Bengaluru CityCinemaDistrictsKarnatakaLatestMain PostSandalwood

ಡಾ.ರಾಜ್ ಮೊಮ್ಮಗಳಿಗೆ `ಕೆಂಡಸಂಪಿಗೆ’ ಹೀರೋ ಆ್ಯಕ್ಷನ್ ಕಟ್

`ಕೆಂಡಸಂಪಿಗೆ’ ಮತ್ತು `ಕಾಲೇಜ್ ಕುಮಾರ’ ಚಿತ್ರದ ಯಶಸ್ಸಿನ ನಂತರ ನಟ ವಿಕ್ಕಿ ವರುಣ್ `ಕಾಲಾಪತ್ಥರ್’ ಔಟ್ ಆಂಡ್ ಔಟ್ ಕರ್ಮಷಿಯಲ್ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದ ಮೂಲಕ ವಿಕ್ಕಿ ವರುಣ್ ನಿರ್ದೇಶಕನಾಗಿ ಭಡ್ತಿ ಪಡೆದಿದ್ದಾರೆ. ಇದೀಗ ಚಿತ್ರದ ಫಸ್ಟ್ ಲುಕ್ ರಿವೀಲ್ ಆಗಿದೆ.

ಇವರೆಗೂ ನಾಯಕನಾಗಿ ಗುರುತಿಸಿಕೊಂಡಿದ್ದ ವಿಕ್ಕಿ ವರುಣ್ ನಿರ್ದೇಶಕನಾಗಿ `ಕಾಲಾಪತ್ಥರ್’ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇದೀಗ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಿದೆ. ಡಿಫರೆಂಟ್ ಗೆಟಪ್‌ನಲ್ಲಿ ವಿಕ್ಕಿ ವರುಣ್ ಕಾಣಿಸಿಕೊಂಡಿದ್ದಾರೆ. ವಿಕ್ಕಿ ವರುಣ್ ಸಖತ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೈಟಲ್ ಮತ್ತು ವಿಕ್ಕಿ ಲುಕ್ ನೋಡಿದ್ರೆ ಮತ್ತಷ್ಟು ಕುತೂಹಲ ಹೆಚ್ಚಿಸುತ್ತಿದೆ.

ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಅರ್ಪಣೆಯಲ್ಲಿ, ಭುವನ್ ಮೂವೀಸ್ ಪರ್ಪಲ್ ಫೆದರ್ಸ್ ನಿರ್ಮಾಣದಲ್ಲಿ `ಕಾಲಾಪತ್ಥರ್’ ಚಿತ್ರ ಮೂಡಿ ಬರುತ್ತಿದ್ದು, ಇದೊಂದು ಪಕ್ಕಾ ಕರ್ಮಷಿಯಲ್ ಆಕ್ಷನ್ ಕಂಟೆAಟ್ ಜತೆ ಮುದ್ದಾದ ಲವ್ ಸ್ಟೋರಿಯನ್ನ ನೋಡಬಹುದಾಗಿದೆ. ಮಧ್ಯಮ ವರ್ಗದ ಹುಡುಗನೊಬ್ಬ ಸಡನ್ ಆಗಿ ಸ್ಟಾರ್ ಆಗಿ ಮಿಂಚಿದ್ರೆ, ಆ ಸ್ಟಾರ್ ಗಿರಿ ಹೇಗೆ ನಿರ್ವಹಿಸುತ್ತಾನೆ ಏನೆಲ್ಲಾ ಕಷ್ಟಗಳನ್ನ ಎದುರಿಸುತ್ತಾನೆ ಎಂಬುದೇ ಕಥೆಯಾಗಿದ್ದು, ವಿಕ್ಕಿ ವರುಣ್ ನಾಯಕಿಯಾಗಿ ಧನ್ಯ ರಾಮ್‌ಕುಮಾರ್ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ವರನಟ ಡಾ. ರಾಜ್‌ಕುಮಾರ್ ಅವರ ಹುಟ್ಟು ಹಬ್ಬದಂದು ನಾಯಕಿ ಧನ್ಯ ಪಾತ್ರದ ಲುಕ್ ಕೂಡ ರಿವೀಲ್ ಆಗಲಿದೆ. ಇದನ್ನೂ ಓದಿ: ಶೂಟಿಂಗ್ ವೇಳೆ ಅವಘಡ, ನಟ ಧನ್ವೀರ್ ಗೌಡ ಕೈಗೆ ಪೆಟ್ಟು

`ಕಾಲಾಪತ್ಥರ್’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೇ ಜೂನ್‌ಗೆ ತೆರೆಗೆ ಅಬ್ಬರಿಸಲಿದೆ. ಸತ್ಯಪ್ರಕಾಶ್ ಬರೆದಿರುವ ಗಟ್ಟಿ ಕಥೆಯ ಮೂಲಕ ಕಮಾಲ್ ಮಾಡಲು ವಿಕ್ಕಿ ವರುಣ್ ಮತ್ತು ಸ್ಯಾಂಡಲ್‌ವುಡ್ ಬ್ಯೂಟಿ ಧನ್ಯ ರಾಮ್‌ಕುಮಾರ್ ಬರುತ್ತಿದ್ದಾರೆ. ಈ ಹೊಸ ಜೋಡಿಯ ಕಥೆ ನೋಡಲು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Leave a Reply

Your email address will not be published.

Back to top button