ವಿಜಯಪುರ: ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಇರದ ಕಾರಣ ಗ್ರಾಮಸ್ಥರೇ ಮಹಿಳೆಗೆ ಹೆರಿಗೆ ಮಾಡಿಸಿದ ಅಪರೂಪದ ಘಟನೆ ವಿಜಯಪುರದಲ್ಲಿ ನಡೆದಿದೆ.
ಜಿಲ್ಲೆಯ ಇಂಡಿ ತಾಲೂಕಿನ ಜಿಗಜೇವಣಗಿ ಗ್ರಾಮದ ಶಶಿಕಲಾ ಬಿರಾದಾರ ಎಂಬ ಮಹಿಳೆಗೆ ಮಂಗಳವಾರ ಬೆಳಗ್ಗೆ ತೀವ್ರ ಹೆರಿಗೆನೋವು ಕಾಣಿಸಿಕೊಂಡಿತ್ತು. ಕುಟುಂಬಸ್ಥರು ಜಿಗಜೇವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಶಿಕಲಾ ಅವನ್ನ ಕರೆತಂದಿದ್ದರು. ಆದ್ರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಹತ್ತಿರದ ಇಂಚಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಆದ್ರೆ ಅಲ್ಲೂ ಕೂಡ ಒಬ್ಬರು ವೈದ್ಯರೂ ಅಥವಾ ನರ್ಸ್ ಕೂಡ ಇರಲಿಲ್ಲವಂತೆ.
Advertisement
ಈ ನಡುವೆ ಶಶಿಕಲಾಗೆ ತೀವ್ರ ರಕ್ತಸ್ರಾವ ಮತ್ತು ಹೆರಿಗೆನೋವು ಹೆಚ್ಚಾಗಿತ್ತು. ಆಗ ಸ್ಥಳೀಯ ಕೆಲ ಯುವಕರು ಇವರ ಸಹಾಯಕ್ಕೆ ಬಂದು ಗ್ರಾಮದ ಕೆಲ ಮಹಿಳೆಯರನ್ನು ಕರೆತಂದಿದ್ದಾರೆ. ಗ್ರಾಮಸ್ಥರೇ ಕೈಗೆ ಗ್ಲೌಸ್ ಹಾಕಿಕೊಂಡು ಶಶಿಕಲಾಗೆ ಹೆರಿಗೆ ಮಾಡಿಸಿದ್ದಾರೆ.
Advertisement
ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿದ್ದು ಯಶಸ್ವಿ ಹೆರಿಗೆ ಮಾಡಿಸಿದ್ದಾರೆ. ಗ್ರಾಮಸ್ಥರ ಸಮಯಪ್ರಜ್ಞೆಯಿಂದ ಎರಡು ಜೀವಗಳು ಮರುಜೀವ ಪಡೆದುಕೊಂಡಿವೆ. ಆದ್ರೆ 24*7 ಅಂತಾ ಬೋರ್ಡ್ ಹಾಕ್ಕೊಂಡು ಯಾರೊಬ್ಬರು ಆಸ್ಪತ್ರೆಯಲ್ಲಿ ಇರದೇ ಇದ್ದರೆ ಇಂತಹ ಆಸ್ಪತ್ರೆಗಳು ಯಾಕೆ ಬೇಕು ಅಂತಾ ನೊಂದವರು ಹಿಡಿಶಾಪ ಹಾಕುತ್ತಿದ್ದಾರೆ.