ಬಾಲಿವುಡ್ ಚಿತ್ರರಂಗಕ್ಕೆ ದಕ್ಷಿಣದ ಸಿನಿಮಾಗಳು ಪೈಪೋಟಿ ಕೊಡುತ್ತಲೇ ಬಂದಿದೆ. ಬಾಹುಬಲಿ, ಪುಷ್ಪ, ಕೆಜಿಎಫ್ 2 ಭರ್ಜರಿ ಸಕ್ಸಸ್‌ನಿಂದ ಬಾಲಿವುಡ್ ಮಂಕಾಗಿದೆ. ಹಿಂದಿ ಚಿತ್ರರಂಗಕ್ಕೆ ಇದೀಗ ದಕ್ಷಿಣದ `ವಿಕ್ರಮ್’ ಸಿನಿಮಾ ಬಿಗ್ ಫೈಟ್ ಕೊಡುತ್ತಿದೆ. ರಿಲೀಸ್ ಆದ ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ಬಾಕ್ಸಾಫೀಸ್‌ನಲ್ಲಿ `ವಿಕ್ರಮ್’ ಚಿತ್ರ ಹೊಸ ದಾಖಲೆ ಬರೆದಿದೆ.
Advertisement
ಕಾಲಿವುಡ್ ಸ್ಟಾರ್ ಕಮಲ್ ಹಾಸನ್ `ವಿಕ್ರಮ್’ ಚಿತ್ರದ ಮೂಲಕ ಸ್ಟ್ರಾಂಗ್ ಆಗಿ ಕಮ್ ಬ್ಯಾಕ್ ಮಾಡಿದ್ದಾರೆ. ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತು ಕಮಲ್ ಹಾಸನ್ ಕಾಂಬಿನೇಷನ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡುತ್ತಿದೆ. ರಿಲೀಸ್ ಆದ ಎರಡೇ ದಿನಕ್ಕೆ 100 ಕೋಟಿ ಕಲೆಕ್ಷನ್ ಮಾಡಿ, ಧೂಳೆಬ್ಬಿಸಿದೆ. ಜೂನ್ 3ರಂದು ರಿಲೀಸ್ ಆದ ವಿಕ್ರಮ್ ಥಿಯೇಟರ್‌ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ.
Advertisement
In 2 days, #Vikram crosses the ₹ 100 Cr Mark at the WW Box Office..
Phenomenal.. ????@ikamalhaasan @VijaySethuOffl #FahadhFaasil @Suriya_offl @Dir_Lokesh @anirudhofficial @RKFI @turmericmediaTM
— Ramesh Bala (@rameshlaus) June 5, 2022
Advertisement
ಲೋಕೇಶ್ ಕನಗರಾಜ್ ಅವರು ಈ ಬಾರಿ ಒಂದು ರೀವೆಂಜ್ ಸ್ಟೋರಿ ತೋರಿಸಿದ್ದಾರೆ. ಕಮಲ್ ಜತೆ ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಜೀವತುಂಬಿದ್ದಾರೆ. ಹಿಂದಿಯ `ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ಸೆಡ್ಡು ಹೊಡೆದು ವಿಕ್ರಮ್ ಸಿನಿಮಾ 100 ಕೋಟಿ ಕ್ಲಬ್ ಮಾಡಿದೆ. ಇದನ್ನೂ ಓದಿ: ಬೇಬಿ ಶವರ್‌ನಲ್ಲಿ ಮಿಂಚಿದ ಪ್ರಣೀತಾ ಸುಭಾಷ್
Advertisement
ಒಟ್ಟು ಬಾಕ್ಸಾಫೀಸ್‌ನಲ್ಲಿ 62 ಕೋಟಿ ಬಾಚಿತ್ತು. ಇದೀಗ ಶನಿವಾರದ ಕಲೆಕ್ಷನ್ ಸೇರಿ 100 ಕೋಟಿ ಗಳಿಕೆ ಮಾಡಿದೆ. ಇನ್ನು ಮುಂಬರುವ ದಿನಗಳಲ್ಲಿ ಕಮಲ್ ಹಾಸನ್ ಸಿನಿಮಾ ಯಾವ ರೀತಿ ಕಲೆಕ್ಷನ್ ಮಾಡಲಿದೆ ಕಾದುನೋಡಬೇಕಿದೆ.