ಬೆಂಗಳೂರು: ರೆಬಲ್ ಸ್ಟಾರ್ ಅಂಬಿ ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ಪ್ರಯಾಣ ಮಾಡಿದ್ದಾರೆ. ಹಾಗಾದ್ರೆ ಅಂಬಿಯವರಿಗೆ ಶನಿವಾರ ಸಂಜೆ ಏನಾಯ್ತು..? ಅಂಬಿಯನ್ನ ಉಳಿಸಲು ಮಾಡಿದ ಪ್ರಯತ್ನ ಹೇಗಿತ್ತು..? ಈ ಬಗ್ಗೆ ಅಂಬಿಗೆ ಚಿಕಿತ್ಸೆ ನೀಡುತ್ತಿದ್ದ ವಿಕ್ರಂ ಆಸ್ಪತ್ರೆಯ ವೈದ್ಯ ಡಾ.ಸತೀಶ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.
ಗುರುವಾರ ಮತ್ತು ಶುಕ್ರವಾರ ಅಂಬರೀಶ್ ಅವರನ್ನು ಪರೀಕ್ಷೆ ಮಾಡಿದ್ದೆ. ವಾತಾವರಣದಿಂದಾಗಿ ಅವರಿಗೆ ಕೆಮ್ಮು, ಕಫ ಸ್ವಲ್ಪ ಜೋರಾಗಿತ್ತು. ಹೀಗಾಗಿ ಅದಕ್ಕೆ ತಕ್ಕಂತೆ ನಾನು ಚಿಕಿತ್ಸೆ ನೀಡಿದ್ದೆ.
ಶನಿವಾರ ಸಂಜೆ ಮನೆಯಲ್ಲಿ ಅವರ ರೂಮಿಗೆ ಮಲಗಲು ಹೋಗುವ ಸಂದರ್ಭದಲ್ಲಿ ಸಡನ್ ಆಗಿ ಆಕ್ಸಿಜನ್ ಕಡಿಮೆಯಾಗಿ ಹೃದಯಾಘಾತವಾಯಿತು. ಈ ವೇಳೆ ಅವರ ಮನೆಯವರು ನನಗೆ ಕರೆ ಮಾಡಿದ್ರು. ಜೋರಾಗಿ ಅಳೋದು ಕೇಳಿತ್ತು. ಇದರಿಂದ ಗಾಬರಿಗೊಂಡ ನಾನು ಅಲ್ಲೆ ಒಬ್ಬರು ಒಳ್ಳೆಯ ನರ್ಸ್ ಇರುವುದು ನೆನಪಾಯ್ತು. ಅವನಿಗೆ 2 ವರ್ಷದಿಂದ ಅಂಬರೀಶ್ ಆರೋಗ್ಯದ ಬಗ್ಗೆ ತಿಳಿದಿದೆ. ಆದುದರಿಂದ ನಾನು ಕೂಡಲೇ ಅವನಿಗೆ ಫೋನ್ ಕೊಡಿ ಅಂತ ಹೇಳಿದೆ.
ಅವನ ಜೊತೆ ಮಾತನಾಡಿ ಮನೆಯಲ್ಲಿ 2 ಆಕ್ಸಿಜನ್ ಇದೆ. ಎಲ್ಲಾ ಆಕ್ಸಿಜನ್ ನನ್ನು ಜಾಸ್ತಿ ಮಾಡು. ಹಾಗೆಯೇ ಹೃದಯಘಾತವಾದ ಕೂಡಲೇ ಮಾಡುವ ಮಸಾಜ್ ಮಾಡು. ಆಂಬುಲೆನ್ಸ್ ನಾನು ಕಳುಹಿಸಿಕೊಡುತ್ತೇನೆ. ನೀನೇನು ಯೋಚನೆ ಮಾಡಬೇಡ ಇಷ್ಟು ಮಾಡು. ಉಳಿದದ್ದನ್ನು ನಾನು ನೋಡಿಕೊಳ್ಳುತ್ತೇನೆ ಅಂತ ಸೂಚಿಸಿದೆ.
ನಾನು ಬರೋದ್ರೊಳಗೆ ಹೃದಯಾಘಾತವಾಗಿತ್ತು. ಬಂದಾಗ ಹಾರ್ಟ್ ಬೀಟಿಂಗ್, ಬ್ಲಡ್ ಫ್ರೆಶರ್, ಪಲ್ಸ್, ಪ್ರಜ್ಞಾಹೀನರಾಗಿದ್ದರು. ನಮ್ಮ ಆಸ್ಪತ್ರೆಯಿಂದ ಅವರ ಮನೆಗೆ ಹೋಗೋಕೆ 5 ನಿಮಿಷ ಬೇಕು. ಅವರಿಗೆ ಹೃದಯಾಘಾತವಾಗಿ ಸುಮಾರು 10ರಿಂದ 15 ನಿಮಿಷ ಆಗಿರಬಹುದು. ಹೀಗಾದಾಗ ಸರಿ ಮಾಡುವುದು ಕಷ್ಟವಾಗುತ್ತದೆ. ಮನೆಯಲ್ಲಂತೂ ಸಾಧ್ಯವೇ ಇಲ್ಲ. ಆಸ್ಪತ್ರೆಯಲ್ಲೂ ಹೀಗಾದಾಗ ಕೆಲವು ಬಾರಿ ಕಷ್ಟ ಆಗುತ್ತದೆ. ಇದೇ ಅವರಲ್ಲಿ ಕೊನೆಯ ಬಾರಿ ಆದ ಘಟನೆ ಅಂತ ಅವರು ಹೇಳಿದ್ರು.
ಹೃದಯಾಘಾತವಾಗಿ ಸುಮಾರು 1 ಗಂಟೆ ಆದ ಬಳಿಕ ಅಂಬರೀಶ್ ನಿಧನರಾಗಿದ್ದಾರೆ ಅಂತ ಘೋಷಣೆ ಮಾಡಿದ್ದೇವೆ ಅಂತ ಅವರು ಅಂಬಿಯ ಕೊನೆಯ ಕ್ಷಣಗಳನ್ನು ಮೆಲುಕು ಹಾಕಿದ್ರು.
https://www.youtube.com/watch?v=k3Fm7XpZxlE
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv