ಗ್ರಾಮೀಣ ಭಾಗದ ಜನರು ಗ್ರಂಥಾಲಯದ ಸದುಪಯೋಗ ಪಡೆದುಕೊಳ್ಳಬೇಕು: ಸವದಿ

Public TV
1 Min Read
laxman savadi 1

ಚಿಕ್ಕೋಡಿ: ಸರ್ಕಾರ ಗ್ರಾಮೀಣ ಭಾಗಗಳಲ್ಲಿ ಸ್ಥಾಪಿಸಿರುವ ಗ್ರಂಥಾಲಯಗಳ ಸದುಪಯೋಗವನ್ನು ಪ್ರತಿಯೊಂದು ಗ್ರಾಮದ ಜನರು ಪಡೆದುಕೊಳ್ಳಬೇಕು ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

LAXMAN 2

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಂಥಾಲಯಗಳಿಗೆ ಸಾರ್ವಜನಿಕ ಗ್ರಂಥಾಲಯದ ಮೂಲಕ ಬಂದಿರುವ ಪುಸ್ತಕಗಳನ್ನು ಹಂಚಿಕೆ ಮಾಡಿ ಮಾತನಾಡಿದ ಅವರು, ಗ್ರಂಥಾಲಯ ಎಂದರೆ ಇಡೀ ವಿಶ್ವವೇ ಇದ್ದ ಹಾಗೆ ದೇಶದ ಇತಿಹಾಸ, ಒಳ್ಳೆಯ ವಿಚಾರ, ಪರಿಸರ, ಜ್ಞಾನ, ಜಗತ್ತು, ಇತಿಹಾಸ ಪರಂಪರೆಯನ್ನು ಪುಸ್ತಕ ಕಲಿಸುತ್ತದೆ ಎಲ್ಲರೂ ಓದುವುದನ್ನು ಹವ್ಯಾಸ ಮಾಡಿಕೊಳ್ಳಬೇಕೆಂದು ಕರೆ ನೀಡಿದರು. ಇದನ್ನೂ ಓದಿ: ರಮೇಶ್ ಕುಮಾರ್ ವಿರುದ್ಧ ಜೆ.ಪಿ ನಗರ ಎಎಸ್‍ಐ ಗರಂ

ಪುಸ್ತಕ ಓದುವುದರಿಂದ ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಂತರಾಗಿ ಇರುತ್ತಾರೆ. ಸರ್ಕಾರ ಹಲವಾರು ಯೋಜನೆಗಳನ್ನು ಗ್ರಾಮಗಳಿಗೆ ಒದಗಿಸಿದೆ, ಆ ಯೋಜನೆಗಳನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು. ಇನ್ನೂ ಉಳಿದ ಗ್ರಾಮ ಪಂಚಾಯತ್‍ಗಳಿಗೆ ಸರ್ಕಾರದಿಂದ ಗ್ರಂಥಾಲಯ ಸ್ಥಾಪನೆ ಕಾರ್ಯ ಆಗುತ್ತಿದೆ ಎಂದರು.

ಈ ವೇಳೆ ತಾಲೂಕು ದಂಡಾಧಿಕಾರಿ ದುಂಡಪ್ಪ ಕೋಮಾರ, ಉಪ ತಹಶೀಲ್ದಾರ್ ಮಹಾದೇವ ಬಿರಾದಾರ್, ಡಿವೈಎಸ್‍ಪಿ ಅಲೀಶ್, ಕಂದಾಯ ನಿರೀಕ್ಷಿಕ ಎಂ.ಎಂ ಮಿರ್ಜಿ, ಕುಮಾರ್ ಹಾಡಕರ, ಉದ್ಯಮಿ ಸಂತೋಷ್ ಸಾವಡಕರ ಸೇರಿದಂತೆ ಹಲವರು ಉಪಸ್ಥಿರಿದ್ದರು. ಇದನ್ನೂ ಓದಿ: ಕೆಂಗೇರಿ ಮೆಟ್ರೋ ವೇದಿಕೆ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಕನ್ನಡ ಮಾಯ

Share This Article
Leave a Comment

Leave a Reply

Your email address will not be published. Required fields are marked *