ಇದೇ ಸಿನಿ ಶುಕ್ರವಾರ ತೆರೆಗೆ ಬರಲಿದೆ ಬಹು ನಿರೀಕ್ಷಿತ ‘ಕಾಣದಂತೆ ಮಾಯವಾದನು’ ಚಿತ್ರ

Public TV
1 Min Read
Kaanadante Maayavadanu

ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿರುವ ‘ಕಾಣದಂತೆ ಮಾಯವಾದನು’ ಚಿತ್ರ ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡಿದೆ. ನಿರ್ದೇಶಕರಾಗಿದ್ದ ವಿಕಾಸ್ ನಟನಾಗಿ ಗಾಂಧಿನಗರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ವಿಕಾಸ್, ಸಿಂಧು ಲೋಕನಾಥ್ ಜೋಡಿಯಾಗಿ ನಟಿಸಿರುವ ಚಿತ್ರದ ಟ್ರೈಲರ್ ಗೆ ಸಿನಿ ಪ್ರೇಕ್ಷಕ ಕ್ಲೀನ್ ಬೋಲ್ಡ್ ಆಗಿದ್ದು, ಚಿತ್ರ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.

kanadante

ಚಿತ್ರದಲ್ಲಿ ಲವರ್ ಬಾಯ್, ಆ್ಯಕ್ಷನ್ ಹೀರೋ ಆಗಿ ಮಿಂಚಿರುವ ವಿಕಾಸ್‍ಗೆ ಈ ಚಿತ್ರವನ್ನು ಒಪ್ಪಿಕೊಳ್ಳಲು ಕಥೆಯೇ ಪ್ರೇರಣೆ. ರಾಜ್ ಪಾತ್ತಿಪಾಟಿ ಚಿತ್ರದ್ರ ಸೂತ್ರಧಾರ. ಇನೋಸೆಂಟ್ ಪ್ರೇಮಕಥೆ ಚಿತ್ರದಲ್ಲಿದ್ದು, ಅದ್ರ ಜೊತೆಗೆ ಹಾರಾರ್, ಸಸ್ಪೆನ್ಸ್ ಹಾಗೂ ಥ್ರಿಲ್ ಕೊಡೊ ಎಲಿಮೆಂಟ್‍ಗಳು ಚಿತ್ರದಲ್ಲಿವೆ. ಒಟ್ಟಿನಲ್ಲಿ ಸಿನಿಮಾ ನೋಡಲು ಚಿತ್ರಮಂದಿರದ ಒಳಗೆ ಹೋದ ಪ್ರೇಕ್ಷಕರನಿಗೆ ಮನೋರಂಜನೆಯ ಮಹಾಪೂರದ ಜೊತೆ ಬೇರೆಯದ್ದೆ ಪ್ರಪಂಚ ಕಾಣಸಿಗಲಿದೆ ಎನ್ನುವುದು ಚಿತ್ರತಂಡದ ಮಾತು.

Kanadante

ಕಥೆ ಈ ಚಿತ್ರದ ಜೀವಾಳವಾದರೆ ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಚಿತ್ರದ ಮತ್ತೊಂದು ಶಕ್ತಿ. ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದು ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಗಾನಪ್ರಿಯರ ಮನಸೆಳೆದಿದೆ. ಚಿತ್ರದ ಮೆಲೋಡಿ ಹಾಡೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದನಿಯಾಗಿದ್ದು ಈ ಹಾಡು ಸಖತ್ ವೈರಲ್ ಆಗೋದ್ರ ಜೊತೆ ಎಲ್ಲರ ಫೇವರೇಟ್ ಆಗಿದೆ.

ಚಿತ್ರದ ಪ್ರತಿ ತುಣುಕಿಗಳು ಸೋಶಿಯಲ್ ಮೀಡಿಯಾದಲ್ಲಿ ಬೊಂಬಾಟ್ ರೆಸ್ಪಾನ್ಸ್ ಪಡೆದುಕೊಂಡಿದ್ದು ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಅಚ್ಯುತ್ ಕುಮಾರ್, ಭಜರಂಗಿ ಲೋಕಿ, ರಾಘವ್ ಉದಯ್ ಚಿತ್ರದ ತಾರಾಬಳಗದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *