ಬೆಂಗಳೂರು: ನನ್ನನ್ನು ಮನೆಮಗನಂತೆ ಕಂಡು ತುಂಬುಹೃದಯದಿಂದ ಬರಮಾಡಿಕೊಂಡ ನಿಮ್ಮ ವಾತ್ಸಲ್ಯಕ್ಕೆ ಚಿರಋಣಿ ಎಂದು ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ವರುಣಾ ಜನತೆಗೆ ಹೇಳಿದ್ದಾರೆ.
ಕಳೆದೊಂದು ತಿಂಗಳಿನಿಂದ ವರುಣಾ ಕ್ಷೇತ್ರದ ಜನತೆ ತೋರುತ್ತಿರುವ ಅಪಾರ ಪ್ರೀತಿಗೆ ಮನಸೋತಿದ್ದೇನೆ. ಕ್ಷೇತ್ರದ ಜನರ ನೋವುಗಳಿಗೆ ಮುಂದೆಯೂ ನಾನು ಧ್ವನಿಯಾಗಿರುತ್ತೇನೆ. ನನ್ನ ಅಥವಾ ಪಕ್ಷದ ನಿರ್ಧಾರದಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
ವರುಣಾ ಕ್ಷೇತ್ರಕ್ಕೆ ನನ್ನನ್ನು ಅಭ್ಯರ್ಥಿ ಮಾಡಬೇಕೆಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಮಾಡಿದ್ದ ಎಲ್ಲ ಕಾರ್ಯಕರ್ತರು, ಸ್ಪರ್ಧಾಕಾಂಕ್ಷಿಗಳು ಹಾಗೂ ಮುಖಂಡರಿಗೆ ಕೃತಜ್ಞತೆಗಳು. ಪಕ್ಷದ ವರಿಷ್ಠರು ತೆಗೆದುಕೊಂಡಿರುವ ತೀರ್ಮಾನ ಅಂತಿಮವಾಗಿದ್ದು, ಅದಕ್ಕೆ ಬದ್ಧವಾಗಿದ್ದುಕೊಂಡು ವರುಣಾದ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ ಎಂದು ಹೇಳಿದ್ದಾರೆ.
ರಾಜ್ಯದ ಅಭಿವೃದ್ಧಿಗಾಗಿ ಶ್ರೀ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಿದೆ. ಇದೊಂದೇ ನಮ್ಮೆಲ್ಲರ ಗುರಿಯಾಗಿದ್ದು, ಇದಕ್ಕಾಗಿ ಒಗ್ಗಟ್ಟಿನಿಂದ ಶ್ರಮಿಸೋಣ. ಪಕ್ಷದ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರೋಣ. ಕಾರ್ಯಕರ್ತರು ಶಾಂತ ರೀತಿಯಲ್ಲಿ ಸಹಕರಿಸಬೇಕಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ ಎಂದು ವಿಜಯೇಂದ್ರ ಅವರು ಈ ಹಿಂದೆ ಕೂಡ ಟ್ವೀಟ್ ಮಾಡಿದ್ದರು.
ವರುಣಾ ಕ್ಷೇತ್ರಕ್ಕೆ ನನ್ನನ್ನು ಅಭ್ಯರ್ಥಿ ಮಾಡಬೇಕೆಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಮಾಡಿದ್ದ ಎಲ್ಲ ಕಾರ್ಯಕರ್ತರು, ಸ್ಪರ್ಧಾಕಾಂಕ್ಷಿಗಳು ಹಾಗೂ ಮುಖಂಡರಿಗೆ ಕೃತಜ್ಞತೆಗಳು. ಪಕ್ಷದ ವರಿಷ್ಠರು ತೆಗೆದುಕೊಂಡಿರುವ ತೀರ್ಮಾನ ಅಂತಿಮವಾಗಿದ್ದು, ಅದಕ್ಕೆ ಬದ್ಧವಾಗಿದ್ದುಕೊಂಡು ವರುಣಾದ ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸೋಣ.
— Vijayendra Yeddyurappa (@BYVijayendra) April 24, 2018
ಕಳೆದೊಂದು ತಿಂಗಳಿನಿಂದ ವರುಣಾ ಕ್ಷೇತ್ರದ ಜನತೆ ತೋರುತ್ತಿರುವ ಅಪಾರ ಪ್ರೀತಿಗೆ ಮನಸೋತಿದ್ದೇನೆ. ನನ್ನನ್ನು ಮನೆಮಗನಂತೆ ಕಂಡು ತುಂಬುಹೃದಯದಿಂದ ಬರಮಾಡಿಕೊಂಡ ನಿಮ್ಮ ವಾತ್ಸಲ್ಯಕ್ಕೆ ಚಿರಋಣಿ. ಕ್ಷೇತ್ರದ ಜನರ ನೋವುಗಳಿಗೆ ಮುಂದೆಯೂ ನಾನು ಧ್ವನಿಯಾಗಿರುತ್ತೇನೆ. ನನ್ನ ಅಥವಾ ಪಕ್ಷದ ನಿರ್ಧಾರದಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಿರಲಿ.
— Vijayendra Yeddyurappa (@BYVijayendra) April 24, 2018