Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ವಿಕಸಿತ ಭಾರತ್ @ 2047: ಹೂಡಿಕೆದಾರರ ದುಂಡುಮೇಜಿನ ಸಮ್ಮೇಳನ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ವಿಕಸಿತ ಭಾರತ್ @ 2047: ಹೂಡಿಕೆದಾರರ ದುಂಡುಮೇಜಿನ ಸಮ್ಮೇಳನ

Bengaluru City

ವಿಕಸಿತ ಭಾರತ್ @ 2047: ಹೂಡಿಕೆದಾರರ ದುಂಡುಮೇಜಿನ ಸಮ್ಮೇಳನ

Public TV
Last updated: August 2, 2025 6:40 pm
Public TV
Share
3 Min Read
Viksit Bharat @ 2047
SHARE

– ಎನ್‌ಐಸಿಡಿಪಿ ಕೈಗಾರಿಕಾ ಪಾರ್ಕ್ ನೀತಿ; ರಾಜ್ಯಗಳಲ್ಲಿ ಅಳವಡಿಕೆಗೆ ಸಲಹೆ

ಬೆಂಗಳೂರು: ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮದಡಿ (NICDP) ದೇಶದಾದ್ಯಂತ ಅಭಿವೃದ್ಧಿಪಡಿಸುತ್ತಿರುವ 20 ಪಾರ್ಕ್‌ಗಳು ಕೈಗಾರಿಕೆಗಳಿಗೆ ಅಗತ್ಯವಾಗಿರುವ ಮೂಲಸೌಲಭ್ಯಗಳಿಂದ ಸುಸಜ್ಜಿತವಾಗಿರಲಿದ್ದು, ಕೈಗಾರಿಕಾ ಟೌನ್‌ಶಿಪ್‌ಗಳ ಈ ಆದರ್ಶ ಮಾದರಿಯನ್ನು ದಕ್ಷಿಣದ ರಾಜ್ಯ ಸರ್ಕಾರಗಳು ಅಳವಡಿಸಿಕೊಳ್ಳಬೇಕು’ ಎಂದು ಕೇಂದ್ರ ಸರ್ಕಾರದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆಯ (DPIIT) ಕಾರ್ಯದರ್ಶಿ ಅಮರದೀಪ್ ಸಿಂಗ್ ಭಾಟಿಯಾ ಸಲಹೆ ನೀಡಿದ್ದಾರೆ.

ವಿಕಸಿತ ಭಾರತ್ @ 2047 (Viksit Bharat 2047) ಉಪಕ್ರಮದಡಿ ಶನಿವಾರ ಇಲ್ಲಿ ಏರ್ಪಡಿಸಲಾಗಿದ್ದ ಹೂಡಿಕೆದಾರರ ದುಂಡುಮೇಜಿನ ಸಮ್ಮೇಳನದಲ್ಲಿ (Round Table Conference) ಅವರು ಮಾತನಾಡಿದರು. ಇದನ್ನೂ ಓದಿ: ಅತ್ಯಾಚಾರ ಕೇಸಲ್ಲಿ ಪ್ರಜ್ವಲ್ ರೇವಣ್ಣಗೆ ಜೀವನಪರ್ಯಂತ ಜೈಲು – ಸಂತ್ರಸ್ತೆಗೆ 11 ಲಕ್ಷ ಪರಿಹಾರ

ದೇಶದ ಕೈಗಾರಿಕಾ ಪ್ರಗತಿಯ ಭವಿಷ್ಯದ ಯೋಜನೆ ರೂಪಿಸಲು ಕೈಗಾರಿಕೆ ಉದ್ದಿಮೆ ವಲಯ, ದಕ್ಷಿಣದ ರಾಜ್ಯ ಸರ್ಕಾರಗಳು ಮತ್ತು ನವೋದ್ಯಮಗಳು ವಿಚಾರ ಮಂಥನ ನಡೆಸಲು ಈ ಹೂಡಿಕೆದಾರರ ದುಂಡುಮೇಜಿನ ಸಮ್ಮೇಳನವು ಅವಕಾಶ ಒದಗಿಸಿತ್ತು. ಇದನ್ನೂ ಓದಿ: ಉತ್ತರಾಖಂಡದ ಚಮೋಲಿಯಲ್ಲಿ ಭೂಕುಸಿತ – ಹೈಡೆಲ್ ಪ್ರಾಜೆಕ್ಟ್ ಸೈಟ್‌ನಲ್ಲಿದ್ದ 12 ಕಾರ್ಮಿಕರಿಗೆ ಗಾಯ

Viksit Bharat @ 2047 1

 

‘ಎನ್‌ಐಸಿಡಿಸಿ ಅಭಿವೃದ್ಧಿಪಡಿಸುತ್ತಿರುವ ಕೈಗಾರಿಕಾ ಟೌನ್‌ಶಿಪ್‌ಗಳಲ್ಲಿ ಬರೀ ರಸ್ತೆಗಳಲ್ಲದೆ, ನೀರು, ವಿದ್ಯುತ್ ಪೂರೈಕೆ, ಒಳಚರಂಡಿ, ಸಾಮಾನ್ಯ ತ್ಯಾಜ್ಯ ನಿರ್ವಹಣಾ ಘಟಕ, ಎಲೆಕ್ಟ್ರಾನಿಕ್ಸ್ ವಲಯದ ಟೆಸ್ಟಿಂಗ್ ಸೇರಿದಂತೆ ಜವಳಿ ಮತ್ತಿತರ ಕೈಗಾರಿಕೆಗಳ ಪ್ರತ್ಯೇಕ ಹಾಗೂ ವಿಶಿಷ್ಟ ಅಗತ್ಯಗಳನ್ನು ಈಡೇರಿಸುವ ಮೂಲಸೌಲಭ್ಯಗಳನ್ನು ಒದಗಿಸಲಾಗುತ್ತಿದೆ’ ಎಂದರು. ಇದನ್ನೂ ಓದಿ: ತಾನು ಕಳ್ಳ ಪರರ ನಂಬ ಮಾನಸಿಕತೆಯಿರುವ ರಾಹುಲ್ ಗಾಂಧಿ ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳಲಿ: ಸಿ.ಟಿ ರವಿ

ಕರ್ನಾಟಕದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎನ್.ಸೆಲ್ವಕುಮಾರ್ ಮಾತನಾಡಿ, ಸುಲಲಿತ ಉದ್ಯಮ ನೀತಿಗೆ ಸಂಬಂಧಿಸಿದಂತೆ ರಾಜ್ಯದ ಕೈಗಾರಿಕಾ ನೀತಿಯಲ್ಲಿ ನಿರಂತರವಾಗಿ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಂಡು ಸರಳಗೊಳಿಸಲಾಗುತ್ತಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಏಕ ಗವಾಕ್ಷಿ ವ್ಯವಸ್ಥೆಗೆ ಕಾಯಕಲ್ಪ ನೀಡಲಾಗಿದೆ’ ಎಂದು ತಿಳಿಸಿದರು. ಇದನ್ನೂ ಓದಿ: ಮಲಯಾಳಂ ನಟ ಕಲಾಭವನ್ ನವಾಸ್ ಹೋಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆ – ಹೃದಯಾಘಾತ ಶಂಕೆ

‘ಎಲೆಕ್ಟ್ರಾನಿಕ್ ಸಿಟಿ ಅಸೋಸಿಯೇಷನ್ 1,000 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿ, ನಿರ್ವಹಿಸುತ್ತಿರುವ ಟೌನ್‌ಶಿಪ್ ಮಾದರಿ ಯೋಜನೆಯಾಗಿದ್ದು, ಅದನ್ನು ರಾಜ್ಯದಲ್ಲಿ ಎಲ್ಲೆಡೆ ಅಳವಡಿಸಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ಇದನ್ನೂ ಓದಿ: ತೇಜಸ್ವಿ ಯಾದವ್ ಆರೋಪ ಸುಳ್ಳು – ಕರಡು ಮತದಾರರ ಪಟ್ಟಿಯಲ್ಲಿ ಹೆಸರಿದೆ: ಚುನಾವಣಾ ಆಯೋಗ ಸ್ಪಷ್ಟನೆ

‘ಕೈಗಾರಿಕಾ ಪ್ರದೇಶಗಳಲ್ಲಿ ಸಂಗ್ರಹವಾಗುವ ತೆರಿಗೆಯನ್ನು ಸ್ಥಳೀಯ ಸಂಸ್ಥೆಗಳು ಕೈಗಾರಿಕೆಗಳಿಗೆ ಅಗತ್ಯವಾಗಿರುವ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಬಳಸದಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ವಿಶೇಷ ಹೂಡಿಕೆ ಪ್ರದೇಶಗಳಲ್ಲಿ (ಎಸ್‌ಐಆರ್)- ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯೇ (ಕೆಐಎಡಿಬಿ) ಏಪ್ರಿಲ್‌ನಿಂದ ತೆರಿಗೆ ಸಂಗ್ರಹಿಸಿ ಅದರಲ್ಲಿ ಶೇ 30ರಷ್ಟನ್ನು ಸ್ಥಳೀಯ ಸಂಸ್ಥೆಗಳಿಗೆ ಮರಳಿಸಿ, ಉಳಿದ ಶೇ 70ರಷ್ಟು ಮೊತ್ತವನ್ನು ಈ ‘ಎಸ್‌ಐಆರ್’ಗಳಲ್ಲಿ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಬಳಸಿಕೊಳ್ಳಲಿದೆ. ಇದನ್ನೂ ಓದಿ: ಕಾಂಗ್ರೆಸ್ ಹೋರಾಟಕ್ಕೆ ಟಕ್ಕರ್ – ಆ.5ರಂದು ಗಾಂಧಿ ಪ್ರತಿಮೆ ಬಳಿ ಬಿಜೆಪಿಯೂ ಪ್ರತಿಭಟನೆ: ಬಿವೈವಿ

ಸಿಐಐ, ಅಸೋಚಾಂ, ಫಿಕ್ಕಿ, ಕಾಸಿಯಾ, ಪೀಣ್ಯ, ದಾಬಸ್‌ಪೇಟೆ ವೈಟ್‌ಫೀಲ್ಡ್, ಹಾರೋಹಳ್ಳಿ, ವಸಂತನರಸಾಪುರ ವಾಣಿಜ್ಯೋದ್ಯಮ ಸಂಘಗಳು, ತುಮಕೂರು ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಮುಖ್ಯಸ್ಥರು ಉದ್ದಿಮೆದಾರರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಪ್ರಸ್ತಾಪಿಸಿದರು. ಇದನ್ನೂ ಓದಿ: ಬಡವರು, ಅಲ್ಪಸಂಖ್ಯಾತರನ್ನು ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆ – ಮತದಾರರ ಪರಿಷ್ಕರಣೆಗೆ ಖರ್ಗೆ ಆಕ್ಷೇಪ

ಸಮ್ಮೇಳನದಲ್ಲಿ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಜತ್ ಕುಮಾರ್ ಸೈನಿ, ತೆಲಂಗಾಣದ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿ ಸಂಜಯ್ ಕುಮಾರ್, ತಮಿಳುನಾಡಿನ ಹೂಡಿಕೆ ಉತ್ತೇಜನ ಮತ್ತು ವಾಣಿಜ್ಯ ಇಲಾಖೆಯ ಕಾರ್ಯದರ್ಶಿ ಥಿರು ವಿ ಅರುಣ್ ರಾಯ್, ಪುದುಚೆರಿಯ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ ಕಾರ್ಯದರ್ಶಿ ವಿಕ್ರಾಂತ್ ರಾಜಾ, ಕೇರಳದ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಪಿಎಂ ಮೊಹಮ್ಮದ್ ಹನೀಶ್, ಆಂಧ್ರಪ್ರದೇಶದ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ ಕಾರ್ಯದರ್ಶಿ ಡಾ.ಎನ್.ಯುವರಾಜ್, ಹಾಗೂ ಅಂಡಮಾನ್ ಮತ್ತು ನಿಕೋಬಾರ್ ಆಡಳಿತದ ಕೈಗಾರಿಕೆಗಳ ನಿರ್ದೇಶಕ ಅಜಿತ್ ಆನಂದ್, ಕೈಗಾರಿಕೆ ಇಲಾಖೆ ಆಯಕ್ತರಾದ ಗುಂಜನ್ ಕೃಷ್ಣ, ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಂ.ಮಹೇಶ್ ಭಾಗವಹಿಸಿದ್ದರು. ಇದನ್ನೂ ಓದಿ: ಜಮ್ಮು ಕಾಶ್ಮೀರ ಭೂಕುಸಿತ – ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌, ಪುತ್ರ ಸಾವು

TAGGED:Amardeep Singh BhatiyabengaluruDPIITNICDPViksit Bharat 2047ಅಮರದೀಪ್ ಸಿಂಗ್ ಭಾಟಿಯಾಎನ್‌ಐಸಿಡಿಪಿಡಿಪಿಐಐಟಿಬೆಂಗಳೂರುವಿಕಸಿತ ಭಾರತ್ @ 2047
Share This Article
Facebook Whatsapp Whatsapp Telegram

Cinema news

abhishek bigg boss
ಕ್ಯಾಪ್ಟನ್‌ ಅಭಿ ಬಿಗ್‌ ಬಾಸ್‌ ಮನೆಯಿಂದ ಔಟ್‌
Cinema Latest Main Post TV Shows
Aamir Khan Lokesh Kanagaraj
ಮನಸ್ತಾಪಕ್ಕೆ ಬ್ರೇಕ್ – ಆಮಿರ್ ಖಾನ್ ಜೊತೆ ಲೋಕೇಶ್ ಕನಕರಾಜ್ ಸಿನಿಮಾ ಫಿಕ್ಸ್
Cinema Latest Top Stories
gilli ashwini gowda dance
ಜುಂ ಜುಂ ಮಾಯಾ.. ಹಾಡಿಗೆ ಗಿಲ್ಲಿ-ಅಶ್ವಿನಿ ಗೌಡ ಸಖತ್‌ ಸ್ಟೆಪ್‌
Cinema Latest Top Stories TV Shows
pawan kalyan
ಮೋದಿ ಬಳಿಕ ಉಡುಪಿ ಶ್ರೀಕೃಷ್ಣ ಮಠಕ್ಕೆ ಇಂದು ಪವನ್ ಕಲ್ಯಾಣ್ ಭೇಟಿ – ಗೀತೋತ್ಸವ ಸಮಾರೋಪದಲ್ಲಿ ಭಾಗಿ
Cinema Districts Karnataka Latest Top Stories Udupi

You Might Also Like

koppal accident
Koppal

ಕೊಪ್ಪಳ: ಪ್ರೀ ವೆಡ್ಡಿಂಗ್‌ ಶೂಟ್‌ಗೆ ಹೋಗಿ ಜೋಡಿ ಅಪಘಾತದಲ್ಲಿ ದಾರುಣ ಸಾವು

Public TV
By Public TV
1 hour ago
Goa Night Club Fire Bengaluru Youth Death
Bengaluru City

ಗೋವಾ ನೈಟ್‌ಕ್ಲಬ್ ಅಗ್ನಿ ದುರಂತ – ಬೆಂಗಳೂರು ಮೂಲದ ಯುವಕ ಸಾವು

Public TV
By Public TV
2 hours ago
pawan kalyan udupi
Latest

ಜೆನ್‌ ಝೀ ಯುವಜನತೆ ಭಗವದ್ಗೀತೆ ಜೊತೆಗಿರಿಸಿಕೊಳ್ಳಿ: ಪವನ್‌ ಕಲ್ಯಾಣ್‌ ಕರೆ

Public TV
By Public TV
3 hours ago
KSCA Election Venkatesh Prasad
Bengaluru City

ಕೆಎಸ್‌ಸಿಎ ಚುನಾವಣೆ ಫಲಿತಾಂಶ ಪ್ರಕಟ – ಅಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಆಯ್ಕೆ

Public TV
By Public TV
3 hours ago
IndiGo 7
Latest

610 ಕೋಟಿ ರೂ. ಮೌಲ್ಯದ ಟಿಕೆಟ್‌ಗಳ ಹಣ ಮರುಪಾವತಿಸಿದ ಇಂಡಿಗೋ

Public TV
By Public TV
5 hours ago
maize
Bengaluru City

ಮೆಕ್ಕೆಜೋಳ ಖರೀದಿ ಪ್ರಮಾಣ 50 ಕ್ವಿಂಟಾಲ್‌ಗೆ ಹೆಚ್ಚಿಸಿದ ರಾಜ್ಯ ಸರ್ಕಾರ

Public TV
By Public TV
6 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?