ಭಾವಿ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ‘ವಿಕ್ರಾಂತ್ ರೋಣ’ ನಟಿ

Public TV
1 Min Read
neetha ashok

‘ವಿಕ್ರಾಂತ್ ರೋಣ’ (Vikrant Rona) ನಟಿ ನೀತಾ ಅಶೋಕ್ (Neetha Ashok) ಅವರು ಎಂಗೇಜ್ ಆಗುವ ಮೂಲಕ ಪಡ್ಡೆ ಹುಡುಗರಿಗೆ ಬ್ಯಾಡ್ ನ್ಯೂಸ್ ಕೊಟ್ಟಿದ್ದರು. ಬಹುಕಾಲದ ಗೆಳೆಯ ಸತೀಶ್ (Satish) ಜೊತೆ ಎಂಗೇಜ್ ಆಗಿರುವ ನೀತಾ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾವಿ ಪತಿ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ.

neetha ashok

‘ಯಶೋದೆ’, ‘ನಾ ನಿನ್ನ ಬಿಡಲಾರೆ’ ಸೀರಿಯಲ್ ಮೂಲಕ ಮೋಡಿ ಮಾಡಿದ ಉಡುಪಿ (Udupi) ಮೂಲದ ನಟಿ ನೀತಾ ಓದಿದ್ದು ಎಂಬಿಎ, ಆದರೆ ಅಚಾನಕ್ ಆಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾರೆ. ಬಳಿಕ ಕಿಚ್ಚ ಸುದೀಪ್ (Kiccha Sudeep), ನಿರೂಪ್ ಭಂಡಾರಿ ಜೊತೆ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಮಿಂಚುತ್ತಾರೆ.

 

View this post on Instagram

 

A post shared by Neetha Ashok (@neethaashok01)

ಕಳೆದ ವರ್ಷ ಅಂತ್ಯದಲ್ಲಿ ಕುಟುಂಬಸ್ಥರು- ಆಪ್ತರ ಸಮ್ಮುಖದಲ್ಲಿ ನೀತಾ ಅವರು ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ತನ್ನೂರಿನ ಕ್ಲಾಸ್‌ಮೇಟ್ ಸತೀಶ್ ಜೊತೆ ಪ್ರೇಮಾಂಕುರವಾಗಿ, ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ಸೀತಾ ಮಾತೆಯಾಗಿ ಬಂದ ಕೃತಿ ಸನೋನ್- ಫಸ್ಟ್ ಲುಕ್ ಔಟ್

 

View this post on Instagram

 

A post shared by Neetha Ashok (@neethaashok01)

ಭಾವಿ ಪತಿ ಸತೀಶ್ ಜೊತೆಗಿನ ಎಂಗೇಜ್‌ಮೆಂಟ್ ಫೋಟೋ- ವೀಡಿಯೋವನ್ನ ನಟಿ ನೀತಾ ಹಂಚಿಕೊಂಡಿದ್ದಾರೆ. ಇಬ್ಬರೂ ಲೈಟ್ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ. ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ನೀತಾ ಜೋಡಿಗೆ ಫ್ಯಾನ್ಸ್‌ ಶುಭಹಾರೈಸುತ್ತಿದ್ದಾರೆ.

Share This Article