ತುಮಕೂರು: ನಿಪಾ ಜ್ವರದ ಭೀತಿಗೆ ತುಮಕೂರಿನ ಜನರು ಹೆದರಿ ಬಾವಲಿಗಳನ್ನು ಬಲೆ ಹಾಕಿ ಹಿಡಿದು ಸಾಯಿಸಿ ಮಣ್ಣಲ್ಲಿ ಹೂಳಲು ನಿರ್ಧಾರ ಮಾಡಿದ್ದಾರೆ.
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಗ್ರಾ.ಪಂ ಸದಸ್ಯರು ಸಾಮೂಹಿಕವಾಗಿ ಬಾವಲಿ ಮಾರಣ ಹೋಮಕ್ಕೆ ನಿರ್ಧರಿಸಿದ್ದಾರೆ. ಬಾವಲಿಗಳು ಹುಳಿಯಾರು ಗ್ರಾಮದ ಮರಗಳಲ್ಲಿ ವಾಸವಾಗಿದ್ದು, ಗ್ರಾ.ಪಂ ಸದಸ್ಯರು ಬಲೆ ಹಾಕಿ ಬಾವಲಿಗಳನ್ನು ಹಿಡಿದು ಸಾಯಿಸಲು ನಿರ್ಣಯ ತೆಗೆದುಕೊಂಡಿದ್ದಾರೆ.
Advertisement
ಹುಳಿಯಾರು ಗ್ರಾಮ ಪಂಚಾಯ್ತಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಧಾರ ತೆಗೆದುಕೊಂಡಿದ್ದು, ಶನಿವಾರ ನಡೆದ ಸಭೆಯಲ್ಲಿ ಸದಸ್ಯರು ತಮ್ಮ ನಿರ್ಣಯ ಕೈಗೊಂಡಿದ್ದಾರೆ. ಇದನ್ನೂ ಓದಿ: ನಿಪಾ ವೈರಸ್ ಬಾವಲಿಗಳಿಂದ ಬರಲ್ಲ -ವರದಿಯಲ್ಲಿ ಸಾಬೀತು