ಧಾರವಾಡ: ಆ ಗ್ರಾಮದಲ್ಲಿ ಹೋಳಿ ಹಬ್ಬ ಬಂದರೆ ಸಾಕು, ಗ್ರಾಮದ ಜನರೆಲ್ಲಾ ಕೈಯಲ್ಲಿ ಆಯುಧಗಳನ್ನ ಹಿಡಿದುಕೊಂಡು ನಿಲ್ಲುತ್ತಾರೆ. ಏಕೆಂದರೆ ಆ ಗ್ರಾಮದ ಕಾಮಣ್ಣನೇ ಇದಕ್ಕೆ ಕಾರಣ.
ಹೌದು, ಜಿಲ್ಲೆಯ ಮುಳಮುತ್ತಲ ಗ್ರಾಮದಲ್ಲಿ ಕಾಮಣ್ಣನ ಹಬ್ಬ ಬಂದರೆ ಸಾಕು, ಇಡೀ ಗ್ರಾಮದ ಜನ ಕೈಯಲ್ಲಿ ಆಯುಧಗಳನ್ನು ಹಿಡಿದು ಕಾಮಣ್ಣನನ್ನು ಕಾವಲು ಕಾಯುತ್ತಾರೆ. ಇದನ್ನೂ ಓದಿ: ಡ್ರೋಣ್ ಕ್ಯಾಮೆರಾ ಮೂಲಕ ಆರೋಪಿ ಸೆರೆಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸರು..!
Advertisement
Advertisement
ಏಕೆಂದರೆ ಈ ಕಾಮಣ್ಣನ ಮುಖ ಕಳ್ಳತನ ಮಾಡಲು ಬರುತ್ತಾರೆ ಎಂಬುದಕ್ಕೆ ಇದನ್ನು ಕಾವಲು ಕಾಯುತ್ತಾರೆ. ಇನ್ನು ಇಡೀ ರಾತ್ರಿ ಗ್ರಾಮದ ಜನ ಈ ಕಾಮಣ್ಣನ ದರ್ಶನ ಪಡೆಯುತ್ತಾರೆ. ಅಲ್ಲದೇ ತಮ್ಮ ಇಷ್ಟಾರ್ಥಗಳನ್ನು ಕೂಡ ಈ ಕಾಮಣ್ಣ ಎದುರು ಇಡುತ್ತಾರೆ. ನಾಳೆಯ ದಿನ ಬೆಳಗ್ಗೆ ಕಾಮದಹನ ಮಾಡಿ ನಂತರ ರಂಗ ಪಂಚಮಿ ಆಚರಣೆ ಮಾಡುತ್ತಾರೆ. ಇದನ್ನೂ ಓದಿ: ರಾಯಚೂರಿನಲ್ಲಿ ಮದ್ಯ ಮಾರಾಟ ನಿಷೇಧ
Advertisement
Advertisement
ಜಿಲ್ಲೆಯ ಅಣ್ಣಿಗೇರಿಯಿಂದ ಈ ಕಾಮಣ್ಣ ಮುಖವಾಡ ತಂದು ಇಲ್ಲಿ ಪ್ರತಿಷ್ಠಾಪನೆ ಮಾಡಿದ್ದರು. ಹೀಗಾಗಿ ಅಲ್ಲಿಯ ಜನ ಇದನ್ನ ಕದ್ದು ಹೋಗಬಹುದು ಎನ್ನುವ ಕಾರಣಕ್ಕೆ ತಲ್ವಾರ್, ಮಚ್ಚು, ಕೊಡಲಿ ಹಿಡಿದು ಕಾವಲು ಕಾಯುತ್ತಾರೆ.