಾವಾಡ: ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ಕೆರೆ ಸ್ವಚ್ಛ ಮಾಡಲು ಮುಂದಾದ ಯುವಕರನ್ನು ಅಲ್ಲಿಯ ಜನ ತರಾಟೆ ತೆಗೆದುಕೊಂಡಿದ್ದಾರೆ.
ಸ್ವಯಂ ಪ್ರೇರಣೆಯಿಂದ ಸ್ವಚ್ಛ ಮಾಡಲು ಬಂದವರಿಗೆ ಶಹಬ್ಬಾಸ್‍ಗಿರಿ ಕೊಡುವುದನ್ನು ಬಿಟ್ಟು ಅವರ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಕೆರೆ ಸ್ವಚ್ಛ ಮಾಡಿದರೆ ಬಯಲು ಬಹಿರ್ದೆಸೆಗೆ ಜಾಗ ಇರುವುದಿಲ್ಲ ಎಂದು ವಿಚಿತ್ರ ಬೇಡಿಕೆ ಇಟ್ಟಿದ್ದಾರೆ.
ಪಟ್ಟಣದ ಹೊರವಲಯದ ಅಣ್ಣಿಗನ ಕೆರೆಯಲ್ಲಿ ಸ್ವಚ್ಛ ಸೇವಾ ಸಮಿತಿಯಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಈ ವೇಳೆ ಅಲ್ಲಿನ ಕೆಲ ಸ್ಥಳೀಯರು ಕೆರೆ ಸ್ವಚ್ಛ ಮಾಡಿದ್ರೆ ಬಯಲು ಬಹಿರ್ದೆಸೆಗೆ ಜಾಗ ಸಿಗುವುದಿಲ್ಲ ಎಂದು ಹಠ ಹಿಡಿದರು.
ಜನರ ಮಾತನ್ನು ಕೇಳಿ ಯುವಕರು ಕೆರೆಯಲ್ಲಿ ಬಹಿರ್ದೆಸೆ ಮಾಡದಂತೆ ಮನವಿ ಮಾಡಿದರು. ಆದರೆ ಜನರು ಯುವಕರ ಮಾತನ್ನು ನಿರಾಕರಿಸಿ ಕೆರೆ ಸ್ವಚ್ಛ ಮಾಡದಂತೆ ತಡೆದಿದ್ದಾರೆ. ಇದರಿಂದ ಸ್ವಯಂ ಪ್ರೇರಣೆಯಿಂದ ಕೆರೆ ಸ್ವಚ್ಛತೆಗೆ ಬಂದ ಯುವಕರಿಗೆ ನಿರಾಸೆ ಆಗಿದೆ.