ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಸಹಾಯಕರ ಮಾಸಿಕ ಸಂಬಳವನ್ನು ಏರಿಕೆ ಮಾಡಲಾಗಿದೆ.
ಮಾಸಿಕ ವೇತನವನ್ನು 12 ಸಾವಿರದಿಂದ 13 ಸಾವಿರಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ಪ್ರಕಟಿಸಿದೆ. ಈ ವರ್ಷದ ಬಜೆಟ್‌ನಲ್ಲಿ ಘೋಷಣೆಯಾದಂತೆ ಏಪ್ರಿಲ್ 1 ರಿಂದಲೇ ಇದು ಜಾರಿಯಾಗಲಿದೆ. ಇದನ್ನೂ ಓದಿ: ಮಧ್ಯಪ್ರದೇಶಲ್ಲಿ ಜೆಸಿಬಿ ಘರ್ಜನೆ – ರಾಮನವಮಿ ಕಲ್ಲುತೂರಾಟ, 20 ಅಕ್ರಮ ಕಟ್ಟಡಗಳು ನೆಲಸಮ
Advertisement
ಕರ್ನಾಟಕ ಗ್ರಾಮ ಕಚೇರಿಗಳ ರದ್ದತಿ ಕಾಯ್ದೆ 1961 ಜಾರಿಯಾದ ಬಳಿಕ 1963ರಿಂದ ಅನ್ವಯವಾಗುವಂತೆ ವಂಶಪಾರಂಪರ್ಯದ ಎಲ್ಲ ಗ್ರಾಮೀಣ ಹಂತದ ವಿಲೇಜ್ ಆಫೀಸರ್ಸ್ ಹುದ್ದೆಗಳು ರದ್ದಾಗಿದ್ದರಿಂದ ಕೆಳ ಹಂತದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರನ್ನು ತಾತ್ಕಾಲಿಕ ಆಧಾರದ ಮೇಲೆ ನೇಮಿಸಲಾಗುತ್ತದೆ.