ಕಾರವಾರ: ದೇಶದ ಪ್ರತಿಷ್ಠೆ ಉತ್ತುಂಗಕ್ಕೇರಿಸಿ ಕರ್ನಾಟಕಕ್ಕೂ ಹೆಸರು ತಂದ ಕೈಗಾ ಅಣು ವಿದ್ಯುತ್ ಸ್ಥಾವರದ ಸುತ್ತಮುತ್ತಲ ಗ್ರಾಮಗಳಲ್ಲಿ ಕ್ಯಾನ್ಸರ್ ಪ್ರಮಾಣ ದುಪ್ಪಟ್ಟಾಗಿದೆ ಎಂಬ ಆಘಾತಕಾರಿ ವರದಿ ಪಬ್ಲಿಕ್ ಟಿವಿಗೆ ದೊರಕಿದೆ.
ಕೈಗಾ ಅಣುಸ್ಥಾವರದ ಸುತ್ತಮುತ್ತಲ ಗ್ರಾಮಗಳ ಜನರೀಗ, ರೇಡಿಯೇಷನ್ ಎಫೆಕ್ಟ್‍ನಿಂದಾಗಿ ಕ್ಯಾನ್ಸರ್ ನಂತಹ ಮಾರಕ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಅಣು ವಿಕಿರಣಗಳ ಅಡ್ಡ ಪರಿಣಾಮದ ಬಗ್ಗೆ ಈ ಹಿಂದೆ ಸ್ಥಳೀಯರು ಹಾಗೂ ಪರಿಸರವಾದಿಗಳು ತೀವ್ರವಾಗಿ ಪ್ರತಿಭಟನೆ ನಡೆಸಿದ್ರು.
Advertisement
Advertisement
ಪ್ರತಿಭಟನೆಗೆ ಮಣಿದಿದ್ದ ಸರ್ಕಾರ ಹಾಗೂ ಎನ್.ಪಿ.ಸಿ.ಐ.ಎಲ್, 2010ರಲ್ಲಿ ಜಂಟಿಯಾಗಿ ಮುಂಬೈನ ಟಾಟಾ ಸ್ಮಾರಕ ಸಂಸ್ಥೆಗೆ ಸಂಶೋಧನೆ ನಡೆಸುವಂತೆ ಸೂಚಿತ್ತು. ಇದರಂತೆ 2010 ರಿಂದ 2013ರವರೆಗೆ ತಜ್ಞರ ಸಂಶೋಧನೆ ನಡೆಸಿ ವರದಿ ತಯಾರಿಸಿದೆ. ಇದರ ಪ್ರಕಾರ ಅಣುಸ್ಥಾವರ ಪ್ರಾರಂಭವಾದ ಬಳಿಕ ಶೇಕಡಾ 200ರಷ್ಟು ಕ್ಯಾನ್ಸರ್ ಪ್ರಮಾಣ ಹೆಚ್ಚಾಗಿದೆ. ಇದನ್ನೂ ಓದಿ: ವಿಶ್ವದಲ್ಲೇ ನಾಲ್ಕನೇ ಕೇಂದ್ರ -ಹೊಸ ದಾಖಲೆ ಬರೆದ ಕೈಗಾ ಅಣು ವಿದ್ಯುತ್ ಸ್ಥಾವರ
Advertisement
ಕಾರವಾರ ತಾಲೂಕೊಂದರಲ್ಲೇ 316 ಜನ ಜನ ಅಣು ವಿಕಿರಣಗಳಿಂದ ಕ್ಯಾನ್ಸರ್‍ಗೆ ತುತ್ತಾಗಿದ್ದಾರೆ. ಇದರಲ್ಲಿ ಪುರುಷರು-129, ಮಹಿಳೆಯರು-187.. ಪುರುಷರಲ್ಲಿ ಬಾಯಿ, ಗಂಟಲು, ಅನ್ನನಾಳ, ಶ್ವಾಸಕೋಶ ಗಳಲ್ಲಿ ಕ್ಯಾನ್ಸರ್ ಪತ್ತೆಯಾದರೇ ಮಹಿಳೆಯರಲ್ಲಿ ಗರ್ಭಕೋಶ, ಬಾಯಿ, ಸ್ತನ ಕ್ಯಾನ್ಸರ್ ಕಂಡುಬಂದಿದ್ದು, ರೋಗಿಗಳು ಗೋವಾ ಹಾಗೂ ಕರ್ನಾಟಕದ ವಿವಿಧ ಭಾಗಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಆದ್ರೆ ಈ ಎಲ್ಲಾ ಅಂಶಗಳನ್ನು ಅಧಿಕೃತವಾಗಿ ಹೊರಹಾಕದೇ ಮುಚ್ಚಿಡಲಾಗಿದೆ. ಹೀಗಾಗಿ ಈ ಬಗ್ಗೆ ಪರಿಸರವಾದಿಗಳು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಆತಂಕ ಹೊರಹಾಕ್ತಿದ್ದಾರೆ.