‌’ವಿಕ್ರಾಂತ್‌ ರೋಣ’ ಖ್ಯಾತಿಯ ನೀತಾ ಅಶೋಕ್ ಮದುವೆ ಫೋಟೋಸ್‌

Public TV
2 Min Read
neetha 1 1

ಚಂದನವನದ ಚೆಂದದ ನಟಿ ನೀತಾ ಅಶೋಕ್  (Neetha Ashok) ಅವರು ಜುಲೈ 10ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರೀತಿಸಿದ ಹುಡುಗನ ಜೊತೆ ವೈವಾಹಿಕ ಬದುಕಿಗೆ ಕಾಲಿಡುವ ಮೂಲಕ ನಟಿ ಗುಡ್ ನ್ಯೂಸ್ ನೀಡಿದ್ದಾರೆ. ‘ವಿಕ್ರಾಂತ್ ರೋಣ’ ನಟಿಯ ಮದುವೆಯ (Wedding) ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಪಡ್ಡೆಹುಡುಗರ ನಿದ್ದೆಗೆಡಿಸಿದ ‘ನಾಗಿಣಿ 2’ ಖ್ಯಾತಿಯ ನಮ್ರತಾ

NEETHA ASHOK 2

‘ಯಶೋದ’ (Yashoda) ಸೀರಿಯಲ್ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ನಟಿ ನೀತಾ ಅಶೋಕ್ ಅವರು ನಾ ನಿನ್ನ ಬಿಡಲಾರೆ, ಸೇರಿದಂತೆ ಹಿಂದಿ ಸೀರಿಯಲ್‌ನಲ್ಲೂ ನಟಿಸಿದ್ದರು. ಬಳಿಕ ಕಿಚ್ಚ ಸುದೀಪ್ (Kiccha Sudeep) ನಟನೆಯ ‘ವಿಕ್ರಾಂತ್ ರೋಣ’ (Vikrant Rona)  ಸಿನಿಮಾದಲ್ಲಿ ನಿರೂಪ್ ಭಂಡಾರಿ ಜೋಡಿಯಾಗಿ ನೀತಾ ಮೋಡಿ ಮಾಡಿದ್ದರು. ನಟಿಯ ಮುದ್ದು ಮುಖ, ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ.

neetha ashok

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಏಕಾಏಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನೀತಾ ಅಶೋಕ್ ಅವರು ಆಮೇಲೆ ಬಹುಕಾಲದ ಪ್ರೀತಿ ಬಗ್ಗೆ ಹೇಳಿಕೊಂಡಿದ್ದರು. ಕಾಲೇಜಿನಿಂದಲೇ ಇವರಿಬ್ಬರು ಸ್ನೇಹಿತರಾಗಿದ್ದು, ಆಮೇಲೆ ಪ್ರೀತಿ ಹುಟ್ಟಿ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಅಂದಹಾಗೆ ಸತೀಶ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ನೀತಾ ಅವರು ಮೂಲತಃ ಉಡುಪಿಯವರು.

neetha 1

ಉಡುಪಿಯಲ್ಲಿ ನೀತಾ ಅಶೋಕ್ ಹಾಗೂ ಸತೀಶ್ ಮೆಸ್ತಾ ಅವರು ಕುಟುಂಬದ ಸಾಕ್ಷಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಮದುವೆ ಕೂಡ ಉಡುಪಿಯಲ್ಲಿ (Udupi) ನಡೆದಿದೆ. ನೀತಾ- ಸತೀಶ್ ಅವರು ಸರಳವಾಗಿ ಕುಟುಂಬಸ್ಥರು, ಆತ್ಮೀಯರ ಸಾಕ್ಷಿಯಾಗಿ 12.25ಕ್ಕೆ ಅಭಿಜಿತ್ ಲಗ್ನ ಮುಹೂರ್ತದಲ್ಲಿ ಮದುವೆ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆ ಬಗ್ಗೆ ಅಷ್ಟಾಗಿ ಮಾಹಿತಿ ಹಂಚಿಕೊಂಡಿಲ್ಲ. ಮುಂದಿನ ದಿನಗಳಲ್ಲಿ ನೀತಾ ಅವರು ಮದುವೆಯ ಫೋಟೋಗಳನ್ನು ಹಂಚಿಕೊಳ್ಳಬಹುದು. ಅಂದಹಾಗೆ ಈಗ ಸೋಶಿಯಲ್ ಮೀಡಿಯಾದಲ್ಲಿ ನೀತಾ ಅಶೋಕ್ ಅವರ ಮದುವೆ ಆಹ್ವಾನ ಪತ್ರಿಕೆ ಸದ್ದು ಮಾಡುತ್ತಿದೆ.

ಮದುವೆಯ ಬಳಿಕ ಮತ್ತೆ ನಟಿ ನೀತಾ ಅಶೋಕ್ ಬಣ್ಣ ಹಚ್ಚುತ್ತಾರಾ.? ಅಥವಾ ವೈವಾಹಿಕ ಜೀವನದ ಕಡೆ ಗಮನ ಕೊಡುತ್ತಾರಾ ಕಾದುನೋಡಬೇಕಿದೆ.

Share This Article