ಚಿಕ್ಕಮಗಳೂರು: ಸ್ವಂತ ವಾಹನಕ್ಕೆ ಸರ್ಕಾರದ ಲೋಗೋ ಹಾಕಿಕೊಂಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವಾಸಕ್ಕೆ ಬಂದು ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ನಡೆದಿದೆ.
Advertisement
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹಳೇಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷರು ತಮ್ಮ ಇನೋವಾ ಕಾರಿಗೆ ಸರ್ಕಾರದ ಲೋಗೋ ಹಾಕಿಕೊಂಡು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಹಳೇಬೀಡು, ಹುಣಸೂರು ತಾಲೂಕು ಎಂದು ಬರೆಸಿಕೊಂಡಿದ್ದಾರೆ. ಇದನ್ನೂ ಓದಿ: ಸೋನಂ ಕಪೂರ್ ನಿವಾಸದಲ್ಲಿ 1.41 ಕೋಟಿ ರೂ. ಮೌಲ್ಯದ ಚಿನ್ನಾಭರಣ ಕಳವು
Advertisement
Advertisement
ಜಿ-ಸೀರಿಸ್ ಹೊಂದಿರುವ ಸರ್ಕಾರದ ವಾಹನಗಳಿಗೆ ಮಾತ್ರ ಸರ್ಕಾರದ ಲೋಗೋ ಬಳಸಬಹುದು. ಸರ್ಕಾರದ ವಾಹನಗಳನ್ನು ಹೊರತುಪಡಿಸಿ ಬೇರೆ ಯಾವುದೇ ವಾಹನಗಳ ನೇಮ್‍ಬೋರ್ಡ್ ಸರ್ಕಾರದ ಲೋಗೋ ಬಳಸುವಂತಿಲ್ಲ ಎಂದು ಹೈಕೋರ್ಟ್ ಆದೇಶವಿದೆ. ನ್ಯಾಯಾಲಯದ ಸೂಚನೆ ಇದ್ದರೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ತಮ್ಮ ಸ್ವಂತ ವಾಹನಕ್ಕೆ ಸರ್ಕಾರದ ಲೋಗೋ ಬಳಸಿಕೊಂಡಿರುವುದು ಪೊಲೀಸರ ಕಣ್ಣಿಗೆ ಬಿದ್ದಿಲ್ವಾ ಎಂಬ ಪ್ರಶ್ನೆ ಮೂಡಿದೆ.
Advertisement
ಸ್ವಂತ ಗಾಡಿಗೆ ಸರ್ಕಾರದ ಲೋಗೋ ಹಾಕಿಕೊಂಡು ಪ್ರವಾಸಕ್ಕೆ ಬಂದ ಗ್ರಾಮ ಪಂಚಾಯಿತಿ ಅಧ್ಯಕ್ಷರ ಕಾರು ಕ್ಯಾಮರಾ ಕಣ್ಣಿಗೆ ಬಿದ್ದಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಾಹನಗಳನ್ನ ಹೊರತುಪಡಿಸಿ ಬೇರೆ ಯಾವುದೇ ವಾಹನಗಳಿಗೂ ಈ ರೀತಿಯ ಸರ್ಕಾರದ ಚಿಹ್ನೆಯನ್ನು ಬಳಸುವಂತಿಲ್ಲ. ಇದನ್ನೂ ಓದಿ: ಯಶ್‍ನ ನಾನು ಹೀರೋ ಆಗಿ ಟ್ರೀಟ್ ಮಾಡಲ್ಲ: ಹೆಚ್.ಆರ್ ರಂಗನಾಥ್
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಾಹನಗಳನ್ನ ಹೊರತುಪಡಿಸಿ ಸರ್ಕಾರದ ಅಧೀನ ಸಂಸ್ಥೆಗಳು ಕೂಡ ಸರ್ಕಾರದ ಲೋಗೋ ಬಳಸುವಂತಿಲ್ಲ. ಆದರೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ವಂತ ಗಾಡಿಗೆ ಸರ್ಕಾರದ ಲೋಗೋವನ್ನು ಬಳಸಿಕೊಂಡು ಪ್ರವಾಸಕ್ಕೆ ಬಂದಿರುವುದು ಎಷ್ಟು ಸರಿ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಮೂಡಿದೆ. ಸರ್ಕಾರ ಇಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.