ಮಡಿಕೇರಿ: ಗ್ರಾಮೀಣ ಪ್ರದೇಶದ ರಸ್ತೆಗಳು ಇಂದಿಗೂ ಸರಿಯಾದ ರೀತಿಯಲ್ಲಿ ಇರುವುದೇ ಇಲ್ಲ. ರಸ್ತೆ ಸಂಚಾರ ಸುಗಮವಾಗಿ ಮಾಡಿಕೊಡುವಂತೆ ಗ್ರಾಮ ಪಂಚಾಯತಿಗಳಿಗೆ ಗ್ರಾಮಸ್ಥರು ಎಷ್ಟೇ ಮನವಿ ಮಾಡಿದ್ರೂ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದನೆ ಸಿಕ್ಕುವುದೂ ಇಲ್ಲ. ಈ ಹಿನ್ನೆಲೆಯಲ್ಲಿ ಹದಗೆಟ್ಟ ರಸ್ತೆಯನ್ನು ಗ್ರಾಮದ ಯುವಕರೇ ತಾತ್ಕಾಲಿಕ ದುರಸ್ತಿಗಾಗಿ ಶ್ರಮದಾನ ಮಾಡಿದ್ದಾರೆ.
Advertisement
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಯ್ನರಿ ಜುಮಾ ಮಸೀದಿ ಪ್ರದೇಶದಲ್ಲಿ ರಸ್ತೆ ಹದಗೆಟ್ಟು ಹೋಗಿದ್ದು, ಆದಷ್ಟು ಬೇಗ ಸರಿಪಡಿಸುವಂತೆ ಸ್ಥಳಿಯರು ಅಧಿಕಾರಿಗಳಿಗೆ ಆಗ್ರಹಿಸಿದ್ದರು. ಡಾಂಬಾರು ಕಾಣದ ಈ ರಸ್ತೆಯನ್ನು ದುರಸ್ತಿ ಮಾಡಿ ಮತ್ತು ಸರಿಯಾದ ಚರಂಡಿ ವ್ಯವಸ್ಥೆ ಮಾಡಿ ಎಂದು ಸ್ಥಳೀಯರು ಪಯ್ನರಿ ಮಸೀದಿ ರಸ್ತೆಗಾಗಿ ಮನವಿ ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ಮಾತ್ರ ಈ ಕಡೆ ತಲೆಯನ್ನು ಹಾಕಿಲ್ಲ. ಇದನ್ನೂ ಓದಿ: ಸೈಕ್ಲಿಂಗ್ ವೇಳೆ ಹೃದಯಾಘಾತ – ಸೈಕ್ಲಿಸ್ಟ್ ಸಾವು!
Advertisement
Advertisement
ರಸ್ತೆಗಳು ಚರಂಡಿಯ ಹಾಗೆ ಇರುವುದರಿಂದ ರಸ್ತೆ ಮೇಲೆ ಮಳೆ ನೀರು ನಿಂತುಕೊಳ್ಳುತ್ತಿತ್ತು. ಈ ಕಾರಣ ಸೊಳ್ಳೆಗಳ ಹಾವಳಿ ಮಿತಿಮೀರುತ್ತಿತ್ತು. ಹೀಗಾಗಿ ಗ್ರಾಮದ ಯುವಕರೇ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಕಾರ್ಯ ಮಾಡಲು ಮುಂದಾಗಿದ್ದಾರೆ. ಗುಂಡಿ ಬಿದ್ದ ರಸ್ತೆಗಳನ್ನು ಕಲ್ಲು ಮಣ್ಣುಗಳಿಂದ ಮುಚ್ಚುವ ಪ್ರಯತ್ನಕ್ಕೆ ಮುಂದಾಗಿದ್ದು, ಗ್ರಾಮಸ್ಥರ ಮೆಚ್ಚುಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ವಿಜಯಪುರದ ಕುವರಿಗೆ ರಾಷ್ಟ್ರೀಯ ಪ್ರಶಸ್ತಿ
Advertisement