ಬೆಂಗಳೂರು: ಎಲ್ಲೆಲ್ಲೂ ಕಿಕಿ ಹಾಡಿನದ್ದೇ ಸದ್ದು. ಈ ಕಿಕಿ ಡ್ಯಾನ್ಸ್ ಯಾವ ಮಟ್ಟಿಗೆ ತನ್ನ ಹವಾ ಸೃಷ್ಟಿಸಿದೆ ಅಂದ್ರೆ, ಇದೀಗ ಹಳ್ಳಿಯ ಪೋರರು ಕರುವಿನ ಮೇಲೆ ಕುಳಿತು ಕೀಕಿ ಡ್ಯಾನ್ಸ್ ಹಾಡಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಬರಗೇನಗಳ್ಳಿ ಗ್ರಾಮದಲ್ಲಿ ಈ ಕಿಕಿ ಡ್ಯಾನ್ಸ್ ಹಾಡಲು ಹೋದ ಹಳ್ಳಿ ಹೈದರು ನೆಲದ ಮೇಲೆ ಬಿದ್ದು ಹೊರಳಾಡಿದ್ದಾರೆ. ಮೂರನೇ ತರಗತಿಯ ಇಬ್ಬರು ಬಾಲಕರು ವಿಶೇಷ ರೀತಿಯಲ್ಲಿ ಕಿಕಿ ಹಾಡಿಗೆ ನೃತ್ಯ ಮಾಡಲು ಕಾರಿನ ಬದಲು ಹಸುವಿನ ಕರುವನ್ನು ಆರಿಸಿಕೊಂಡಿದ್ದಾರೆ. ಈ ಇಬ್ಬರು ಪೋರರಲ್ಲಿ ಒಬ್ಬ ಬಾಲಕ ಹಸುವಿನ ಕರು ಮೇಲೆ ಕುಳಿತು ಕಿಕಿ ಹಾಡಿದರೇ, ಮತ್ತೊಬ್ಬ ಕರುವಿನ ಪಕ್ಕದಲ್ಲೇ ನಿಂತು ನೃತ್ಯ ಮಾಡಿದ್ದಾನೆ. ಈ ವಿಡಿಯೋ ಕಿಕಿ ಹಾಡನ್ನು ಅಣಕಿಸುವಂತಿದೆ. ಇದನ್ನೂ ಓದಿ: ಕಿಕಿ ಚಾಲೆಂಜ್ – ಗೊತ್ತಿಲ್ಲದೆ ಚಾಲೆಂಜ್ ಸ್ವೀಕರಿಸಿದೆ, ಯಾರು ಇದನ್ನು ಟ್ರೈ ಮಾಡಬೇಡಿ: ನಿವೇದಿತಾ ಗೌಡ
Advertisement
ಕಿಕಿ ಡ್ಯಾನ್ಸ್ ಯಾವ ಮಟ್ಟಿಗೆ ಅಪಾಯಕಾರಿ ಎಂಬುದನ್ನ ಈ ಅಣಕು ದೃಶ್ಯದಿಂದ ಕಾಣಬಹುದಾಗಿದೆ. ಸದ್ಯ ಈ ವಿಡಿಯೋ ನೆಲಮಂಗಲ ತಾಲೂಕಿನಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಶಿಷ್ಟ ವಿಭಿನ್ನ ಕಿಕಿ ಹಾಡಿನ ದೃಶ್ಯ ಹಲವೆಡೆ ಹರಿದಾಡುತ್ತಿದ್ದು, ತನ್ನದೇ ರೀತಿಯಲ್ಲಿ ಹವಾ ಸೃಷ್ಟಿಸಿದೆ. ಇದನ್ನೂ ಓದಿ: ಕಿಕಿ ಚಾಲೆಂಜ್ ಸ್ವೀಕರಿಸಿದ ಬಿಗ್ ಬಾಸ್ ಬೆಡಗಿ ನಿವೇದಿತಾ ಗೌಡ- ವಿಡಿಯೋ ನೋಡಿ
Advertisement
https://youtu.be/8eDif1YbYmI