ಪಾ ರಂಜಿತ್ (Pa Ranjith) ನಿರ್ದೇಶನದಲ್ಲಿ ಮೂಡಿ ಬಂದ ಚಿಯಾನ್ ವಿಕ್ರಮ್ (Chiyaan Vikram) ನಟನೆಯ ‘ತಂಗಲಾನ್’ (Thangalaan) ಸಿನಿಮಾವು ಆ.15ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆಯುತ್ತಿದೆ. ಇದರ ನಡುವೆ ಸಿನಿಮಾ ಸಮಾರಂಭವೊಂದರಲ್ಲಿ, ‘ತಂಗಲಾನ್ 2’ ಬರೋದಾಗಿ ಖುದ್ದು ಚಿಯಾನ್ ವಿಕ್ರಮ್ ತಿಳಿಸಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಚಿರಂಜೀವಿ ಚಿತ್ರ ರಿಜೆಕ್ಟ್ ಮಾಡಿದ ಶ್ರೀಲೀಲಾ
ಪಾ ರಂಜಿತ್‌ಗೆ ನನ್ನ ಮೇಲೆ ಅಪಾರ ನಂಬಿಕೆ ಇತ್ತು, ಇದರಿಂದಾಗಿ ಈ ಚಿತ್ರ ಸಾಧ್ಯವಾಯಿತು. ‘ತಂಗಲಾನ್’ ಮುಂದಿನ ಭಾಗಕ್ಕೆ ಅರ್ಹವಾಗಿದೆ ಎಂದು ಸೀಕ್ವೆಲ್ ಬರೋದಾಗಿ ತಿಳಿಸಿದ್ದಾರೆ. ನೀವೆಲ್ಲರೂ ತುಂಬಾ ಇಷ್ಟಪಟ್ಟಿದ್ದೀರಿ. ‘ತಂಗಲಾನ್’ ಬಾಕ್ಸ್ ಆಫೀಸ್‌ನಲ್ಲಿ ಉತ್ತಮವಾಗಿ ಗಳಿಕೆ ಮಾಡುತ್ತಿದೆ ಎಂದಿದ್ದಾರೆ. ಈ ವೇಳೆ, ‘ಪೊನ್ನಿಯಿನ್ ಸೆಲ್ವನ್’ ನಾಲ್ಕು ರಾಷ್ಟ್ರೀಯ ಪ್ರಶಸ್ತಿ ಗೆದ್ದಿದ್ದಕ್ಕೆ ಖುಷಿ ಇದೆ ಎಂದು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ, ನಟನೆ ವಿಚಾರಕ್ಕೆ ಬಂದರೆ ಚಿಯಾನ್ ವಿಕ್ರಮ್ ನಟ ರಾಕ್ಷಸನೇ ಸರಿ. ‘ತಂಗಲಾನ್’ ಆಗಿ ನಟನ ಲುಕ್, ಗೆಟಪ್ ಹುಬ್ಬೇರಿಸುವಂತಿದೆ. ಡಿಫರೆಂಟ್ ಗೆಟಪ್‌ಗಳಲ್ಲಿ ವಿಕ್ರಮ್ ಕಾಣಿಸಿಕೊಂಡಿದ್ದಾರೆ. ‘ಅನ್ನಿಯನ್’, ‘ಐ’ ಸಿನಿಮಾಗಳ ಅಭಿನಯ ನೆನಪಿಸುವಂತಿದೆ. ಇನ್ನು ಗಂಗಮ್ಮ ಆಗಿ ಪಾರ್ವತಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆರತಿ ಆಗಿ ಮಾಳವಿಕಾ ಮೋಹನನ್ ಆ್ಯಕ್ಷನ್ ಸೀನ್‌ಗಳಲ್ಲಿ ಅಬ್ಬರಿಸಿದ್ದಾರೆ.