ನಾಲ್ಕು ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿರುವ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ರಿಲೀಸ್ ಆದ ನಾಲ್ಕೇ ದಿನಕ್ಕೆ 175 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಕರ್ನಾಟಕದಲ್ಲೂ ಅದು ದಾಖಲೆಯ ಮೊತ್ತವನ್ನೇ ಕಲೆಹಾಕಿದೆಯಂತೆ. ದನ್ನೂ ಓದಿ: ಡೊಳ್ಳು ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ : ದಾಖಲೆಯ ರೀತಿಯಲ್ಲಿ ಪ್ರಶಸ್ತಿ ಪಡೆದ ಪವನ್ ಒಡೆಯರ್
ದಕ್ಷಿಣದ ವಿಕ್ರಮ್ ಸಿನಿಮಾ ಬಾಲಿವುಡ್ ನ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಏಕಕಾಲಕ್ಕೆ ಬಿಡುಗಡೆ ಆಗಿದ್ದವು. ಪೃಥ್ವಿರಾಜ್ ಸಿನಿಮಾವನ್ನು ಪ್ರೇಕ್ಷಕರು ಕೈ ಹಿಡಿಯದೇ ಇರುವ ಕಾರಣಕ್ಕಾಗಿ ವಿಕ್ರಮ್ ಲುಕ್ ಡಬಲ್ ಆಗಿ ಬದಲಾಗಿದೆ. ಹಾಗಾಗಿ ಅತೀ ವೇಗದಲ್ಲೇ ವಿಕ್ರಮ್ ಸಿನಿಮಾ ಇನ್ನೂರು ಕೋಟಿ ಕ್ಲಬ್ ಕೂಡ ತಲುಪಲಿದೆ. ಕೇವಲ ಬಾಕ್ಸ್ ಆಫೀಸ್ ಮಾತ್ರವಲ್ಲ, ಸಿನಿಮಾ ಮೇಕಿಂಗ್ ಬಗ್ಗೆ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನೂ ಓದಿ : Exclusive – ವಾಣಿಜ್ಯ ಮಂಡಳಿಯಲ್ಲಿ ಕೋಟ್ಯಂತರ ದುರುಪಯೋಗ? : ರಾಜೇಂದ್ರ ಸಿಂಗ್ ಬಾಬು ಹೇಳಿದ್ದೇನು?
ವಿಶ್ವದಾದ್ಯಂತ ನಾಲ್ಕು ದಿನಕ್ಕೆ 175 ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ನಿಂದ ಹಣ ಹರಿದು ಬಂದಿದ್ದರೆ, ಕರ್ನಾಕದಲ್ಲೇ 15 ಕೋಟಿ ಕಲೆಕ್ಷನ್ ಆಗಿದೆ ಎನ್ನುವ ಮಾಹಿತಿ ಇದೆ. ದಿನದಿಂದ ದಿನಕ್ಕೆ ನೋಡುಗರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುತ್ತಿದೆ ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ. ಅತ್ತ ಅಕ್ಷಯ್ ಕುಮಾರ್ ನಟನೆಯ ಸಾಮ್ರಾಟ್ ಪೃಥ್ವಿರಾಜ್ ಬಹುತೇಕ ಕಡೆ ನೆಲಕಚ್ಚಿರುವುದರಿಂದ ವಿಕ್ರಮ್ ಓಟಕ್ಕೆ ಸುಲಭ ದಾರಿಯೂ ಸಿಕ್ಕಂತಾಗಿದೆ.