ಹಾಸನ: ಮನೆ ಬಳಿ ಬಂದು ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದ ತಹಶೀಲ್ದಾರ್‌ಗೆ ಗ್ರಾಮಸ್ಥರೊಬ್ಬರು ನಾನು ಎಣ್ಣೆ ಹೊಡೆದಿದ್ದೇನೆ ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ ಎಂದರೆ, ಮಹಿಳೆಯರು ಡೋಂಟ್ ಕೇರ್ ಎನ್ನುತ್ತಾ ತಮ್ಮ ಹಿಂದೆ ಊರೆಲ್ಲ ಸುತ್ತಾಡಿಸಿದ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ, ಚಿಕ್ಕ ಮಗ್ಗೆ ಗ್ರಾಮದಲ್ಲಿ ನಡೆದಿದೆ.
Advertisement
ಗ್ರಾಮಕ್ಕೆ ವೈದ್ಯರ ಜೊತೆ ಭೇಟಿ ನೀಡಿದ ಅರಕಲಗೂಡು ತಹಶೀಲ್ದಾರ್ ರೇಣುಕುಮಾರ್, ವ್ಯಾಕ್ಸಿನ್ ಹಾಕಿಸಿಕೊಳ್ಳದೆ ಇರುವವರ ಮನೆಯ ಬಳಿ ಹೋಗಿ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ನನಗೆ ತಲೆನೋವಿದೆ. ನಾನು ಚೆಕಪ್ ಮಾಡಿಸುತ್ತಿರುವ ಡಾಕ್ಟರ್ ವ್ಯಾಕ್ಸಿನ್ ಹಾಕಿಸಿಕೊಳ್ಳದಂತೆ ಹೇಳಿದ್ದಾರೆ. ಹೀಗಾಗಿ ನಾನು ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ ಎಂದು ವಿವಿಧ ಸಬೂಬು ಹೇಳಿದ್ದಾರೆ. ಇದನ್ನೂ ಓದಿ: ಸಾಯೋ ವಯಸ್ಸಾಗಿದೆ, ನಮಗೆ ಲಸಿಕೆ ಬೇಡವೇ ಬೇಡ – ಬಳ್ಳಾರಿಯಲ್ಲೂ ವ್ಯಾಕ್ಸಿನ್‍ಗೆ ಹಿಂದೇಟು
Advertisement
Advertisement
ಮಹಿಳೆಯರಿಗೆ ತಹಶೀಲ್ದಾರ್ ಮತ್ತು ವೈದ್ಯರು ಎಷ್ಟೇ ತಿಳಿಹೇಳಿದ್ರು ಪ್ರಯೋಜನವಾಗಿಲ್ಲ. ಮತ್ತೊಬ್ಬ ಮಹಿಳೆ ನಾನು ಚೀಟಿ ಕಟ್ಟಬೇಕು, ನನಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಟೈಮಿಲ್ಲ ಎಂದು ಒಂದು ಗಂಟೆ ಸತಾಯಿಸಿ, ಗ್ರಾಮವೆಲ್ಲ ಸುತ್ತಾಡಿಸಿ, ಕೊನೆಗೂ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಮತ್ತೊಬ್ಬ ಆಸಾಮಿಯಂತು ನಾನು ಎಣ್ಣೆ ಹೊಡೆದಿದ್ದೇನೆ. ವ್ಯಾಕ್ಸಿನ್ ಹಾಕಿಸಿಕೊಳ್ಳಲ್ಲ ಎಂದಿದ್ದಾನೆ. ಹೀಗೆ ಮನೆ ಬಳಿ ಬಂದು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮನವಿ ಮಾಡಿದ ತಹಶೀಲ್ದಾರ್‌ಗೆ ಗ್ರಾಮದ ಜನ ವಿವಿಧ ಉತ್ತರ ನೀಡಿ ತಪ್ಪಿಸಿಕೊಳ್ಳುತ್ತಿರುವುದನ್ನು ಗಮನಿಸಿದ್ರೆ, ವ್ಯಾಕ್ಸಿನ್ ಬಗ್ಗೆ ಇನ್ನೂ ಬಹುತೇಕರಿಗೆ ನಂಬಿಕೆಯೇ ಬಂದಿಲ್ಲ ಎಂಬುದು ಎದ್ದು ಕಾಣುತ್ತಿದೆ. ದನ್ನೂ ಓದಿ: ನಮ್ಗೆ ಲಸಿಕೆ ಕೊಡ್ಬೇಡಿ, ನಮ್ಮ ಮೇಲೆ ದೇವರು ಬಂದಿದ್ದಾರೆ – ಯಾದಗಿರಿಯಲ್ಲಿ ಹೈಡ್ರಾಮಾ
Advertisement