ದಳಪತಿ ವಿಜಯ್ (Dalpati Vijay) ಕೊನೆಯ ಚಿತ್ರ ಎನ್ನಲಾದ `ದಳಪತಿ 69′ ಘೋಷಣೆಯ ವೀಡಿಯೋ ವೈರಲ್ ಆಗಿದೆ. ಹೆಚ್ ವಿನೋದ್ ನಿರ್ದೇಶನದ ಈ ಚಿತ್ರವನ್ನ ವಿಜಯ್ ಸಿನಿಮಾ ಕರಿಯರ್‌ನ ಕೊನೆಯ ಚಿತ್ರ ಎನ್ನಲಾಗುತ್ತೆ. ಯಾಕೆಂದರೆ ರಾಜಕೀಯ ಪ್ರವೇಶಿಸಿರುವ ವಿಜಯ್ ಮುಂದಿನ ದಿನಗಳಲ್ಲಿ ಅದರತ್ತ ಸಂಪೂರ್ಣ ಗಮನ ಕೊಡಲಿದ್ದಾರಂತೆ. ಇದೀಗ ದಳಪತಿ 69 ಚಿತ್ರ ಸ್ಯಾಂಡಲ್‌ವುಡ್‌ಗೂ ಕನೆಕ್ಟ್ ಆಗಿದ್ದು ಈ ಚಿತ್ರವನ್ನ ಕನ್ನಡದ `ಕೆವಿಎನ್ ಸಂಸ್ಥೆ’ ನಿರ್ಮಿಸಲಿದೆ.
Advertisement
`ದಳಪತಿ 69′ ಮೇಲೆ ಬಲು ನಿರೀಕ್ಷೆ ಇರೋದ್ರಿಂದ ಭರ್ತಿ 500 ಕೋಟಿಯಲ್ಲಿ ಚಿತ್ರ ತಯಾರಾಗುತ್ತಿದೆ. ತಮಿಳು ಚಿತ್ರಪ್ರೇಮಿಗಳ ಪಾಲಿನ ಮಾಸ್‌ಮ್ಯಾನ್ ಇನ್ಮುಂದೆ ಬಣ್ಣ ಹಚ್ಚೋದಿಲ್ಲ ಅನ್ನುವ ಕೊರಗಿನ ಮಧ್ಯೆ ದಳಪತಿ 69 ಮೇಲೆ ನಿರೀಕ್ಷೆಯಂತೂ ದುಪ್ಪಟ್ಟಾಗಿದೆ. ಈ ನಡುವೆ ಇನ್ನೊಂದು ವಿಷಯ ಭಾರೀ ಆಶ್ಚರ್ಯ ಹುಟ್ಟಿಸಿದೆ. ಅದುವೇ ವಿಜಯ್ ರೆಮನ್ಯುರೇಶನ್.
Advertisement
Advertisement
ದಳಪತಿ 69 ಚಿತ್ರಕ್ಕೆ ವಿಜಯ್ ಭರ್ತಿ 275 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾಂತೆ. ಚಿತ್ರದ ಬಜೆಟ್‌ನ ಅರ್ಧ ಭಾಗದಷ್ಟು ವಿಜಯ್ ಸಂಭಾವನೆ ಇರುತ್ತದೆ ಎಂದು ಸುದ್ದಿಯಾಗಿದೆ. ಹಿಂದಿನ `ದಿ ಗೋಟ್’ ಚಿತ್ರಕ್ಕೆ ವಿಜಯ್ ಬರೋಬ್ಬರಿ 200 ಕೋಟಿ ಸಂಭಾವನೆ ಪಡೆದಿದ್ದರು ಎಂಬ ವದಂತಿ ಇದೆ. ಈ ಬೆನ್ನಲ್ಲೇ ಅದಕ್ಕಿಂತಲೂ ಹೆಚ್ಚು 275 ಕೋಟಿ ಹಣ ಸಂಭಾವನೆ ರೂಪದಲ್ಲಿ ವಿಜಯ್ ಪಡೆಯಲಿದ್ದಾರೆ ಎಂಬುದೇ ಕುತೂಹಲದ ಸಂಗತಿ.
Advertisement
2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ವಿಜಯ್ ಅಣಿಯಾಗುತ್ತಿದ್ದಾರೆ. ಸ್ವಂತ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಎಂಟ್ರಿಯಾಗಿದ್ದಾರೆ. ಲೋಗೋ ಮತ್ತಿತರ ಕೆಲಸಗಳನ್ನ ಮಾಡಿಕೊಂಡು ಬಂದಿದ್ದಾರೆ. ಈ ನಡುವೆ ವರ್ಷ ಕಳೆಯುವದರೊಳಗೆ ವಿಜಯ್ ಒಪ್ಪಿಕೊಂಡ 69ನೇ ಚಿತ್ರ ಮುಗಿಸ ಕೊಡಬೇಕಾಗಿದೆ. ಹೀಗಾಗಿ ಶೀಘ್ರದಲ್ಲೇ ದಳಪತಿ 69 ಚಿತ್ರೀಕರಣ ಶುರುವಾಗಲಿದೆ ಎಂಬ ಮಾಹಿತಿ ಇದೆ. ಇನ್ನು ವಿಜಯ್ ಪಡೆದುಕೊಳ್ತಿರುವ 275ಕೋಟಿ ಸಂಭಾವನೆ ಸುದ್ದಿಯಂತೂ ಇನ್ನುಳಿದ ಸ್ಟಾರ್ ನಟರಿಗೆ ಆಶ್ಚರ್ಯ ಮೂಡಿಸಿದೆ. ಇಲ್ಲಿವರೆಗೆ 200 ಕೋಟಿ ಸಂಭಾವನೆಯನ್ನ ಭಾರತದಲ್ಲಿ ಸ್ಟಾರ್ ನಟರು ನೇರವಾಗಿ ಪಡೆದಿರಲಿಲ್ಲ. ಶೇರ್ ರೂಪದಲ್ಲಿ ಬಂದಿರೋ ಆದಾಯದಲ್ಲಿ ಲೆಕ್ಕ ಚುಕ್ತಾ ಮಾಡಿಕೊಳ್ತಿದ್ದರು. ಅದನ್ನೇ ಸಂಭಾವನೆಯಾಗಿ ಲಾಭ ಗಳಿಸಿಸುತ್ತಿದ್ದ ಹಲವರು ನಟರ ಉದಾಹರಣೆ ಇದೆ. ಆದರೆ ಈಗ ವಿಜಯ್ ಭರ್ತಿ 275 ಕೋಟಿ ಮೊತ್ತದ ರೂಪದಲ್ಲೇ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ವಿಷಯ ಭಾರೀ ಚರ್ಚೆಗೀಡುಮಾಡಿದೆ.