ಧಾರವಾಡ: ಹೈವೋಲ್ಟೇಜ್ ವಿದ್ಯುತ್ ಹರಿದ ಪರಿಣಾಮ ಗ್ರಾಮದ ಹಲವು ಮನೆಗಳ ಎಲೆಕ್ಟ್ರಾನಿಕ್ಸ್ ಉಪಕರಣಗಳೆಲ್ಲ ಸುಟ್ಟು ಭಸ್ಮವಾಗಿರುವ ಘಟನೆ ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕ್ಯಾರಕೊಪ್ಪ ಗ್ರಾಮದಲ್ಲಿ ಬುಧವಾರ ತಡರಾತ್ರಿ ಹೈವೋಲ್ಟೇಜ್ ವಿದ್ಯುತ್‍ನಿಂದ ಹಲವು ಮನೆಗಳ ಟಿವಿ, ಫ್ರಿಡ್ಜ್, ಚಾರ್ಜ್ ಹಾಕಿದ್ದ ಮೊಬೈಲ್ ಫೋನ್‍ಗಳು ಹಾಗೂ ಇನ್ನಿತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳು ಸುಟ್ಟು ಹೋಗಿದೆ. ಸುಮಾರು 8 ಮನೆಗಳಲ್ಲಿದ್ದ ಎಲೆಕ್ಟ್ರಾನಿಕ್ಸ್ ಉಪಕರಣಗಳು ಸುಟ್ಟು ಹಾಳಾಗಿದೆ. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಬೆಳ್ಳಂಬೆಳಗ್ಗೆ ಗ್ರಾಮದ ಬಿಲ್ ಕಲೆಕ್ಟರ್‍ಗೆ ಕರೆ ಮಾಡಿ ಅವಘಡದ ಬಗ್ಗೆ ತಿಳಿದ್ದಾರೆ. ಅಲ್ಲದೆ ಸ್ಥಳಕ್ಕೆ ಬರುವಂತೆ ಹೇಳಿದ್ದಾರೆ.
ಗ್ರಾಮಸ್ಥರ ಒತ್ತಾಯದ ಮೇಲೆ ಸ್ಥಳಕ್ಕೆ ಬಂದ ಬಿಲ್ ಕಲೆಕ್ಟರ್ ನನ್ನು ತರಾಟೆಗೆ ತೆರೆದುಕೊಂಡು, ನಂತರ ಮೇಲಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ನಿನ್ನನ್ನು ಬಿಡಲ್ಲ ಎಂದು ಗ್ರಾಮ ಪಂಚಾಯ್ತಿಯಲ್ಲಿದ್ದ ಕೋಣೆಯಲ್ಲಿ ಗ್ರಾಮಸ್ಥರು ಕೂಡಿ ಹಾಕಿದ್ದಾರೆ. ಹಾಗೆಯೇ ಹೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಈ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv