-ಗ್ರಾಮಸ್ಥರಿಂದ ಅಂತರ
-ಮೀನು, ಮದ್ಯ, ಹೋಟೆಲ್ ಬಳಿಕ ಊರು
ಲಕ್ನೊ: ಉತ್ತರ ಪ್ರದೇಶದಲ್ಲಿ ಜನರು ಕೊರೊನಾ ಗ್ರಾಮದ ಹೆಸರು ಕೇಳಿದ್ರೆ ಓಡಿ ಹೋಗುತ್ತಿದ್ದಾರೆ. ಮತ್ತೆ ಕೆಲವರು ಕೊರೊನಾ ಗ್ರಾಮಸ್ಥರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
Advertisement
ಕೊರೊನಾ ವೈರಸ್ ತಡೆಗೆ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಈ ನಡುವೆ ಕೊರೊನಾ ಹೆಸರಿನ ಮೀನು, ಹೋಟೆಲ್, ಮದ್ಯದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಕೊರೊನಾ ಹೆಸರಿನ ಗ್ರಾಮವೊಂದಿದೆ. ಈ ಗ್ರಾಮದ ಜನರು ಬೇರೆ ಊರುಗಳಲ್ಲಿ ತಾವು ಕೊರೊನಾದಿಂದ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಆತಂಕಕ್ಕೊಳಗಾಗುತ್ತಿದ್ದಾರೆ.
Advertisement
Residents of Corona, a village in Sitapur say they have been facing discrimination, ever since the outbreak of #coronavirus. Rajan, a villager says, "When we tell people we are from Corona, they avoid us. They don't understand that it's a village, not someone infected with virus" pic.twitter.com/gxz6oIx8UP
— ANI UP/Uttarakhand (@ANINewsUP) March 29, 2020
Advertisement
Advertisement
ಸೀತಾಪುರ ಜಿಲ್ಲೆಯ ತಹ್ಸಿಲ್ ಇಲಾಖೆಯಲ್ಲಿ ಕೊರೊನಾ ಗ್ರಾಮವಿದೆ. ಸುಮಾರು 8 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಬ್ರಾಹ್ಮಣ ಮತ್ತು ಯಾದವ ಕುಲದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಕೊರೊನಾ ಗ್ರಾಮಸ್ಥರು ಕೃಷಿಕರಾಗಿದ್ದು, ಗ್ರಾಮ ಧರ್ಮ ಮತ್ತು ಸಂಸ್ಕೃತಿಯಲ್ಲಿ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.